
ಬೆಂಗಳೂರು: ಸಿಲಿಕಾನ್ ಸಿಟಿಯ ಹೃದಯ ಭಾಗದಲ್ಲಿರುವ ತ್ರಿವೇಣಿ ಚಿತ್ರಮಂದಿರಕ್ಕೆ ಮರು ಜೀವ ಬಂದಿದೆ. ಒಂದೂವರೆ ವರ್ಷದ ಹಿಂದೆ ಇದ್ದಕ್ಕಿದ್ದಂತೆ ಪ್ರದರ್ಶನ ಸ್ಥಗಿತಗೊಳಿಸಿದ್ದ ತ್ರಿವೇಣಿ ಚಿತ್ರಮಂದಿರ ಕೊನೆಗೂ ಸಿನಿಮಾ ಪ್ರದರ್ಶನಕ್ಕೆ ಸಜ್ಜಾಗಿದೆ.
ಹಳೇ ಚಿತ್ರಮಂದಿರಕ್ಕೆ ಹೊಸ ರೂಪ ಕೊಟ್ಟು ನವೀಕರಣ ಮಾಡಿರುವ ತ್ರಿವೇಣಿಗೆ ಭಾನುವಾರ ಪೂಜೆ ನಡೆಯಲಿದ್ದು, ಮೊದಲ ಪ್ರದರ್ಶನವಾಗಿ ಡಾ.ರಾಜ್'ಕುಮಾರ್ ಅಭಿನಯದ ‘ಬಬ್ರುವಾಹನ' ಸಿನಿಮಾ ಪ್ರದರ್ಶನಗೊಳ್ಳಲಿದೆ. ಭಾನುವಾರದಿಂದ ಬುಧವಾರದವರೆಗೂ ವರನಟ ಡಾ.ರಾಜ್'ಕುಮಾರ್ ಸಿನಿಮಾ ಪ್ರದರ್ಶನವಾಗಲಿದ್ದು, ಬುಧವಾರದಿಂದ ಬೇರೆ ಭಾಷೆಯ ಚಿತ್ರಗಳು ಪ್ರದರ್ಶನವಾಗಲಿವೆ. ಆ ಮೂಲಕ ಅಧಿಕೃತವಾಗಿ ತ್ರಿವೇಣಿ ಚಿತ್ರಮಂದಿರಕ್ಕೆ ಚಾಲನೆ ಸಿಗಲಿದೆ.
‘2ಕೆ ರಿಸೊಲ್ಯೂಷನ್' ಪರದೆ ಹೊಂದಿರುವ ಈ ಚಿತ್ರಮಂದಿರದಲ್ಲಿ ಹೃತಿಕ್ ರೋಷನ್ ಹಾಗೂ ಯಾಮಿ ಗೌತಮ್ ಜೋಡಿಯಾಗಿ ನಟಿಸಿರುವ ‘ಕಾಬಿಲ್' ಸಿನಿಮಾ ತೆರೆ ಕಾಣುತ್ತಿದ್ದು, ಈ ಚಿತ್ರದ ನಂತರ ತ್ರಿವೇಣಿಯಲ್ಲಿ ಬೇರೆ ಭಾಷೆಯ ಸಿನಿಮಾಗಳೇ ಪ್ರಮುಖವಾಗಿ ಪ್ರದರ್ಶನಗೊಳ್ಳಲಿವೆ. ಚಿತ್ರಮಂದಿರಗಳೇ ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ಪ್ರದರ್ಶನ ಸ್ಥಗಿತಗೊಳಿಸಿದ್ದ ಚಿತ್ರಮಂದಿರವೊಂದು ಮತ್ತೆ ಪ್ರದರ್ಶನಕ್ಕೆ ಸಜ್ಜಾಗಿರುವುದು ಸಿನಿಪ್ರಿಯರಲ್ಲಿ ಸಂತಸ ಮೂಡಿಸಿದೆ. ಜತೆಗೆ ಚಿತ್ರರಂಗಕ್ಕೆ ಮತ್ತೊಂದು ಚಿತ್ರಮಂದಿರ ದಕ್ಕಿದಂತೆ ಆಗಿದೆ.
(ಕನ್ನಡಪ್ರಭ ವಾರ್ತೆ)
epaper.kannadaprabha.in
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.