ನಾಳೆ ತಮಿಳುನಾಡಿನ ಕಡೆಗೆ ಹೊರಟಿದ್ದೀರಾ? ಎಚ್ಚರ!

Published : Sep 14, 2016, 10:42 AM ISTUpdated : Apr 11, 2018, 12:42 PM IST
ನಾಳೆ ತಮಿಳುನಾಡಿನ ಕಡೆಗೆ ಹೊರಟಿದ್ದೀರಾ? ಎಚ್ಚರ!

ಸಾರಾಂಶ

ಬೆಂಗಳೂರು (ಸೆ.14): ಕಾವೇರಿ ನೀರಿಗಾಗಿ ಇಡೀ ಕರ್ನಾಟಕ ಹೊತ್ತಿ ಉರಿಯುತ್ತಿದೆ. ಆದ್ರೆ, ಈಗಿನ ಸರದಿ ತಮಿಳುನಾಡಿನದ್ದು. ನಾಡಿದ್ದು ಸೆ.16 ರಂದು ವಿವಿಧ ಸಂಘಟನೆಗಳು ತಮಿಳುನಾಡು ಬಂದ್​ಗೆ ಕರೆ ನೀಡಿವೆ. ಪರಿಣಾಮ ಬೆಂಗಳೂರು ಸೇರಿ ಗಡಿ ಭಾಗಗಳಾದ ಆನೇಕಲ್, ಸರ್ಜಾಪುರ, ಮೈಸೂರು, ಚಾಮರಾಜನಗರ ಗಡಿಯಲ್ಲಿ ನಾಳೆಯಿಂದಲೇ ಪೊಲೀಸ್ ಕಟ್ಟೆಚ್ಚರ ವಹಿಸಲಾಗಿದೆ. ಎಲ್ಲಾ ಡಿಸಿಪಿಗಳು ಕರ್ತವ್ಯಕ್ಕೆ ಹಾಜರಾಗಿ ಭದ್ರತಾ ಹೊಣೆ ಹೊರುವಂತೆ ಬೆಂಗಳೂರು ಪೊಲೀಸ್ ಆಯುಕ್ತ ಎನ್​.ಎಸ್​.ಮೆಘರಿಕ್ ಸೂಚಿಸಿದ್ದಾರೆ.

ನಾಳೆ ಯಾರಾದ್ರೂ ತಮಿಳುನಾಡು ಕಡೆಗೆ ಹೊರಟಿದ್ದರೆ ದಯವಿಟ್ಟು ಮುಂದೂಡಿಕೆ ಮಾಡಿದ್ರೆ ಒಳಿತು. ಯಾಕಂದ್ರೆ, ಕಾವೇರಿ ನೀರಿಗಾಗಿ ಇಡೀ ಕರ್ನಾಟಕ ಬೆಂಕಿ ಚೆಂಡು ರೀತಿ ತಮಿಳುನಾಡಿನಲ್ಲೂ ಸನ್ನಿವೇಶ ಉಂಟಾಗುವ ಸಾಧ್ಯತೆಯಿದೆ. ಅಲ್ಲಲ್ಲಿ ಸರ್ಕಾರಿ ಸಾರಿಗೆ, ಸಾಗಾಣೆ ಲಾರಿ ಸೇರಿ ಟೂರಿಸ್ಟ್ ವಾಹನಗಳಿಗೂ ಬಿಸಿ ತಟ್ಟುವ ಸಾಧ್ಯತೆಯಿದೆ. ಪ್ರಯಾಣಕ್ಕೆ ಕರ್ನಾಟಕ ನೋಂದಣಿ ವಾಹನಗಳ ಬಳಕೆ ಮಾಡದಿರುವುದು ಒಳಿತು. ಎಲ್ಲಾದರು ಕನ್ನಡ ವಾಹನಗಳು ಅಂತ ರಾಜ್ಯದಲ್ಲಿ ಆದಂತೆ ಗಲಾಟೆಯಾಗಿ ಕಾನೂನು ಸುವ್ಯವಸ್ಥೆ ಆಗಬಹುದು. ಹೀಗಾಗಿ ಪ್ರಯಾಣವನ್ನ ಮುಂಡೂಡಿದರೆ ಒಳಿತು.

ಗಮನಿಸಿ:
* ವಿವಿಧ ರೈತಪರ ಸಂಘಟನೆಗಳ ಬಂದ್​ಗೆ ರಾಜಕೀಯ ಬೆಂಬಲ ನೀಡಿವೆ.  
* ಇಡೀ ತಮಿಳುನಾಡು ಸ್ತಬ್ಧವಾಗಲಿದ್ದು ಸಂಚಾರ ಬಹುತೇಕ ಅನುಮಾನವಾಗಿದೆ.
* ಕರ್ನಾಟಕ ನೋಂದಣಿ ವಾಹನಗಳಲ್ಲಿ ಪ್ರಯಾಣ ಬೇಡವೇ ಬೇಡ
* ಬೆಂಗಳೂರಲ್ಲಿ ಆದಂತೆ ಅಲ್ಲೂ ಗಲಾಟೆ, ಪ್ರತಿಭಟನೆ ಹೆಚ್ಚಾಗಬಹುದು
* ಡಿಎಂಕೆ ಸೇರಿ ಪ್ರಮುಖ ರಾಜಕೀಯ ಪಕ್ಷಗಳಿಂದಲೂ ಬಂದ್​ಗೆ ಬೆಂಬಲ
* ನಾಳೆ-ನಾಡಿದ್ದು ಮಾತ್ರವಲ್ಲ, ಶುಕ್ರವಾರ, ಶನಿವಾರ ಮತ್ತು ಭಾನುವಾರವೂ ಬಿಸಿ ಇರಬಹುದು
* ಸತತ ನಾಲ್ಕು ದಿನಗಳ ಕಾಲ ‘ಕಾವೇರಿ’ಗಾಗಿ ಹೋರಾಟಕ್ಕೆ ಸಜ್ಜು

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಲವರ್ ಜೊತೆ ಸೇರಿ ಪತಿ ಹತ್ಯೆಗೈದು ದೇಹದ ಒಂದೊಂದು ಪೀಸ್ ಜಿಲ್ಲೆಯ ಪ್ರತಿ ಗಾಮದಲ್ಲಿ ಎಸೆದ ಪತ್ನಿ
ಗೋವಾ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿಗೆ ಕ್ಲೀನ್ ಸ್ವೀಪ್ ಗೆಲುವು, 10 ಸ್ಥಾನಕ್ಕೆ ತೃಪ್ತಿಪಟ್ಟ ಕಾಂಗ್ರೆಸ್