
ನವದೆಹಲಿ (ಜೂ.22) ಅಲ್ಲೊಂದು ದೊಡ್ಡ ಅವಘಡ ನಡೆದು ಹೋಗುವುದರಲ್ಲಿತ್ತು. ಇಂದು ವೇಳೆ ಹಾಗೆ ಆಗಿದ್ದರೆ ೨೦೦೦ ಕ್ಕೂ ಅಧಿಕ ಜನರ ಪ್ರಾಣಕ್ಕೆ ಸಂಚಕಾರ ಬರಲಿತ್ತು. ಆದರೆ ತಮ್ಮ ಜೀವವನ್ನೇ ಪಣಕ್ಕಿಟ್ಟ ಬಾಲಕಿ ಮತ್ತು ಆಕೆಯ ತಂದೆ ನಡೆಯಬಹುದಾಗಿದ್ದ ದೊಡ್ಡ ಅವಘಡವನ್ನು ತಪ್ಪಿಸಿದ್ದರು. ಎದುರು ಬರುತ್ತಿದ್ದ ರೈಲಿಗೆ ತಮ್ಮ ಅಂಗಿ ಅಡ್ಡ ಹಿಡಿದು ನಿಲ್ಲಿಸುವ ಸಿಗ್ನಲ್ ನೀಡಿದ್ದರು. ಕೂಡಲೇ ಎಚ್ಚೆತ್ತ ರೈಲ್ವೆ ಚಾಲಕ ಅವಘಡ ನಡೆಯದಂತೆ ನೋಡಿಕೊಂಡಿದ್ದರು. ಈ ಘಟನೆ ನಡೆದಿದ್ದು ಜೂನ್ 15 ರಂದು.
ಸಾಹಸ ಮೆರೆದ ಸ್ವಪನ್ ದೆಬ್ರಾಮ್ಮಾ ಮತ್ತು ಆತನ ಮಗಳು ಸೋಮಾತಿಯನ್ನು ತ್ರಿಪುರಾದ ಆರೋಗ್ಯ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಸಚಿವ ಸುದೀಪ್ ರಾಯ್ ಬರ್ಮನ್ ತಮ್ಮ ಮನೆಗೆ ಆಹ್ವಾನಿಸಿದ್ದರು. ಆಹ್ವಾನಿಸಿದ್ದು ಮಾತ್ರವಲ್ಲದೇ ಅವರೊಂದಿಗೆ ಉಪಹಾರ ಸೇವಿಸಿದರು.
ತ್ರಿಪುರಾದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ತಂದೆ-ಮಗಳ ಸಾಹಸವನ್ನು ಕೊಂಡಾಡಿದ್ದರು. ಅಲ್ಲದೇ ಸೂಕ್ತ ಸನ್ಮಾನ ನೀಡಲು ರೈಲ್ವೆ ಇಲಾಖೆಗೆ ತಿಳಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದರು. ಖುದ್ದು ತ್ರಿಪುರಾ ಮುಖ್ಯ ಮಂತ್ರಿ ಬಿಪ್ ಲಬ್ ಕುಮಾರ್ ದೆಬ್ ತಂದೆ ಮಗಳ ಕಾರ್ಯವನ್ನು ರಾಜ್ಯದ ವಿಧಾನಸಭೆಯಲ್ಲಿ ಶ್ಲಾಘಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.