ಭಾರತದವರಿಗೆ ಅಮೆರಿಕ ಎಚ್‌1ಬಿ ವೀಸಾ ಶಾಕ್‌!

Published : Apr 25, 2018, 07:51 AM IST
ಭಾರತದವರಿಗೆ ಅಮೆರಿಕ ಎಚ್‌1ಬಿ ವೀಸಾ ಶಾಕ್‌!

ಸಾರಾಂಶ

ಅಮೆರಿಕಕ್ಕೆ ಎಚ್‌1-ಬಿ ವೀಸಾದಡಿ ಬಂದು ನೆಲೆಸಿರುವವರ ಸಂಗಾತಿಗೆ ಅಮೆರಿಕದಲ್ಲಿ ನೌಕರಿ ಮಾಡಲು ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚಿಂತನೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ.

ವಾಷಿಂಗ್ಟನ್‌: ಅಮೆರಿಕಕ್ಕೆ ಎಚ್‌1-ಬಿ ವೀಸಾದಡಿ ಬಂದು ನೆಲೆಸಿರುವವರ ಸಂಗಾತಿಗೆ ಅಮೆರಿಕದಲ್ಲಿ ನೌಕರಿ ಮಾಡಲು ನೀಡಲಾಗಿರುವ ಪರವಾನಗಿಯನ್ನು ರದ್ದುಪಡಿಸುವ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಚಿಂತನೆ ಬಹುತೇಕ ಅಂತಿಮ ಹಂತಕ್ಕೆ ಬಂದಿದೆ. ಈ ವರ್ಷದ ಬೇಸಿಗೆಯ ಕೊನೆಯಲ್ಲಿ ಈ ಬಗ್ಗೆ ಆದೇಶ ಹೊರಡಿಸಲಾಗುವುದು ಎಂದು ಸಂಸದರಿಗೆ ವಲಸೆ ವಿಭಾಗದ ಉನ್ನತಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎಚ್‌1-ಬಿ ವೀಸಾದಾರರ ಸಂಗಾತಿಗಳು ಎಚ್‌-4 ವೀಸಾದಡಿ ಅಮೆರಿಕಕ್ಕೆ ಬಂದು ನೆಲೆಸಿದ್ದಾರೆ. 2005ರಲ್ಲಿ ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ ಇವರಿಗೂ ಕೆಲಸ ಮಾಡಲು ಪರವಾನಗಿ ನೀಡುವ ನಿರ್ಧಾರ ಕೈಗೊಳ್ಳಲಾಗಿತ್ತು. ಅದರಂತೆ ಸುಮಾರು 71000 ಎಚ್‌-4 ವೀಸಾದಾರರು ಅಮೆರಿಕದಲ್ಲಿ ನೌಕರಿ ಮಾಡುತ್ತಿದ್ದಾರೆ. ಇವರಲ್ಲಿ ಶೇ.93ರಷ್ಟುಮಂದಿ ಭಾರತೀಯರಾಗಿದ್ದು, ಶೇ.94ರಷ್ಟುಮಹಿಳೆಯರು ಎಂದು ಅಂಕಿಅಂಶಗಳು ಹೇಳುತ್ತವೆ. ಟ್ರಂಪ್‌ ಆದೇಶ ಜಾರಿಗೊಂಡ ನಂತರ ಇವರೆಲ್ಲರ ಕೆಲಸ ಹೋಗಲಿದೆ.

ಎಚ್‌1-ಬಿ ವೀಸಾದಾರರ ಪತ್ನಿಯರು ಕೂಡ ಹೆಚ್ಚಾಗಿ ಉನ್ನತ ಶಿಕ್ಷಣ ಪಡೆದವರೇ ಆಗಿರುತ್ತಾರೆ. ಆದರೆ, ಹಿಂದೆಲ್ಲ ಅವರಿಗೆ ಕೆಲಸ ಮಾಡಲು ಅನುಮತಿ ಇರಲಿಲ್ಲ. ಒಬಾಮಾ ಸರ್ಕಾರ ಅನುಮತಿ ನೀಡಿದ ಮೇಲೆ ಅವರೆಲ್ಲ ಕೆಲಸಕ್ಕೆ ಸೇರಿದ್ದು, ಇದರಿಂದ ಸ್ಥಳೀಯ ಅಮೆರಿಕನ್ನರಿಗೆ ಕೆಲಸ ಸಿಗುತ್ತಿಲ್ಲ ಎಂಬ ದೂರುಗಳಿವೆ. ಹೀಗಾಗಿ ಇವರಿಗೆ ನೀಡಿರುವ ಕೆಲಸದ ಪರ್ಮಿಟ್‌ ವಾಪಸ್‌ ಪಡೆಯುವುದಾಗಿ ಡೊನಾಲ್ಡ್‌ ಟ್ರಂಪ್‌ ತಮ್ಮ ಚುನಾವಣಾ ಪ್ರಚಾರದಲ್ಲಿ ಭರವಸೆ ನೀಡಿದ್ದರು. ಅದನ್ನೀಗ ಜಾರಿಗೊಳಿಸುತ್ತಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ತಿರುಪತಿ ತಿಮ್ಮಪ್ಪನಿಗೆ ಅಂಗವಸ್ತ್ರದ ಮೋಸ, ಪ್ಲಾಸ್ಟಿಕ್‌ ಸಿಲ್ಕ್‌ ಕೊಟ್ಟು 55 ಕೋಟಿ ಯಾಮಾರಿಸಿದ ಕಂಪನಿ!
ರಾಷ್ಟ್ರಪತಿಗಳು ಪದಕ ನೀಡುತ್ತಿದ್ದಂತೆ ಕೊರಳಿನಿಂದ ಕಿತ್ತೆಸೆದ ಬಾಲಕ! ವೈರಲ್ ವಿಡಿಯೋ ಹಿಂದಿನ ಸತ್ಯವೇನು?