
ಬೆಂಗಳೂರು(ಜ.18): ನನಗೆ ಹಾಸಿಗೆಯಲ್ಲಿ ಸಹಕರಿಸಲಿಲ್ಲ ಅನ್ನೋ ಕಾರಣಕ್ಕೆ ಟೆಕ್ಕಿಯೊಬ್ಬ ತನ್ನ ಹೆಂಡತಿ ಗೆ ಆಕೆ ಧರಿಸುತ್ತಿದ್ದ ಬಟ್ಟೆಯೊಳಗೆ ಜಿರಲೆ ಬಿಟ್ಟು ಆಕೆಗೆ ಹಿಂಸೆ ನೀಡಿರುವ ಘಟನೆ ಬೆಂಗಳೂರಿನ ಇಂದ್ರಾನಗರದಲ್ಲಿ ನಡೆದಿದೆ.
ಟೆಕ್ಕಿ ಅವಿನಾಶ್ಶರ್ಮ ಮತ್ತು ಪತ್ನಿ ಸುಜಾತ ಕೆಲವು ವರ್ಷಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದು, ಈಗಾಗಲೇ ಎರಡು ಮಕ್ಕಳಿವೆ. ಹೀಗಿದ್ದರೂ ಅವಿನಾಶ್ ಬೇರೆ ಮಹಿಳೆಯ ಜೊತೆ ಅನೈತಿಕ ಸಂಬಂಧವನ್ನು ಇಟ್ಟುಕೊಂಡಿದ್ದಾನಂತೆ. ಪತಿಯ ಈ ಅನೈತಿಕ ಸಂಬಂಧದ ವಿಷಯ ತಿಳಿಯುದ್ದಂತೆ ಸುಜಾತ ಪತಿ ಅವಿನಾಶ್'ನನ್ನು ತನ್ನಿಂದ ದೂರವಿಡಲು ಮುಂದಾಗಿದ್ದಾಳೆ. ಈ ಕಾರಣಕ್ಕೆ ಹಾಸಿಗೆಯಲ್ಲಿ ತನಗೆ ಸಹಕರಿಸಲಿಲ್ಲ ಅಂತ ಆಕೆಯ ಮೈಮೇಲೆ ಜಿರಳೆಗಳನ್ನು ಬಿಟ್ಟು ಹಿಂಸೆ ಕೊಡಲು ಶುರುಮಾಡಿದ್ದಾನೆ.
ಪತಿಯ ಈ ವಿಚಿತ್ರ ಕಿರುಕುಳದಿಂದ ಬೇಸತ್ತ ಪತ್ನಿ ಸುಜಾತ ವನಿತಾ ಸಹಾಯವಣಿ ಮೋರೆ ಹೋಗಿದ್ದು , ಪತಿಯ ವಿರುದ್ದ ದೂರು ನೀಡಿದ್ದಾಳೆ. ಈ ಸಂಬಂಧ ವನಿತಾ ಸಹಾಯವಾಣಿ ಅಧಿಕಾರಿಗಳು ಅವಿನಾಶ್ನನ್ನು ವಿಚಾರಣೆಗೊಳಪಡಿಸದಾಗ, ತಾನು ಮಾಡಿದ ತಪ್ಪುನ್ನು ಒಪ್ಪಿಕೊಂಡಿದ್ದಾನೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.