ತಿಂಗಳಲ್ಲಿ 2 ಬಾರಿ ಎಸಿ ಪ್ರಯಾಣಿಕರ ಬ್ಲ್ಯಾಂಕೆಟ್ ವಾಶ್!

First Published Jun 26, 2018, 8:38 PM IST
Highlights

ತಿಂಗಳಲ್ಲಿ 2 ಬಾರಿ ಎಸಿ ಪ್ರಯಾಣಿಕರ ಬ್ಲ್ಯಾಂಕೆಟ್ ವಾಶ್

400 ರೂ. ಬೆಲೆ ಬಾಳುವ ಉಣ್ಣೆಯ ಬ್ಲಾಂಕೆಟ್ 

ಎಸಿ ಪ್ರಯಾಣಿಕರಿಗೆ ತಗುಲುವ ವೆಚ್ಚ ಡಬಲ್?
 

ನವದೆಹಲಿ(ಜೂ.26): ಹವಾನಿಯಂತ್ರಿತ ಕೋಚ್ ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ನೀಡುವ ಹೊದಿಕೆ (ಬ್ಲಾಂಕೆಟ್)ಗಳನ್ನು ತಿಂಗಳಲ್ಲಿ ಎರಡು ಬಾರಿ ಶುಚಿಗೊಳಿಸಲಾಗುವುದು ಎಂದು ಭಾರತೀಯ ರೈಲ್ವೆ ತಿಳಿಸಿದೆ. ಪ್ರಸ್ತುತ ಎಸಿ ಪ್ರಯಾಣಿಕರ ಬ್ಲಾಂಕೆಟ್ ಗಳನ್ನು ಎರಡು ತಿಂಗಳಿಗೊಮ್ಮೆ ಶುಚಿಗೊಳಿಸಲಾಗುತ್ತಿದ್ದು, ಇನ್ನುಮುಂದೆ ಅದನ್ನು ತಿಂಗಳಿಗೆ ಎರಡು ಬಾರಿ ಶುಚಿಗೊಳಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಪದೇಪದೇ ತೊಳೆಯುವುದರಿಂದ ಬ್ಲಾಂಕೆಟ್ ಸಹ ಕಡಿಮೆ ಬಾಳಿಕೆ ಬರುತ್ತದೆ. ಇಷ್ಟು ದಿನ ನಾಲ್ಕು ವರ್ಷ ಬರುತ್ತಿದ್ದ ಬ್ಲಾಂಕೆಟ್ ಇನ್ನು ಮುಂದೆ ಕೇವಲ ಎರಡು ವರ್ಷ ಬಾಳಿಕೆ ಬರಲಿದೆ. ಇದರಿಂದ ಎಸಿ ಪ್ರಯಾಣಿಕರಿಗೆ ತಗುಲುವ ವೆಚ್ಚ ಡಬಲ್ ಆಗಲಿದೆ ಎಂದು ಅವರು ಹೇಳಿದ್ದಾರೆ.

ಪ್ರಸ್ತುತ 400 ರೂ. ಬೆಲೆ ಬಾಳುವ ಉಣ್ಣೆಯ ಬ್ಲಾಂಕೆಟ್ ಗಳನ್ನು ನೀಡಲಾಗುತ್ತಿದ್ದು, ಈಗ ಬ್ಲಾಂಕೆಟ್ ಗಳನ್ನು ಬದಲಾಯಿಸಲಾಗುತ್ತಿದ್ದು, ಅದರ ಬೆಲೆಯನ್ನು ಶೀಘ್ರದಲ್ಲೇ ನಿರ್ಧರಿಸಲಾಗುವುದು ರೈಲ್ವೆ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ 10 ವರ್ಷಗಳಿಂದ ಬ್ಲಾಂಕೆಟ್ ಬೆಲೆ ಪರಿಷ್ಕರಿಸಿಲ್ಲ. ಈಗ ಮೊದಲಿನ ದರಕ್ಕಿಂತಲೂ ಸ್ವಲ್ಪ ದುಬಾರಿಯಾಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಭಾರತೀಯ ರೇಲ್ವೆಯ ಎಸಿ ಪ್ರಯಾಣಿಕರಿಗಾಗಿ ನಿತ್ಯ 3.90 ಲಕ್ಷ ಬ್ಲಾಂಕೆಟ್ ಗಳ ಅಗತ್ಯವಿದೆ. ಪ್ರಥಮ ದರ್ಜೆ ಎಸಿ ಪ್ರಯಾಣಿಕರಿಗೆ ನಿತ್ಯ ಶುಚಿಗೊಳಿಸಿದ ಬ್ಲಾಂಕೆಟ್ ನೀಡಲಾಗುತ್ತಿದೆ. ಆದರೆ  ದ್ವಿತೀಯ ಮತ್ತು ತೃತೀಯ ದರ್ಜೆ ಎಸಿ ಪ್ರಯಾಣಿಕರಿಗೆ ಈ ಸೌಲಭ್ಯ ಇಲ್ಲ.

click me!