ಮಹಾ ರೈಲು ದುರಂತ ತಡೆದಿದ್ದ ಧೀರನಿಗೆ ಸರ್ಕಾರಿ ನೌಕರಿ!

Published : Nov 29, 2018, 05:23 PM ISTUpdated : Nov 29, 2018, 05:37 PM IST
ಮಹಾ ರೈಲು ದುರಂತ ತಡೆದಿದ್ದ ಧೀರನಿಗೆ ಸರ್ಕಾರಿ ನೌಕರಿ!

ಸಾರಾಂಶ

ತ್ರಿಪುರಾದಲ್ಲಿ ಮಹಾ ರೈಲು ದುರಂತವನ್ನು ತಪ್ಪಿಸಿದ್ದ ತಂದೆ-ಮಗಳು! ರೈಲು ಹಳಿ ಮುಂದೆ ಇದ್ದ ಕಂದಕ ಕಂಡಿದ್ದ ತಂದೆ-ಮಗಳು! ತನ್ನ ಶರ್ಟ್ ಬಿಚ್ಚಿ ರೈಲು ಚಾಲಕನಿಗೆ ಸಿಗ್ನಲ್ ಕೊಟ್ಟಿದ್ದ ಧೀರ! ರಾಜ್ಯ ಸರ್ಕಾರದಿಂದ ಸ್ವಪನ್ ದೆಬ್ರಾಮ್ಮಾ ಅವರಿಗೆ ಡಿ ದರ್ಜೆಯ ನೌಕರಿ

ಅಗರ್ತಲಾ(ನ.29): ತಮ್ಮ ಜೀವವನ್ನೇ ಪಣಕ್ಕಿಟ್ಟು ಸಂಭವಿಸಬಹುದಾಗಿದ್ದ ಮಹಾ ರೈಲು ದುರಂತವನ್ನು ತಪ್ಪಿಸಿದ್ದ ತ್ರಿಪುರಾದ ತಂದೆ-ಮಗಳ ಸಾಹಸಗಾಥೆ ಎಲ್ಲರಿಗೂ ಗೊತ್ತೇ ಇದೆ.

ಆದರೆ ಆ ಮಹಾ ರೈಲು ದುರಂತ ತಪ್ಪಿಸಿದ್ದ ಸ್ವಪನ್ ದೆಬ್ರಾಮ್ಮಾ ಅವರಿಗೆ ಇದೀಗ ತ್ರಿಪುರಾ ಸರ್ಕಾರ ಡಿ ದರ್ಜೆಯ ಸರ್ಕಾರಿ ನೌಕರಿ ನೀಡಿದೆ. ರಾಜ್ಯದ ಯುವಜನ ಮತ್ತು ಕ್ರೀಡಾ ಇಲಾಖೆಯಲ್ಲಿ ಸ್ವಪನ್ ದೆಬ್ರಾಮ್ಮಾ ಅವರಿಗೆ ಡಿ ದರ್ಜೆಯ ನೌಕರಿಯನ್ನು ಸಿಎಂ ಬಿಪ್ಲಬ್ ಕುಮಾರ್ ದೆಬ್ ಘೋಷಿಸಿದ್ದಾರೆ.

ಹೌದು, ಕಳೆದ ಜೂನ್ ತಿಂಗಳಲ್ಲಿ ರೈಲು ಹಳಿಯಲ್ಲಿ ದೊಡ್ಡ ಕಂದಕ ಇರುವುದನ್ನು ಗಮನಿಸಿದ್ದ ಸ್ವಪನ್ ದೆಬ್ರಾಮ್ಮಾ ಮತ್ತು ಆತನ ಮಗಳು ಸೋಮಾತಿ, ತಮ್ಮ ಶರ್ಟ್ ಬಿಚ್ಚಿ ರೈಲು ಚಾಲಕನಿಗೆ ಸಿಗ್ನಲ್ ಕೊಟ್ಟಿದ್ದರು. 

ಕೂಡಲೇ ಎಚ್ಚೆತ್ತ ರೈಲ್ವೆ ಚಾಲಕ ಅವಘಡ ನಡೆಯದಂತೆ ನೋಡಿಕೊಂಡಿದ್ದರು. ಈ ಘಟನೆ ನಡೆದಿದ್ದು ಜೂನ್ 15 ರಂದು. ಸಾಹಸ ಮೆರೆದ ಸ್ವಪನ್ ದೆಬ್ರಾಮ್ಮಾ ಮತ್ತು ಆತನ ಮಗಳು ಸೋಮಾತಿಯನ್ನು ತ್ರಿಪುರಾದ ಆರೋಗ್ಯ ಮತ್ತು ವಿಜ್ಞಾನ ಹಾಗೂ ತಂತ್ರಜ್ಞಾನದ ಸಚಿವ ಸುದೀಪ್ ರಾಯ್ ಬರ್ಮನ್ ತಮ್ಮ ಮನೆಗೆ ಆಹ್ವಾನಿಸಿದ್ದರು.

ತ್ರಿಪುರಾದ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದವರು ತಂದೆ-ಮಗಳ ಸಾಹಸವನ್ನು ಕೊಂಡಾಡಿದ್ದರು. ಅಲ್ಲದೇ ಸೂಕ್ತ ಸನ್ಮಾನ ನೀಡಲು ರೈಲ್ವೆ ಇಲಾಖೆಗೆ ತಿಳಿಸುವ ತೀರ್ಮಾನವನ್ನು ತೆಗೆದುಕೊಂಡಿದ್ದರು. ಖುದ್ದು ತ್ರಿಪುರಾ ಮುಖ್ಯ ಮಂತ್ರಿ ಬಿಪ್ಲಬ್ ಕುಮಾರ್ ದೆಬ್ ತಂದೆ ಮಗಳ ಕಾರ್ಯವನ್ನು ರಾಜ್ಯದ ವಿಧಾನಸಭೆಯಲ್ಲಿ ಶ್ಲಾಘಿಸಿದ್ದರು.

ದುರಂತ ತಪ್ಪಿಸಿದವರಿಗೆ ಸಚಿವರ ಮನೆಯಲ್ಲಿ, ಸಚಿವರ ಜತೆ ತಿಂಡಿ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ನೀನೇ ಹಿಂದಿಯಲ್ಲಿ ಮಾತಾಡು..' ಕನ್ನಡದಲ್ಲಿ ಮಾತಾಡು ಎಂದ ಗ್ರಾಹಕನಿಗೆ ಹಿಂದಿವಾಲಾನ ದುರಹಂಕಾರ ನೋಡಿ ಹೇಗಿದೆ!
ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?