ಬೆಂಗಳೂರಿನಲ್ಲಿ ಗುಜರಾತ್ ಶಾಸಕರ ಜೀವಕ್ಕೆ ಅಪಾಯ? ಸುಳಿವು ನೀಡಿದೆ ಗುಜರಾತ್'ನಿಂದ ಬಂದ ಪತ್ರ

By Suvarna Web DeskFirst Published Aug 6, 2017, 8:50 PM IST
Highlights

ಗುಜರಾತ್'ನ ಕಾಂಗ್ರೆಸ್ ಶಾಸಕರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಗುಜರಾತ್ ಸರಕಾರದ ಕಾರ್ಯದರ್ಶಿ ಮತ್ತು ಡಿಜಿಪಿಯವರು ಕರ್ನಾಟಕದ ಪೊಲೀಸರಿಗೆ ಈ ಬಗ್ಗೆ ಪತ್ರ ಬರೆದು ಶಾಸಕರಿಗೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದಾರೆ.

ಬೆಂಗಳೂರು(ಆ. 6): ಡಿಕೆಶಿ ಮೇಲಿನ ಐಟಿ ರೇಡ್ ಪ್ರಕರಣವು ಗುಜರಾತ್'ನ ಕಾಂಗ್ರೆಸ್ ಶಾಸಕರ ಕಾರಣದಿಂದ ಇಡೀ ದೇಶದ ಗಮನ ಸೆಳೆದಿತ್ತು. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯಿಂದ ಕುದುರೆ ವ್ಯಾಪಾರ ನಡೆಯುತ್ತಿದೆ ಎಂದು ಆರೋಪಿಸಿ 30ಕ್ಕೂ ಹೆಚ್ಚು ಗುಜರಾತ್ ಶಾಸಕರು ಬೆಂಗಳೂರಿಗೆ ಆಗಮಿಸಿದ್ದರು. ಇದೀಗ ಐಟಿ ರೇಡ್ ಬಳಿಕ ಟಾಪ್ ಸೀಕ್ರೆಟ್ ನ್ಯೂಸೊಂದು ಔಟ್ ಆಗಿದೆ. ಗುಜರಾತ್'ನ ಶಾಸಕರಿಗೆ ಅಗತ್ಯ ಭದ್ರತೆ ಒದಗಿಸುವಂತೆ ಗುಜರಾತ್ ಪೊಲೀಸ್ ಮಹಾನಿರ್ದೇಶಕರು ಬೆಂಗಳೂರಿನ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿಕೊಂಡಿದ್ದಾರೆ. ಟಾಪ್ ಸೀಕ್ರೆಟ್ ಎಂದು ಬರೆದಿರುವ ಈ ಪತ್ರದ ಪ್ರತಿ ಸುವರ್ಣನ್ಯೂಸ್'ಗೆ ಲಭಿಸಿದೆ. ಈ ಪತ್ರದ ಅಂಶವನ್ನು ಗಮನಿಸಿದರೆ ಬೆಂಗಳೂರಿನಲ್ಲಿ ಗುಜರಾತ್'ನ ಶಾಸಕರ ಜೀವಕ್ಕೆ ಅಪಾಯವಿರುವ ಸುಳಿವು ಸಿಕ್ಕಿದೆ.

ಗುಜರಾತ್'ನ ಕಾಂಗ್ರೆಸ್ ಶಾಸಕರ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿ ಆ ಪಕ್ಷವು ಚುನಾವಣಾ ಆಯೋಗಕ್ಕೆ ದೂರು ನೀಡಿತ್ತು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗದ ಸೂಚನೆಯ ಮೇರೆಗೆ ಗುಜರಾತ್ ಸರಕಾರದ ಕಾರ್ಯದರ್ಶಿ ಮತ್ತು ಡಿಜಿಪಿಯವರು ಕರ್ನಾಟಕದ ಪೊಲೀಸರಿಗೆ ಈ ಬಗ್ಗೆ ಪತ್ರ ಬರೆದು ಶಾಸಕರಿಗೆ ರಕ್ಷಣೆ ಒದಗಿಸುವಂತೆ ಕೇಳಿಕೊಂಡಿದ್ದಾರೆ.

Latest Videos

ಬೆಂಗಳೂರಿನ ಪೊಲೀಸರಿಗೆ ಗುಜರಾತ್ ಪೊಲೀಸರು ಮಾಡಿಕೊಂಡ ಮನವಿಗಳೇನು?
* ರಾಜ್ಯಸಭಾ ಚುನಾವಣೆಯವರೆಗೆ ಗುಜರಾತ್'ನ ಕಾಂಗ್ರೆಸ್ ಶಾಸಕರಿಗೆ ಅಪಾಯವಿದೆ.
* ಕರ್ನಾಟಕದಲ್ಲಿರುವಷ್ಟು ಕಾಲ ಅವರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ.
* ಶಾಸಕರ ಪ್ರಯಾಣದ ವಿವರಗಳನ್ನು ತಿಳಿದುಕೊಳ್ಳಿ;
* ಒಟ್ಟಾಗಿ ಪ್ರಯಾಣಿಸುವುದಿದ್ದರೆ ಇಡೀ ಗುಂಪಿಗೆ ಭದ್ರತೆ ಕೊಡಿ;
* ಪ್ರತ್ಯೇಕವಾಗಿ ಪ್ರಯಾಣಿಸುವುದಿದ್ದರೆ ಪ್ರತಿಯೊಬ್ಬ ಶಾಸಕರಿಗೂ ಪ್ರತ್ಯೇಕವಾಗಿ ಬಿಗಿಭದ್ರತೆ ಕೊಡಿ.
* ಶಾಸಕರು ಅಹ್ಮದಾಬಾದ್'ಗೆ ಬರುವ ನಿರೀಕ್ಷೆ ಇದೆ; ಆದರೆ, ಅವರು ಬೇರೆಡೆ ಹೋಗುವ ಯೋಜನೆ ಇದ್ದರೆ ನಮಗೆ ಕೂಡಲೇ ಮಾಹಿತಿ ನೀಡಿ.

click me!