ಈ ಬಾರಿ ಸ್ವತಂತ್ರ ದಿನಾಚರಣೆಯ ಪ್ರಮುಖ ಆಕರ್ಷಣೆ ಏನು ಗೊತ್ತಾ?

Published : Aug 14, 2017, 09:55 PM ISTUpdated : Apr 11, 2018, 12:54 PM IST
ಈ  ಬಾರಿ ಸ್ವತಂತ್ರ ದಿನಾಚರಣೆಯ ಪ್ರಮುಖ ಆಕರ್ಷಣೆ ಏನು ಗೊತ್ತಾ?

ಸಾರಾಂಶ

ಪ್ರತಿವರ್ಷ ಸ್ವಾತಂತ್ರ್ಯೋತ್ಸವ ದಿನದಂದು ದೇಶದ ಪ್ರಮುಖ ತಾಣಗಳಲ್ಲಿ ತ್ರಿವರ್ಣ ಧ್ವಜ ಹಾರುವುದು ಸಹಜ ಚಿತ್ರಣ. ಆದರೆ ಇಲ್ಲಿನ ಸೇಂಟ್‌ ಜಾರ್ಜ್‌ ಪೋರ್ಟ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ಕಾರಣ; 1947, ಆಗಸ್ಟ್‌ 15ರ ಮಧ್ಯರಾತ್ರಿ ಬಳಕೆಯಾದ ಐತಿಹಾಸಿಕ ತಿರಂಗ ಈ ಕೋಟೆಯ ಮ್ಯೂಸಿಯಂನಲ್ಲಿ ರಾರಾಜಿಸುತ್ತಿರುವುದು.

ನವದೆಹಲಿ (ಆ.14): ಪ್ರತಿವರ್ಷ ಸ್ವಾತಂತ್ರ್ಯೋತ್ಸವ ದಿನದಂದು ದೇಶದ ಪ್ರಮುಖ ತಾಣಗಳಲ್ಲಿ ತ್ರಿವರ್ಣ ಧ್ವಜ ಹಾರುವುದು ಸಹಜ ಚಿತ್ರಣ. ಆದರೆ ಇಲ್ಲಿನ ಸೇಂಟ್‌ ಜಾರ್ಜ್‌ ಪೋರ್ಟ್‌ನಲ್ಲಿ ಈ ಬಾರಿಯ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮಹತ್ವ ಪ್ರಾಪ್ತಿಯಾಗಿದೆ. ಕಾರಣ; 1947, ಆಗಸ್ಟ್‌ 15ರ ಮಧ್ಯರಾತ್ರಿ ಬಳಕೆಯಾದ ಐತಿಹಾಸಿಕ ತಿರಂಗ ಈ ಕೋಟೆಯ ಮ್ಯೂಸಿಯಂನಲ್ಲಿ ರಾರಾಜಿಸುತ್ತಿರುವುದು.

ಏಳು ದಶಕಗಳ ಕಾಲ ರಾಷ್ಟ್ರಧ್ವಜವೊಂದನ್ನು ಕಾಯ್ದಿರಿಸುವುದೆಂದರೆ ಸುಲಭದ ಮಾತಲ್ಲ. ಅದಕ್ಕೆ ವಿಶೇಷ ಮುತುವರ್ಜಿಬೇಕು. 70 ವರ್ಷಗಳ ಹಿಂದೆ ಸೇಂಟ್‌ ಜಾರ್ಜ್‌ ಫೋರ್ಟ್‌ ಮೇಲೆ ಆರೋಹಣಗೊಂಡಿದ್ದ ಈ ರಾಷ್ಟ್ರಧ್ವಜವನ್ನು ವಿಶೇಷ ಕಾಳಜಿ ವಹಿಸಿ ಭಾರತೀಯ ಭೂ ಸರ್ವೇಕ್ಷಣ ಇಲಾಖೆ ಕಾಯ್ದಿರಿಸಿದ್ದು ಈ ಆಗಸ್ಟ್‌ 15ರಂದು ಅದರ ಪ್ರದರ್ಶನ ಗಮನ ಸೆಳೆಯಲಿದೆ. ನಾಜೂಕಿನ ನಿರ್ವಹಣೆ ಮೂಲಕ ದಶಕಗಳ ಕಾಲ ಕಾಯ್ದಿಟ್ಟಿರುವ ಈ ಧ್ವಜವನ್ನು 2013, ಜನವರಿ 26ರಿಂದ ಸೇಂಟ್‌ ಜಾರ್ಜ್‌ ಪೋರ್ಟ್‌ ಮ್ಯೂಸಿಯಂಗೆ ಸ್ಥಳಾಂತರಿಸಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿದೆ.

ಗಾಳಿ ನಿರೋಧಕ ಕಟ್ಟಿಗೆಯ ಪೆಟ್ಟಿಗೆಯಲ್ಲಿ ಈ ಐತಿಹಾಸಿಕ ಧ್ವಜವನ್ನು ಸುರಕ್ಷಿತವಾಗಿ ಇರಿಸಲಾಗಿದೆ. ತೇವಾಂಶ ಹೀರಿಕೊಂಡು ಅಗತ್ಯ ಪ್ರಮಾಣದ ಉಷ್ಣಾಂಶ ನಿರ್ವಹಣೆ ಮಾಡುವ ಉದ್ದೇಶದಿಂದ ಅದರ ನಾಲ್ಕೂ ಮೂಲೆಗಳಲ್ಲಿ ಸಿಲಿಕಾ ಜೆಲ್‌ ಉಂಡೆಗಳನ್ನು ಇರಿಸಲಾಗಿದೆ. ಇಷ್ಟು ಮಾತ್ರದಿಂದಲೇ ಅದರ ಸಂರಕ್ಷಣೆ ಸಾಧ್ಯವಿಲ್ಲ. ಬೆಳಕು ಕೂಡ ಮುಖ್ಯ. ಧ್ವಜದ ಅಮರತ್ವಕ್ಕೆ ನೆರವಾಗುವ ಪ್ರಮಾಣದ ಬೆಳಕಿನ ನಿರ್ವಹಣೆಗಾಗಿ ಪೆಟ್ಟಿಗೆ ಒಳಗೆ ಹಾಗೂ ಕೊಠಡಿಯಲ್ಲಿ 'ಲಕ್ಸ್‌ ಮೀಟರ್‌' ಅಳವಡಿಸಲಾಗಿದೆ. ಏರ್‌ಕಂಡೀಷ್ನರ್‌ ಕೂಡ ದಿನದ 24 ತಾಸು ಇಲ್ಲಿ ಬಳಕೆಯಾಗುತ್ತಿದೆ.

'ಹೊರಗಿನ ಸಹಜ ಬೆಳಕು ಪೆಟ್ಟಿಗೆ ಮೇಲೆ ಬೀಳದಂತೆ ನೋಡಿಕೊಂಡಿದ್ದೇವೆ. ಶೋಕೇಸ್‌ ಒಳಗೆ ಮಾನವ ಸಂವೇದಿ ಎಲ್‌ಇಡಿ ಬೆಳಕಿನ ವ್ಯವಸ್ಥೆ ಇದೆ. ವೀಕ್ಷಕರು ಬಂದಾಗ ಮಾತ್ರ ಮಾಮೂಲಿ ಲೈಟ್‌ ಬಳಸುತ್ತೇವೆ. ಧೂಳು ಮತ್ತು ಕೊಳೆಯಾಗದಂತೆ ಎಚ್ಚರ ವಹಿಸಲಾಗಿದೆ,' ಎಂದು ಮ್ಯೂಸಿಯಂನ ಅಧಿಕಾರಿ ಹೇಳಿದ್ದಾರೆ.

ಶುದ್ಧ ರೇಷ್ಮೆಯಿಂದ ತಯಾರಿಸಿದ 12 ಅಡಿ ಉದ್ದ ಹಾಗೂ 8 ಅಡಿ ಅಗಲದ ಈ ಧ್ವಜ, 1947, ಆಗಸ್ಟ್‌ 15ರ ಬೆಳಗಿನ ಜಾವ 5 ಗಂಟೆ 5 ನಿಮಿಷಕ್ಕೆ ಸಾವಿರಾರು ಜನರ ಸಮ್ಮುಖದಲ್ಲಿ ಸೇಂಟ್‌ ಜಾರ್ಜ್‌ ಕೋಟೆ ಮೇಲೆ ಆರೋಹಣಗೊಂಡಿತ್ತು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಸಂಘರ್ಷದ ಸಮಾಜಕ್ಕೆ ಧ್ಯಾನವೇ ಪರಿಹಾರ: ಶ್ರೀ ಶ್ರೀ ರವಿಶಂಕರ್ ಗುರೂಜಿ
ಭಾರತ ವಿರೋಧಿ ತೀವ್ರಗಾಮಿ ನಾಯಕನ ಹತ್ಯೆಯ ನಂತರ ಬಾಂಗ್ಲಾದೇಶದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ