2 ತಿಂಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ

Published : Mar 28, 2018, 09:54 AM ISTUpdated : Apr 11, 2018, 12:53 PM IST
2 ತಿಂಗಳ ಕಾಲ ರೈಲುಗಳ ಸಂಚಾರದಲ್ಲಿ ವ್ಯತ್ಯಯ

ಸಾರಾಂಶ

ದೊಡ್ಡಬಳ್ಳಾಪುರ-ರಾಜಾನಕುಂಟೆ-ಯಲಹಂಕ ನಡುವೆ ಮಾ.29ರಿಂದ ಮೇ 29ರ ವರೆಗೆ (ಎರಡು ತಿಂಗಳ ಕಾಲ) ರೈಲು ಹಳಿ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ.

ಬೆಂಗಳೂರು: ದೊಡ್ಡಬಳ್ಳಾಪುರ-ರಾಜಾನಕುಂಟೆ-ಯಲಹಂಕ ನಡುವೆ ಮಾ.29ರಿಂದ ಮೇ 29ರ ವರೆಗೆ (ಎರಡು ತಿಂಗಳ ಕಾಲ) ರೈಲು ಹಳಿ ನಿರ್ವಹಣಾ ಕಾಮಗಾರಿ ನಡೆಯುವುದರಿಂದ ಈ ಮಾರ್ಗದ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ನೈಋತ್ಯ ರೈಲ್ವೆ ತಿಳಿಸಿದೆ. ಈ ಮಾರ್ಗದಲ್ಲಿ ಸೋಮವಾರ, ಮಂಗಳವಾರ, ಬುಧವಾರ ಮತ್ತು ಶನಿವಾರ ನಿರ್ವಹಣಾ ಕಾಮಗಾರಿ ನಡೆಯಲಿದೆ.

ಇದರಿಂದ ಗೋರಖ್ ಪುರ-ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೋಮವಾರ ದೊಡ್ಡಬಳ್ಳಾಪುರ-ರಾಜಾನಕುಂಟೆ ನಡುವೆ 35 ನಿಮಿಷ ಮತ್ತು ರಾಜಾನಕುಂಟೆ-ಯಲಹಂಕ ನಡುವೆ 25 ನಿಮಿಷ ನಿಲುಗಡೆಯಾಗಿ ಮುಂದೆ ಸಾಗಲಿದೆ. ನಂದೇಡ್-ಕೆಎಸ್ ಆರ್ ಬೆಂಗಳೂರು ಎಕ್ಸ್‌ಪ್ರೆಸ್ ರೈಲು ಪ್ರತಿ ಶನಿವಾರ, ಸೋಮವಾರ, ಬುಧವಾರ, ದೊಡ್ಡಬಳ್ಳಾಪುರ- ರಾಜನಕುಂಟೆ ನಡುವೆ ೪೫ ನಿಮಿಷ ಮತ್ತು ರಾಜಾನಕುಂಟೆ-ಯಲಹಂಕ ನಡುವೆ 35ನಿಮಿಷ ನಿಂತು ಬಳಿಕ ಸಾಗಲಿದೆ.

ಶ್ರೀ ಸಾಯಿನಗರ್ ಶಿರಡಿ-ಚೆನ್ನೈ ಸೆಂಟ್ರಲ್ ಎಕ್ಸ್‌ಪ್ರೆಸ್ ರೈಲು ಬುಧವಾರ ದೊಡ್ಡಬಳ್ಳಾಪುರ-ರಾಜಾನಕುಂಟೆ ನಡುವೆ 35ನಿಮಿಷ ಮತ್ತು ಶನಿವಾರ ರಾಜಾನಕುಂಟೆ-ಯಲಹಂಕ ನಡುವೆ 25 ನಿಮಿಷ ನಿಂತು, ಸಾಗಲಿದೆ. 

ಕಾಚಿಗುಡ-ಯಶವಂತಪುರ ಎಕ್ಸ್‌ಪ್ರೆಸ್ ಪ್ರತಿ ಬುಧವಾರ ದೊಡ್ಡಬಳ್ಳಾಪುರ- ರಾಜಾನಕುಂಟೆ ಮತ್ತು ರಾಜಾನಕುಂಟೆ-ಯಲಹಂಕ ನಡುವೆ 105 ನಿಮಿಷ ನಿಲುಗಡೆಯಾಗಿ ನಂತರ ಮುಂದೆ ಸಾಗಲಿದೆ.

ಅಂತೆಯೇ ಚಿಕ್ಕಬಾಣಾವರದ ಸಮೀಪ ಹಳಿ ನಿರ್ವಹಣೆ ಕಾಮಗಾರಿ ಹಿನ್ನೆಲೆಯಲ್ಲಿ ಮಾ.29ರಿಂದ ಏ.22ರವರೆಗೆ ಅರಸೀಕೆರೆ- ಕೆಎಸ್‌ಆರ್ ಬೆಂಗಳೂರು ರೈಲು ಸಂಚಾರ ವಿಳಂಬವಾಗ ಲಿದೆ. ಈ ಮಾರ್ಗದ ಕೆಎಸ್‌ಆರ್ ಬೆಂಗಳೂರು- ಮೈಸೂರು ಪ್ಯಾಸೆಂಜರ್ ರೈಲು ಬೆಳಗ್ಗೆ 9.20ರ ಬದಲಾಗಿ 9.50ಕ್ಕೆ ಕೆಎಸ್‌ಆರ್ ಬೆಂಗಳೂರಿನಿಂದ ಹೊರಡಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪ್ರವಾಸಿಗರ ಸ್ವರ್ಗ.. ಅಸ್ಸಾಂ ರಾಜ್ಯ ಯಾವುದಕ್ಕೆ ಪ್ರಸಿದ್ಧ ನಿಮಗೆ ಗೊತ್ತೇ?
ಬಿಜೆಪಿ ಮಹಾಯುತಿಗೆ ಕ್ಲೀನ್ ಸ್ವೀಪ್ ಗೆಲುವು, ಕೇರಳ ಗೆದ್ದಾಗ ಪ್ರಜಾಪ್ರಭುತ್ವ ಮಹಾರಾಷ್ಟ್ರ ಸೋತಾಗ ಕೊತ ಕೊತ