
ಬೆಂಗಳೂರು (ಡಿ.27): ಎಲ್‌ಪಿಜಿ ಗ್ಯಾಸ್ ಸಿಲಿಂಡರ್‌ಗಳ ಹಾನಿ ತಪ್ಪಿಸುವ ದೃಷ್ಟಿಯಿಂದ ಮಹಿಳೆಯರು ಮತ್ತು ಮಕ್ಕಳಿಗೆ ಸುರಕ್ಷಿತವಾಗಿರುವ ವಿನೂತನ ಶೈಲಿಯ ಸಿಲಿಂಡರ್‌ಗಳನ್ನು ‘ಗೋ ಗ್ಯಾಸ್’ ಮಾರುಕಟ್ಟೆಗೆ ಪರಿಚಯಿಸಿದೆ.
ಈ ಕುರಿತು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೋ ಗ್ಯಾಸ್‌ನ ಮಾರ್ಕೆಟಿಂಗ್ ವಿಭಾಗದ ಮುಖ್ಯಸ್ಥ ಡಿ. ವೆಂಕಟರಾಮನ್, ಗ್ಯಾಸ್ ಸಿಲಿಂಡರ್ ಸೋರಿಕೆ, ಸ್ಫೋಟದಂತಹ ಹಲವಾರು ಪ್ರಕರಣಗಳಿಂದ ಗ್ರಾಹಕರಿಗೆ ಮುಕ್ತಿ ನೀಡಲು ಗೋ ಗ್ಯಾಸ್ ಬಹಳ ಅನುಕೂಲಕರವಾಗಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಗೋ ಗ್ಯಾಸ್ ಎಲೈಟ್ ಎಲ್'ಪಿಜಿ ಸಿಲಿಂಡರ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ ಎಂದು ತಿಳಿಸಿದರು.
ಗೋ ಗ್ಯಾಸ್ ಎಲೈಟ್ ಸಿಲಿಂಡರ್‌ಗಳು ಅತ್ಯಂತ ಹಗುರವಾಗಿದ್ದು, ಮಹಿಳೆಯರು ಮತ್ತು ಮಕ್ಕಳು ಇದನ್ನು ಸುಲಭದಲ್ಲಿ ಎತ್ತಬಹುದು. ಸಿಲಿಂಡರ್‌ಗಳು ಪಾರದರ್ಶಕವಾಗಿದ್ದು ಅನಿಲ ಪ್ರಮಾಣ ಕಾಣುತ್ತದೆ. ಇವು ಬಳಕೆಗೆ ಅತ್ಯಂತ ಸುರಕ್ಷಿತವಾಗಿವೆ. ಸಿಲಿಂಡರ್‌ನಲ್ಲಿ ಅನಿಲ ಕದಿಯುವುದು ಮತ್ತು ಕಡಿಮೆ ಅನಿಲ ಪೂರೈಸಲು ಸಾಧ್ಯವಿರುವುದಿಲ್ಲ ಎಂದರು.
ಗೋ ಗ್ಯಾಸ್ ಎಲೈಟ್ ಸಿಲಿಂಡರ್‌ಗಳು ಹೈಡ್ರಾಲಿಕ್ ಫ್ರೂಪ್ ಪ್ರೆಷರ್ ಟೆಸ್ಟ್ ಹೈಡ್ರಾಲಿಕ್ ಎಕ್ಸ್‌ಪ್ಯಾನ್ಷನ್ ಟೆಸ್ಟ್, ಸಿಲಿಂಡರ್ ಸಿಡಿಯುವ ಪರೀಕ್ಷೆ, ಆ್ಯಂಬಿಯೆಂಟ್ ಸೈಕಲ್ ಟೆಸ್ಟ್, ವ್ಯಾಕ್ಯೂಮ್ ಟೆಸ್ಟ್, ಎನ್ವಿರಾನ್‌ಮೆಂಟಲ್ ಸೈಕಲ್ ಟೆಸ್ಟ್, ಹೈ ಟೆಂಪರೇಚರ್ ಕ್ರೀಪ್ ಟೆಸ್ಟ್ ಸೇರಿದಂತೆ ವಿವಿಧ ಪರೀಕ್ಷೆಗಳನ್ನು ಮಾಡಲಾಗಿದ್ದು ಅವುಗಳಿಂದ ಈ ಸಿಲಿಂಡರ್ ಶೇ.100ರಷ್ಟು ಸುರಕ್ಷಿತವೆಂದು ತಿಳಿದು ಬಂದಿದೆ ಎಂದು ವಿವರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.