
ವಾಷಿಂಗ್ಟನ್(ಜೂ.26): ಅಂಗಾರಕನ ಇಂಚಿಂಚೂ ಅಂಗಳವನ್ನು ಕೆದಕಿಯೇ ಸಿದ್ದ ಎನ್ನುತ್ತಿದೆ ನಾಸಾ ಸಂಸ್ಥೆ. ಅದಕ್ಕಾಗಿ ಏನೆಲ್ಲಾ ತಂತ್ರಜ್ಞಾನ ಬಳಸಲು ಸಾಧ್ಯವೋ ಅದನ್ನು ಬಳಸಲು ನಾಸಾ ಹಿಂದೆ ಮುಂದೆ ನೋಡುತ್ತಿಲ್ಲ.
ಮಂಗಳ ಗ್ರಹದ ಅಧ್ಯಯನಕ್ಕಾಗಿ ನಾಸಾ ಈಗಾಗಲೇ ಹಲವು ಸ್ಪೇಸ್‌ಕ್ರಾಫ್ಟ್ ಗಳನ್ನು ಕಳುಹಿಸಿದೆ. ಸದ್ಯ ನಾಸಾದ ಕ್ಯೂರಿಯಾಸಿಟಿ ರೋವರ್ ಮಂಗಳ ಗ್ರಹದ ಅಧ್ಯಯನದಲ್ಲಿ ನಿರತವಾಗಿದೆ. ಕ್ಯೂರಿಯಾಸಿಟಿ ಆ ಕೆಂಪು ಗ್ರಹದ ಹಲವು ಕುತೂಹಲಕಾರಿ ಸಂಗತಿಗಳನ್ನು ಭೂಮಿಗೆ ರವಾನಿಸಿದೆ.
ಆದರೆ ಇಷ್ಟಕ್ಕೆ ತೃಪ್ತವಾಗದ ನಾಸಾ ಇದೀಗ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್‌ವೊಂದನ್ನು ಕಳುಹಿಸುವ ಯೋಜನೆ ಸಿದ್ದಪಡಿಸಿದೆ. ಮಾರ್ಸಕಾಪ್ಟರ್ ಎಂದು ಹೆಸರಿಸಿರುವ ಈ ಹೆಲಿಕಾಪ್ಟರ್‌ನ್ನು ನಾಸಾ ಮಂಗಳ ಗ್ರಹದ ಮೇಲೆ ಇಳಿಸಲಿದೆ.
ಒಂದು ವೇಳೆ ಈ ಯೋಜನೆ ಯಶಸ್ವಿಯಾದರೆ ಭೂಮಿಯನ್ನು ಹೊರತುಪಡಿಸಿ ಮತ್ತೊಂದು ಗ್ರಹದ ಮೇಲೆ ಮಾನವ ನಿರ್ಮಿತ ಹೆಲಿಕಾಪ್ಟರ್‌ವೊಂದು ಹಾರಾಟ ನಡೆಸಿದಂತಾಗುತ್ತದೆ. ಈ ಕುರಿತು ಈಗಾಗಲೇ ಹಲವು ಪರೀಕ್ಷೆಗಳನ್ನು ನಡೆಸಿದ್ದು, ಶೀಘ್ರದಲ್ಲೇ ಮಂಗಳ ಗ್ರಹಕ್ಕೆ ಹೆಲಿಕಾಪ್ಟರ್ ಕಳುಹಿಸಲಾಗುವುದು ಎಂದು ನಾಸಾ ಸ್ಪಷ್ಟಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.