ಪ್ರದ್ಯುಮ್ನ ಸಾವು ನೆನೆಪಿಸಿದ ವಡೋದರಾ ಶಾಲಾ ಬಾಲಕನ ಹತ್ಯೆ..!

Published : Jun 22, 2018, 04:24 PM IST
ಪ್ರದ್ಯುಮ್ನ ಸಾವು ನೆನೆಪಿಸಿದ ವಡೋದರಾ ಶಾಲಾ ಬಾಲಕನ ಹತ್ಯೆ..!

ಸಾರಾಂಶ

ಪ್ರದ್ಯುಮ್ನ ಸಾವು ನೆನೆಪಿಸಿದ ವಡೋದರಾ ಶಾಲಾ ಬಾಲಕನ ಹತ್ಯೆ ಚಾಕುವಿನಿಂದ ಇರಿದು ಶಾಲಾ ಬಾಲಕನ ಕೊಲೆ ಹೊಟ್ಟೆಗೆ ಚಾಕುವಿನಿಂದ ಇರಿದು 9ನೇ ತರಗತಿ ವಿದ್ಯಾರ್ಥಿ ಕೊಲೆ ಶಾಲಾ ಶೌಚಗೃಹದಲ್ಲಿ ಬಾಲಕನ ಮೃತದೇಹ ಪತ್ತೆ  

ವಡೋದರ(ಜೂ.22): ಕಳೆದ ವರ್ಷ ರಿಯಾನ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ ಪ್ರದ್ಯುಮ್ನನ ಕೊಲೆಯನ್ನು ನೆನಪಿಸುವಂತೆ ಗುಜರಾತ್‌ನ ವಡೋದರದ ಶಾಲೆಯೊಂದರಲ್ಲಿ ಅಂತದ್ದೇ ಘಟನೆ ಮರುಕಳಿಸಿದೆ.

ಗುಜರಾತ್ ನ ಶಾಲೆಯೊಂದರ ಶೌಚಗೃಹದಲ್ಲಿ 9ನೇ ತರಗತಿಯ ವಿದ್ಯಾರ್ಥಿಯ ಮೃತದೇಹ ಇಂದು ಮುಂಜಾನೆ ಪತ್ತೆಯಾಗಿದೆ. ೧೪ ವರ್ಷದ ಬಾಲಕನ ಹೊಟ್ಟೆಗೆ ಚಾಕುವಿನಿಂದ ಇರಿಯಲಾಗಿದ್ದು, ಮೃದೇಹವನ್ನು ಶಾಲೆಯ ಶೌಚಗೃಹದಲ್ಲೇ ಬಿಡಲಾಗಿದೆ.

ಸುದ್ದಿ ತಿಳಿದ ಪೊಲೀಸರು ಕೂಡಲೇ ಸ್ಥಳಕ್ಕೆ ಧಾವಿಸಿದ್ದು, ವಿದ್ಯಾರ್ಥಿಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ವರದಿ ಬಂದ ಬಳಿಕವಷ್ಟೇ ಈ ಕುರಿತು ಪ್ರತಿಕ್ರಿಯೆ ನೀಡುವುದಾಗಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ ನಲ್ಲಿ ಗುರ​ಗಾವ್​ ರಿಯಾನ್ ಅಂತಾರಾಷ್ಟ್ರೀಯ ಶಾಲೆಯ ಶೌಚಗೃಹದಲ್ಲಿ ಏಳು ವರ್ಷದ ಪ್ರದ್ಯುಮ್ನನ ಶವವು ಕತ್ತು ಸೀಳಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 2ನೇ ತರಗತಿ ಓದುತ್ತಿದ್ದ ಬಾಲಕನ ಸಾವು ಇಡೀ ದೇಶಾದ್ಯಂತ ಸುದ್ದಿಯಾಗಿತ್ತು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

10 ವರ್ಷ ಪ್ರೀತಿಸಿದವಳಿಗೆ ಮೋಸ, ₹4.5 ಲಕ್ಷ ವಂಚನೆ, ಬೇರೆ ಮದುವೆಗೆ ಮುಂದಾದ ಯುವಕನ ಮನೆಮುಂದೆ ಪ್ರಿಯತಮೆ ಗಲಾಟೆ!
ದಿವ್ಯಾಂಗ ಯುವತಿ ಮೇಲೆ ಬಲತ್ಕಾರ: ಯಾರಿಗೂ ಹೇಳದಂತೆ ಬೆದರಿಕೆ!