ಶೌಚಾಲಯದಲ್ಲಿ ಸಿಕ್ತು ಬರೋಬ್ಬರಿ 6 ಕೆಜಿ ಚಿನ್ನ

Published : Aug 03, 2018, 08:45 AM IST
ಶೌಚಾಲಯದಲ್ಲಿ ಸಿಕ್ತು ಬರೋಬ್ಬರಿ 6 ಕೆಜಿ ಚಿನ್ನ

ಸಾರಾಂಶ

ಶೌಚಾಲಯಲದಲ್ಲಿ ಸಿಕ್ಕಿತು ಬರೋಬ್ಬರಿ 6 ಕೆ.ಜಿಯಷ್ಟು ಚಿನ್ನ. ಅರಬ್ ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಟ್ ಏರ್‌ವೆಸ್ ವಿಮಾನದ ಶೌಚಾಲಯದಲ್ಲಿಈ ಪ್ರಮಾಣದಲ್ಲಿ ಚಿನ್ನವು ಪತ್ತೆಯಾಗಿದೆ.

ಬೆಂಗಳೂರು: ಅರಬ್ ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಜೆಟ್ ಏರ್‌ವೆಸ್ ವಿಮಾನದ ಶೌಚಾಲಯದಲ್ಲಿ ಗುರುವಾರ ಸುಮಾರು 6.650  ಕೇಜಿ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಅರಬ್ ದೇಶದಿಂದ ಕಳ್ಳ ಹಾದಿಯಲ್ಲಿ ಚಿನ್ನ ತಂದಿರುವ ಸ್ಮಗ್ಲರ್ಸ್‌ಗಳು, ವಿಮಾನ ನಿಲ್ದಾಣದ ಭದ್ರತಾ ಕೋಟೆ ಭೇದಿಸಲಾಗದೆ ಶೌಚಾಲಯದಲ್ಲಿ ಅಡಗಿಸಿಟ್ಟಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು, ವಿಮಾನವನ್ನು ತಪಾಸಣೆಗೊಳಪಡಿಸಿದಾಗ ಚಿನ್ನ ಪತ್ತೆಯಾಗಿದೆ ಎಂದು ವಿಶ್ವಸನೀಯ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ. ಮಸ್ಕಟ್ ದೇಶದಿಂದ ಆಗಮಿಸುತ್ತಿರುವ ಜೆಟ್ ಏರ್‌ವೆಸ್ ವಿಮಾನದಲ್ಲಿ ಕೋಟ್ಯಂತರ ರು. ಮೌಲ್ಯದ ಚಿನ್ನ ಸಾಗಾಣಿಕೆ ಬಗ್ಗೆ ಮಾಹಿತಿ ಸಿಕ್ಕಿತು.

ಅದರಂತೆ ಆ ವಿಮಾನದ ಮೇಲೆ ನಿಗಾ ವಹಿಸಿ, ವಿಮಾನ ನಿಲ್ದಾಣದಲ್ಲಿ ಇಳಿಯಲು ಕಾಯುತ್ತಿದ್ದವು. ಆ ವೇಳೆಗೆ ಎಚ್ಚೆತ್ತು ಆರೋಪಿಗಳು ಚಿನ್ನವನ್ನು ಬಿಟ್ಟು ಪರಾರಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ರಾಜಕೀಯ ತೀಟೆಗೆ ಆರೋಪ, ಯಾವುದೇ ತನಿಖೆಗೆ ಸಿದ್ಧ: ಸಚಿವ ಕೃಷ್ಣ ಬೈರೇಗೌಡ
ಮುಂದಿನ 72 ಗಂಟೆಯಲ್ಲಿ ಭೂಮಿಯತ್ತ 10 ಕ್ಷುದ್ರ ಗ್ರಹ, ಡೇಂಜರ್ ಝೋನ್‌ನಲ್ಲಿದೆಯಾ ಜಗತ್ತು?