ಟ್ರಂಪ್’ರಿಂದ ಭಾರತಕ್ಕೆ ಕಾಡಿದೆ ಹೊಸ ಆತಂಕ

By Suvarna Web DeskFirst Published Jan 3, 2018, 9:06 AM IST
Highlights

ಎಚ್ 1ಬಿ ವೀಸಾ ಕುರಿತ ಪ್ರಸ್ತಾವಿತ ನಿಯಮವನ್ನು ಅಮೆರಿಕ ಜಾರಿಗೊಳಿಸಿದಲ್ಲಿ, ಅಮೆರಿಕದಲ್ಲಿನ ಕನಿಷ್ಠ 5 ಲಕ್ಷ ಟೆಕ್ಕಿಗಳು ಭಾರತಕ್ಕೆ ಮರಳಬೇಕಾಗಬಹುದು ಎಂಬ ಹೊಸ ಆತಂಕ ಕಾಡಿದೆ.

ವಾಷಿಂಗ್ಟನ್: ಎಚ್ 1ಬಿ ವೀಸಾ ಕುರಿತ ಪ್ರಸ್ತಾವಿತ ನಿಯಮವನ್ನು ಅಮೆರಿಕ ಜಾರಿಗೊಳಿಸಿದಲ್ಲಿ, ಅಮೆರಿಕದಲ್ಲಿನ ಕನಿಷ್ಠ 5 ಲಕ್ಷ ಟೆಕ್ಕಿಗಳು ಭಾರತಕ್ಕೆ ಮರಳಬೇಕಾಗಬಹುದು ಎಂಬ ಹೊಸ ಆತಂಕ ಕಾಡಿದೆ.

ಹಾಲಿ ನಿಯಮಗಳ ಅನ್ವಯ 3 ವರ್ಷದ ಅವಧಿಗೆ ಎಚ್ 1ಬಿ ವೀಸಾ ಪಡೆದವರಿಗೆ, ಇನ್ನೊಮ್ಮೆ 3 ವರ್ಷ ದ ಅವಧಿಗೆ ವೀಸಾ ವಿಸ್ತರಿಸಲಾಗುತ್ತದೆ. ಈ ಅವಧಿಯಲ್ಲಿ ಅವರು ಅಮೆರಿಕ ಪೌರತ್ವದ ಗ್ರೀನ್‌ಕಾರ್ಡ್’ಗೆ ಅರ್ಜಿ ಸಲ್ಲಿಸಿ, ಅದು ಪರಿಶೀಲನೆ ಹಂತದಲ್ಲಿದ್ದರೆ, ಅವರು ಅನಿಯಮಿತ ಅವಧಿಗೆ ಅಮೆರಿಕ ದಲ್ಲಿ ಉಳಿಯಬಹುದು.

ಆದರೆ ಇಂಥ ಅರ್ಜಿಯನ್ನು ವಲಸೆ ಉದ್ಯೋಗಿ ತನ್ನ ಉದ್ಯೋ ಗದ 6ನೇ ವರ್ಷದಲ್ಲಿ ಸಲ್ಲಿಸಿದ್ದರೆ, ಅಂಥವರಿಗೆ ಪರಿಶೀಲನೆ ಅವಧಿಯ ರಿಯಾಯಿತಿ ರದ್ದುಪಡಿಸಲು ಟ್ರಂಪ್ ಸರ್ಕಾರ ಚಿಂತಿಸಿದೆ. ಹೀಗಾದಲ್ಲಿ ಪರಿಶೀಲನೆ ಮುಕ್ತಾಯವಾಗಿ ಸರ್ಕಾರ ತನ್ನ ನಿರ್ಧಾರ ಪ್ರಕಟಿಸುವವರೆಗೂ ಅಂಥ ವ್ಯಕ್ತಿಗಳು ತಮ್ಮ ದೇಶಕ್ಕೆ ಮರಳಬೇಕಾಗುತ್ತದೆ. ಈ ನಿಯಮ ಜಾರಿ ಯಾದರೆ ಕನಿಷ್ಠ 5 ಲಕ್ಷ ಟೆಕ್ಕಿಗಳು ಭಾರತಕ್ಕೆ ಮರಳಬೇಕಾಗಬಹುದು ಎನ್ನಲಾಗಿದೆ.

click me!