
ಉತ್ತರಪ್ರದೇಶ(ಜ.18): ಉತ್ತರ ಪ್ರದೇಶದಲ್ಲಿ ಬಿಹಾರದ ಪಾಲಿಟಿಕ್ಸ್ ನೆರಳು ಸ್ಪಷ್ಟವಾಗಿದೆ. ನಿತೀಶ್ ಕುಮಾರ್ ಬಿಜೆಪಿಯೇತರ ಮಹಾಮೈತ್ರಿ ರಚಿಸಿ ಗೆಲುವನ್ನೂ ಕಂಡಿದ್ದರು. ಇದೇ ರೀತಿಯ ಸಾಹಸಕ್ಕೆ ಅಖಿಲೇಶ್ ಯಾದವ್ ಕೂಡ ಮುಂದಾಗಿದ್ದು ಹಸ್ತಲಾಘವ ಪ್ರಯತ್ನ ಬಹುತೇಕ ಸಾಧ್ಯವಾಗಿದೆ. ಎಲ್ಲಾ ಅಂದುಕೊಂಡಂತೆ ನಡೆದರೆ ಇನ್ನೆರಡು ದಿನಗಳಲ್ಲಿ ಎಸ್ಪಿ-ಕಾಂಗ್ರೆಸ್ ಮಹಾಮೈತ್ರಿ ಒಟ್ಟಾಗಿ ಅಖಾಡಕ್ಕೆ ಇಳಿಯಲಿದೆ.
ಒಕ್ಕೂಟಕ್ಕೆ ಆರ್ಜೆಡಿ ಕೂಡಾ ಸೇರ್ಪಡೆ ಸಾಧ್ಯತೆ
ಬಿಹಾರದ ಮಾದರಿಯಲ್ಲಿಯೇ ಉತ್ತರ ಪ್ರದೇಶದಲ್ಲಿ ಕೂಡ ಸೆಕ್ಯುಲರ್ ಪಕ್ಷ ಗಳನ್ನು ಒಟ್ಟಿಗೆ ತರಲು ಪ್ರಯತ್ನ ಆರಂಭವಾಗಿದೆ.. ಇಂದು ಕಾಂಗ್ರೆಸ್ ತಾನು ಸಮಾಜವಾದಿ ಪಕ್ಷದ ಜೊತೆಗೆ ಮೈತ್ರಿಗೆ ತಯಾರಿದ್ದೇನೆ. ಇನ್ನೆರಡು ದಿನಗಳಲ್ಲಿ ಸೀಟು ಹಂಚಿಕೆ ಅಂತಿಮವಾಗಲಿದೆ ಅಂತ ನಾಯಕ ಗುಲಾಂ ನಬಿ ಅಜಾದ್ ಹೇಳಿದ್ದಾರೆ. ಕಾಂಗ್ರೆಸ್ ಮೂಲಗಳ ಪ್ರಕಾರ ಅಖಿಲೇಶ್ ಯಾದವ್ ಮತ್ತು ರಾಹುಲ್ ಗಾಂಧಿ ನಡುವೆ ಈಗಾಗಲೇ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ.
ಅಖಿಲೇಶ್ ನೇತೃತ್ವದಲ್ಲಿ ಚುನಾವಣೆಗೆ ಸಿದ್ಧತೆ
ಈ ಮಧ್ಯೆ ಕಾಂಗ್ರೆಸ್ ಕಡೆಯಿಂದ ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಅಭ್ಯರ್ಥಿ ಅಂತ ಹೇಳಲಾಗುತ್ತಿದ್ದ ಶೀಲಾ ದೀಕ್ಷಿತ್ ಹಿಂದೆ ಸರಿಯುವ ಮಾತಾಡಿದ್ದಾರೆ. ಅಲ್ಲದೇ, ಅಖಿಲೇಶ್ ನೇತೃತ್ವದಲ್ಲೇ ಅಸೆಂಬ್ಲಿ ಎಲೆಕ್ಷನ್ ಅಂತಲೂ ಸ್ಪಷ್ಟಪಡಿಸಿದ್ದಾರೆ.
ಮುಸ್ಲಿಂ ಮತಗಳ ವಿಭಜನೆ ತಡೆಗೆ ಒಕ್ಕೂಟ
ಯುಪಿಯಲ್ಲಿ ಕಾಂಗ್ರೆಸ್ 5 ರಿಂದ 6 ಪ್ರತಿಶತ ಮತಗಳನ್ನ ಮಾತ್ರ ಹೊಂದಿದೆ. ಇದ್ರಲ್ಲಿ ಮುಸ್ಲಿಂ ಮತಗಳು ವಿಭಜನೆ ಆದ್ರೆ ಬಿಜೆಪಿಗೆ ಲಾಭವಾಗಬಹುದು. ಹೀಗಾಗಿ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿರೋ ಸಿಎಂ ಅಖಿಲೇಶ್, ಕಾಂಗ್ರೆಸ್ ಜೊತೆ ಮೈತ್ರಿಗೆ ಮುಂದಾಗಿದ್ದಾರೆ. 402 ಸ್ಥಾನಗಳಲ್ಲಿ 300 ಸೀಟುಗಳಲ್ಲಿ ಎಸ್ಪಿ ಸ್ಪರ್ಧಿಸಲಿದ್ದು ಕಾಂಗ್ರೆಸ್ 75 ರಿಂದ 80 ಸೀಟು ಪಡೆಯಲಿದೆ. ಉಳಿದಂತೆ 25ರಲ್ಲಿ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳ ಸ್ಪರ್ಧಿಸಲಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.