
ಗದಗ, (ಅ.21): ಗದಗ ತೋಂಟದಾರ್ಯ ಸಿದ್ದಲಿಂಗ ಸ್ವಾಮಿಗಳನ್ನು ನೆನೆದು ಜೇವರ್ಗಿಯ ಸಿದ್ದಬಸವ ಕಬೀರ ಶ್ರೀಗಳು ಭಾವುಕರಾಗಿ ಮಾತನಾಡಿದ್ದಾರೆ.
ಸಿದ್ದಲಿಂಗ ಸ್ವಾಮಿ ಅವರಿಗೆ ನುಡಿ ನಮನ ಸಲ್ಲಿಸುವ ವೇಳೆ ಭಾವುಕಾಗಿ ಮಾತನಾಡಿದ ಜೇವರ್ಗಿಯ ಸಿದ್ದಬಸವ ಕಬೀರ ಶ್ರೀಗಳು, ಸಿದ್ದಲಿಂಗ ಸ್ವಾಮಿಗಳ ಉಪನ್ಯಾಸ ಕೇಳಿ ಇಸ್ಲಾಂ ಧರ್ಮ ಬಿಟ್ಟು ಬಂದು ಸನ್ಯಾಸಿ ಆಗಿದ್ದೇನೆ. ಜೇವರ್ಗಿಯಲ್ಲಿರುವ ನನ್ನ ಮಠಕ್ಕೆ ಆಗಾಗ ಬರುತ್ತಿದ್ದರು ಎಂದು ಸಿದ್ದಲಿಂಗ ಸ್ವಾಮಿಗಳನ್ನು ನೆನೆದು ಭಾವುರಾದರು.
ಗದಗ ತೋಂಟದಾರ್ಯ ಮಠಕ್ಕೆ ನೂತನ ಉತ್ತರಾಧಿಕಾರಿ ನೇಮಕ
ಮೂಲಭೂತ ವಾದಿಗಳು ನನಗೆ ತೊಂದರೆ ಕೊಡುತ್ತಿದ್ದಾರೆ ಎಂದು ಹೇಳಿದರೆ, ನೀನು ಅದರ ಬಗ್ಗೆ ತೆಲೆಕೆಡಿಸಿಕೊಳ್ಳಬೇಡ. ನನ್ನ ಮೇಲೇಯೇ ಕಲ್ಲು ಎಸೆದಿದ್ದು, ಯಾರನ್ನು ಬಿಟ್ಟಿಲ್ಲ ಭಯ ಪಡಬೇಡ.
ಬಸವಣ್ಣನನ್ನು ಮುಂದಿಟ್ಟುಕೊಂಡು ಸಾಗು ಎಂದು ಧೈರ್ಯ ತುಂಬಿದ್ದರು ಎಂದು ಸಿದ್ದಬಸವ ಕಬೀರ ಶ್ರೀಗಳು ಸಿದ್ದಲಿಂಗ ಸ್ವಾಮಿಗಳನ್ನ ನೆನಪಿಸಿಕೊಂಡರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.