
ಧಾರವಾಡ(ನ.12): ಬಾಲಕ ಮೊದಲೇ ನತದೃಷ್ಟ. ತಂದೆಯ ಪ್ರೀತಿಯಿಂದ ವಂಚಿತನಾಗಿದ್ದ. ಅಂಥ ಮಗುವಿನ ಬದುಕಲ್ಲಿ ಮತ್ತೊಂದು ಘೋರ ದುರಂತವೂ ನಡೆದು ಹೋಗಿದೆ. ಆಸ್ತಿ ಹಿನ್ನೆಲೆಯಲ್ಲಿ ಈ ಮಗುವನ್ನೇ ಕೊಲ್ಲಲು ತಂದೆಯ ಸಂಬಂಧಿಕರು ಹೊಂಚು ಹಾಕಿದ್ದಾರೆ. ಆದರೆ ಅದೃಷ್ಟವಶಾತ್ ಬಾಲಕ ಬದುಕುಳಿದಿದ್ದಾನೆ.
ಧಾರವಾಡ ತಾಲೂಕಿನ ಮಾದನಬಾವಿ ಗ್ರಾಮದ 7 ವರ್ಷದ ಈರಣ್ಣನ ತಂದೆ ಪುಂಡಲೀಕಪ್ಪ, ತಾಯಿ ಶಶಿಕಲಾ. ತಂದೆ ಪುಂಡಲೀಕಪ್ಪನಿಗೆ ಮೊದಲು ಅಡಿವೆಮ್ಮ ಅನ್ನುವರೊಂದಿಗೆ ಮದುವೆಯಾಗಿ ಹೆಣ್ಣು ಮಗು ಜನಿಸಿತ್ತು. ಬಳಿಕ ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ, ಮಗಳನ್ನು ಕರೆದು ತವರಿಗೆ ಸೇರಿಕೊಂಡಿದ್ದಳು. ಬಳಿಕ ಪುಂಡಲೀಕಪ್ಪ ಶಶಿಕಲಾ ಎಂಬುವರನ್ನು ಮದುವೆಯಾದ. ಒಂದು ವರ್ಷದ ಬಳಿಕ ಈರಣ್ಣ ಹುಟ್ಟಿದ. ನಂತರ ಈಕೆಗೂ ಕಿರುಕುಳ ನೀಡಲು ಶುರು ಮಾಡಿದ್ದು ಬೇಸತ್ತ ಶಶಿಕಲಾ ತವರು ಮನೆಗೆ ಬಂದು ವಾಸಿಸತೊಡಗಿದಳು. ಆದರೆ ಮಗನ ಭವಿಷ್ಯದ ದೃಷ್ಟಿಯಿಂದ ಪತಿ ಮನೆಯಲ್ಲಿಯೇ ಇರಲು ನಿರ್ಧರಿಸಿ, ಆತನ ಮನೆಯ ಹೊರಭಾಗದಲ್ಲಿರುವ ಕೋಣೆಯೊಂದರಲ್ಲಿ ಇದ್ದಳು. ಪುಂಡಲೀಕಪ್ಪ ಹಾಗೂ ಆತನ ಕುಟುಂಬಸ್ಥರು ಬಾಲಕನನ್ನು ಕರೆದು ಬಾಯಿ ಮುಚ್ಚಿ, ಬಿಸಿ ನೀರನ್ನು ಹಾಕಿದ್ದರಂತೆ.
ಇನ್ನು ಬಾಲಕನ ದೊಡ್ಡಪ್ಪ ಬಸಪ್ಪ, ದೊಡ್ಡಮ್ಮ ಸುರೇಖಾ, ಅಜ್ಜ, ಅಜ್ಜಿ ಸೇರಿಯೇ ಈ ಕೃತ್ಯ ಎಸಗಿದ್ದರು ಅಂತಾ ಶಶಿಕಲಾ ಆರೋಪಿಸಿದ್ದಾಳೆ. ಅಲ್ಲದೇ ಬಾಲಕನಿಗೆ ಆಸ್ತಿಯಲ್ಲಿ ಪಾಲು ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಬಾಲಕನನ್ನೇ ಕೊಲ್ಲಲು ಹೊಂಚು ಹಾಕಲಾಗಿತ್ತು ಎನ್ನುವುದು ಶಶಿಕಲಾಳ ಆರೋಪ.
ಆದರೆ ಬಾಲಕನ ಅಜ್ಜ, ಅಜ್ಜಿ, ದೊಡ್ಡಮ್ಮ ಸುರೇಖಾ ಮಾತ್ರ ಈ ಆರೋಪವನ್ನು ತಳ್ಳಿ ಹಾಕಿದ್ದಾರೆ. ಒಟ್ಟಿನಲ್ಲಿ ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರ ತನಿಕೆಯಿಂದ ಸತ್ಯಾಸತ್ಯತೆಗಳು ಹೊರಬರಬೇಕಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.