ಪಿಯುಸಿಯಲ್ಲಿ 600 ಕ್ಕೆ 590 ಅಂಕ ಪಡೆದವ ದರೋಡೆಗೆ ಇಳಿದ : ಕಾರಣ ಏನು ಗೊತ್ತೆ ?

Published : Feb 24, 2017, 07:24 AM ISTUpdated : Apr 11, 2018, 01:00 PM IST
ಪಿಯುಸಿಯಲ್ಲಿ 600 ಕ್ಕೆ 590 ಅಂಕ ಪಡೆದವ ದರೋಡೆಗೆ ಇಳಿದ : ಕಾರಣ ಏನು ಗೊತ್ತೆ ?

ಸಾರಾಂಶ

ವಿಶೇಷವೆಂದರೆ ಪ್ರಕರಣದಲ್ಲಿ ಬಂಧಿತ ಸನತ್‌ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 590 ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ.

ಬೆಂಗಳೂರು(ಫೆ.24): ಕಲಿಕೆಯಲ್ಲಿ ಮುಂದಿದ್ದ ಸನತ್‌ ನಕಲಿ ದಾಖಲೆ ನೀಡಿ ‘ಸತೀಶ್‌' ಎಂಬ ಹೆಸರಲ್ಲಿ ಸಿಮ್‌ ಕಾರ್ಡ್‌ ಖರೀದಿಸಿದ್ದ. ಆ ಸಿಮ್‌ ಕಾರ್ಡ್‌ ಬಳಸಿ ದುಬಾರಿಯ ಹೆಡ್‌ಫೋನ್‌ ಬುಕ್‌ ಮಾಡಿದ್ದ. ಕಂಪನಿಯ ವರು ಡೆಲಿವರಿ ಮಾಡುವ ವೇಳೆ ಸ್ನೇಹಿತ ರೊಂದಿಗೆ ಸೇರಿ ಕಾರದ ಪುಡಿ ಎರಚಿ ದೋಚಿದ್ದ. ಡೆಲವರಿ ಬಾಯ್‌ ಮಹೇಶ ದೂರು ನೀಡುವಾಗ ಸಹ ಸತೀಶ್‌ ಮತ್ತು ಇತರರು ದೋಚಿದ್ದಾಗಿ ದೂರು ನೀಡಿದ್ದರು. ಆದರೆ, ಪೊಲೀಸರು ಆರೋಪಿಗಳನ್ನು ಬಂಧಿಸಿದಾಗಲೇ ಹೆಸರು ಬದಲಿಸಿದ್ದು ಬೆಳಕಿಗೆ ಬಂದಿದೆ.
ಆನ್‌ಲೈನ್‌ ರಿಟೇಲ್‌ ಕಂಪನಿ ಅಮೆಜಾನ್‌ನ ಡೆಲಿವರಿ ಬಾಯ್‌ ಕಣ್ಣಿಗೆ ಕಾರದ ಪುಡಿ ಎರಚಿ ದುಬಾರಿ ಬೆಲೆಯ ಆಡಿಯೋ ಪ್ರೊಫೆಷನಲ್‌ ಸ್ಟುಡಿಯೋ ಮಾನಿಟರ್‌ ಹೆಡ್‌ಫೋನ್‌ ದೋಚಿದ್ದ ಎಂಜಿನಿಯರಿಂಗ್‌, ಡಿಪ್ಲೊಮಾ ವಿದ್ಯಾರ್ಥಿಗಳು ಸೇರಿ ಒಟ್ಟು 5 ಮಂದಿಯನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತರಲ್ಲಿ ಒಬ್ಬಾತ ಬಾಲಕನಾಗಿದ್ದಾನೆ.
ವಿದ್ಯಾರ್ಥಿಗಳಾದ ಎಂ. ಸನತ್‌(20), ಓವೈಸ್‌ ಖಾನ್‌(19) ಹಾಗೂ ಇಸ್ಮಾಯಿಲ್‌ ಖಾನ್‌(19) ಮತ್ತು ಸೈಯದ್‌ ಸೈಫ್‌(19) ಬಂಧಿತರು. ಈ ನಾಲ್ವರನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, 16 ವರ್ಷದ ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕನನ್ನು ಪೊಲೀಸರು ಬಾಲಮಂದಿರಕ್ಕೆ ಕಳುಹಿಸಿದ್ದಾರೆ.
ವಿಶೇಷವೆಂದರೆ ಪ್ರಕರಣದಲ್ಲಿ ಬಂಧಿತ ಸನತ್‌ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 600ಕ್ಕೆ 590 ಅಂಕ ಪಡೆದಿದ್ದ ಪ್ರತಿಭಾವಂತ ವಿದ್ಯಾರ್ಥಿ. ಇನ್ನು ಓವೈಜ್‌ ಖಾನ್‌ ಡಿಪ್ಲೊಮೊ ಇನ್‌ ಸಿವಿಲ್‌ ಎಂಜಿನಿಯರಿಂಗ್‌ ಕೋರ್ಸ್‌ ಮಾಡುತ್ತಿದ್ದ. ಸೈಯದ್‌ ಸೈಫ್‌ ಗೂಡ್ಸ್‌ ಯಾರ್ಡ್‌ನಲ್ಲಿ ಕ್ಲೀನರ್‌ ಕೆಲಸ ಮಾಡಿಕೊಂಡಿದ್ದ. ಈ ಐದು ಮಂದಿ ಸ್ನೇಹಿತರಾಗಿದ್ದು, ಸನತ್‌ನ ದುಬಾರಿ ಬೆಲೆ ಹೆಡ್‌ಫೋನ್‌ ಆಸೆಗಾಗಿ ಈ ಕೃತ್ಯ ಎಸಗಿದ್ದಾನೆ.
ಏನಾಗಿತ್ತು?

ಅಮೆಜಾನ್‌ ಆ್ಯಪ್‌ನಲ್ಲಿ ಸನತ್‌ ಆಡಿಯೋ ಪ್ರೊಫೆಷನಲ್‌ ಸ್ಟುಡಿಯೋ ಮಾನಿಟರ್‌ ಹೆಡ್‌ಫೋನ್‌ ಬುಕ್‌ ಮಾಡಿದ್ದ. ಅದರಂತೆ ಫೆ.4ರ ಸಂಜೆ ಡೆಲಿವರಿ ಬಾಯ್‌ ಮಹೇಶ್‌ ಟಾಟಾ ಏಸ್‌ ವಾಹನದಲ್ಲಿ ಚಾಲಕ ರಾಮಕೃಷ್ಣ ಅವರೊಂದಿಗೆ ಸನತ್‌ ತಿಳಿಸಿದ್ದ ವಿಳಾಸದತ್ತ ಹೋಗಿದ್ದರು. ಈ ವೇಳೆ ಮಹೇಶ್‌ ಮೊಬೈಲ್‌ಗೆ ಸನತ್‌ ಕರೆ ಮಾಡಿ ಮಾನಸಿನಗರದ ಮುಖ್ಯರಸ್ತೆ ಬಳಿ ಇರುವುದಾಗಿ ತಿಳಿಸಿದ್ದ. ಅಲ್ಲಿಗೆ ಹೋದಾಗ ಸನತ್‌ ಟಾಟಾ ಏಸ್‌ ವಾಹನ ಏರಿ ತಮ್ಮ ಮನೆ ಬೀದಿಯ ಕೊನೆಯಲ್ಲಿರುವುದಾಗಿ ತಿಳಿಸಿ ಕರೆದೊಯ್ದಿದ್ದ. ಮುಂದೆ ಹೋದಂತೆ ರಸ್ತೆ ಬದಿ ನಿಂತಿದ್ದ ಕೆಂಪು ಬಣ್ಣದ ಕಾರ್‌ನಲ್ಲಿರುವ ತನ್ನ ಅಣ್ಣನಿಂದ ಹಣ ಕೊಡಿಸುವುದಾಗಿ ಹೇಳಿದ್ದ. ಕಾರಿನಲ್ಲಿದ್ದ ಮೂವರಲ್ಲಿ ಒಬ್ಬಾತ ಕಾರ್ಡ್‌ ನೀಡಿ ಸ್ವೈಪ್‌ ಮಾಡುತ್ತಿದ್ದಾಗ ಉಳಿದವರು ಮಹೇಶ ಮತ್ತು ವಾಹನದ ಚಾಲಕ ರಾಮಕೃಷ್ಣ ಅವರ ಕಣ್ಣಿಗೆ ಕಾರದ ಪುಡಿ ಎರಚಿದ್ದರು. ಬಳಿಕ ಮಹೇಶ ಬಳಿಯಿದ್ದ ಎಟಿಎಂ ಕಾರ್ಡ್‌ ಜೊತೆಗೆ .19,998 ಮೌಲ್ಯದ ಆಡಿಯೋ ಪ್ರೊಫೆಷನಲ್‌ ಸ್ಟುಡಿಯೋ ಮಾನಿಟರ್‌ ಹೆಡ್‌ಫೋನ್‌ (ಮಾಡೆಲ್‌ ಎಟಿಎಚ್‌/ಎಂ50ಎಕ್ಸ್‌) ಕಿತ್ತುಕೊಂಡು ಕಾರಿನಲ್ಲಿ ಪರಾರಿಯಾಗಿದ್ದರು.

ಈ ಕುರಿತು ಮಹೇಶ ನೀಡಿದ್ದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದ ಮೈಸೂರು ದಕ್ಷಿಣ ಠಾಣೆ ಪೊಲೀಸರು, ಆರೋಪಿಗಳನ್ನು ಬಂಧಿಸಿ ಹೆಡ್‌ ಫೋನ್‌, ಎಟಿಎಂ ಕಾರ್ಡ್‌ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರು ವಶಪಡಿಸಿಕೊಂಡಿದ್ದಾರೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪಿಎಫ್ ಹಣ ಹಿಂಪಡೆಯುವ ನೀತಿಯಲ್ಲಿ 11 ಬದಲಾವಣೆ, EPFO 3.0 ನಿಯಮ ಜಾರಿ
ಕ್ರಿಸ್ಮಸ್ ಹಬ್ಬಕ್ಕೆ ಭಾರತದ ಹಲವು ನಗರದಲ್ಲಿ ಡ್ರೈ ಡೇ; ಮದ್ಯದಂಗಡಿ, ಬಾರ್ ತೆರೆದಿರುತ್ತಾ?