
ವಾಷಿಂಗ್ಟನ್(ಮಾ.15): ನೀವು ಕುಡಿಯುವ ಟಾಪ್ ಕಂಪನಿಯ ನೀರಿನ ಬಾಟಲಿಗಳಲ್ಲಿ ಆರೋಗ್ಯಕ್ಕೆ ಮಾರಕವಾಗುವ ಪ್ಲ್ಯಾಸ್ಟಿಕ್ ಕಣಗಳಿವೆ ಎಂದು 9 ದೇಶಗಳಲ್ಲಿ ಕೈಗೊಂಡ ವೈದ್ಯಕೀಯ ಸಂಶೋಧನೆಯಿಂದ ಬಹಿರಂಗಗೊಂಡಿದೆ.
ನೀವು ಕುಡಿಯುತ್ತಿರುವಾಗಲೇ ನಿಧಾನವಾಗಿ ವಿಷದ ಕಣಗಳು ನಿಮ್ಮ ದೇಹಕ್ಕೆ ಸೇರುತ್ತದೆ ಎಂದು ಅಮೆರಿಕಾ ಮೂಲದ ಸರ್ಕಾರೇತರ ಸಂಸ್ಥೆ ವೈದ್ಯಕೀಯ ವರದಿಯ ಹಿನ್ನಲೆಯಿಂದ ವರದಿ ನೀಡಿದೆ. ಸಂಶೋಧನಾಕಾರರು ಭಾರತ, ಬ್ರೆಜಿಲ್, ಚೀನಾ, ಇಂಡೋನೇಷ್ಯಾ, ಕೀನ್ಯಾ, ಮೆಕ್ಸಿಕೊ, ಅಮೆರಿಕಾ, ಥೈಲ್ಯಾಂಡ್, ಲೆಬನಾನ್ ದೇಶಗಳಲ್ಲಿ 250 ಬಾಟಲ್'ಗಳಲ್ಲಿ ಸಂಶೋಧನೆ ಕೈಗೊಂಡು ವರದಿ ನೀಡಿದ್ದಾರೆ.
ಈ ವರದಿಯ ಆಧಾರದ ಮೇಲೆ ನೀರಿನ ಮೂಲಕ ಶೇ.93 ರಷ್ಟು ಪ್ಲಾಸ್ಟಿಕ್ ವಿಷ ಕಣಗಳು ದೇಹವನ್ನು ಸೇರಲಿದೆ. ಪ್ಲಾಸ್ಟಿಕ್ ಶಿಲಾಖಂಡರಾಶಿಗಳ ಪಾಲಿಪ್ರೊಪಿಲೀನ್, ನೈಲಾನ್, ಮತ್ತು ಪಾಲಿಎಥಿಲೀನ್ ಟೆರೆಫ್ಥಲೇಟ್ ಅನ್ನು ಒಳಗೊಂಡಿದೆ, ಇದನ್ನು ಬಾಟಲ್ ಕ್ಯಾಪ್'ಗಳನ್ನು ತಯಾರಿಸಲು ಬಳಸಲಾಗುತ್ತದೆ.
ವರದಿಯ ಅನುಸಾರ ಶೇ.65 ರಷ್ಟು ಪ್ಲಾಸ್ಟಿಕ್ ಕಣಗಳಿದ್ದರೆ ಫೈಬರ್ ಅಲಶಗಳು ಪತ್ತೆಯಾಗಲಿಲ್ಲ. ತಯಾರಿಕೆಯ ಪ್ರಕ್ರಿಯೆಯಲ್ಲಿಯೇ ಪ್ಲಾಸ್ಟಿಕ್ ಕಣಗಳು ನೀರನ್ನು ಸೇರಿಕೊಳ್ಳುತ್ತವೆ. ಬಹುತೇಕ ವಿಶ್ವದ ಎಲ್ಲ ದೇಶಗಳಲ್ಲಿ ಬಳಸುವ ನೀರಿನ ಬಾಟಲ್'ಗಳಲ್ಲಿಯೇ ಈ ಅಂಶಗಳು ಒಳಗೊಂಡಿರುತ್ತವೆ' ಎಂದು ವರದಿಯಲ್ಲಿ ತಿಳಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.