
ಬೆಂಗಳೂರು(ನ.16): ನಾಳೆ ರಾಜ್ಯದ ಗ್ರಾಹಕರಿಗೆ ತೊಂದರೆಯಾಗುವ ಸಾಧ್ಯತೆಯಿದೆ. ಕೇವಲ ಅಂಚೆ ಕಚೇರಿ ಹಾಗೂ ಎಟಿಎಂ'ಗಳಲ್ಲಿ ಹಣವಿದ್ದರೆ ಮಾತ್ರ ಗ್ರಾಹಕರಿಗೆ ನಿರಾಳವಾಗಬಹುದು. ನಾಳೆ ಕನಕ ಜಯಂತಿಯ ಪ್ರಯುಕ್ತ ರಾಜ್ಯ ಸರ್ಕಾರ ರಜೆ ಘೋಷಿಸಿದೆ. ಕೇಂದ್ರ ಸರ್ಕಾರ ಹಳೆಯ 500 ಹಾಗೂ 1000 ನೋಟು ರದ್ದು ಪಡಿಸಿದ 8 ದಿನಗಳ ನಂತರ ರಾಜ್ಯ ಸರ್ಕಾರ ಕನಕ ಜಯಂತಿಯ ಪ್ರಯುಕ್ತ ಎಲ್ಲ ಬ್ಯಾಂಕುಗಳಿಗೆ ರಜೆ ಘೋಷಿಸಿದೆ. ಗ್ರಾಹಕರು ತಮ್ಮ ಹಣಕಾಸಿನ ವಹಿವಾಟನ್ನು ಅಂದರೆ ಬದಲಿ ನೋಟಿನ ವ್ಯವಸ್ಥೆಯನ್ನು ಅಂಚೆ ಕಚೇರಿ ಮೂಲಕ ವ್ಯವಹರಿಸಿಕೊಳ್ಳಬಹುದು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.