
ನವದೆಹಲಿ[ಜ.24]: ಟೋಲ್ ಬೂತ್‌ಗಳಲ್ಲಿ ಸರತಿ ಸಾಲಿನಲ್ಲಿ ನಿಂತು, ನಿಮಿಷಗಟ್ಟಲೆ ಕಾಯಬೇಕು ಎಂಬುದು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವ ವಾಹನ ಸವಾರರ ಹಳೆಯ ದೂರು. ಇದನ್ನು ಈಗ ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸರ್ಕಾರ, ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಎಲ್ಲ ಟೋಲ್ ಬೂತ್‌ಗಳನ್ನೇ ರದ್ದುಗೊಳಿಸಲು ಮುಂದಾಗಿದೆ. ಟೋಲ್ ಸಂಗ್ರಹಕ್ಕಾಗಿ ವಾಹನಗಳಲ್ಲೇ ಅಳವಡಿಸಬಹುದಾದ ಉಪಕರಣವೊಂದನ್ನು ಪರಿಚಯಿಸಲು ಉದ್ದೇಶಿಸಿದೆ.
ವಾಹನಗಳ ಮ್ಯೂಸಿಕ್ ಸಿಸ್ಟಂ ಬಳಿ ಈ ಉಪಕರಣ ಇರುತ್ತದೆ. ಅದು ವಾಹನ ಮಾಲೀಕರ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುತ್ತದೆ. ವಾಹನ ಸವಾರ ಒಂದು ನಿರ್ದಿಷ್ಟರಾಷ್ಟ್ರೀಯ ಹೆದ್ದಾರಿ ಬಳಸಿದರೆ, ಅದಕ್ಕೆ ತಗುಲುವ ಶುಲ್ಕ ನೇರವಾಗಿ ಆತ/ಆಕೆಯ ಬ್ಯಾಂಕ್ ಖಾತೆಯಿಂದ ಕಡಿತಗೊಳ್ಳುತ್ತದೆ ಎಂದು ಹಿಂದಿ ದೈನಿಕವೊಂದು ವರದಿ ಮಾಡಿದೆ.
ಈಗಾಗಲೇ ದೆಹಲಿ- ಮುಂಬೈ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಉಪಕರಣದ ಪ್ರಯೋಗ ನಡೆಯುತ್ತಿದೆ. ಅದು ಯಶಸ್ವಿಯಾದರೆ, ದೇಶಾದ್ಯಂತ ವಿಸ್ತರಿಸಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಅಧಿಸೂಚನೆ ಹೊರಡಿಸಲಿದ್ದಾರೆ ಎಂದು ವರದಿ ಹೇಳಿದೆ.
ಟೋಲ್‌ಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಫಾಸ್ಟ್‌ಟ್ಯಾಗ್‌ಗಳನ್ನು ಕೇಂದ್ರ ಸರ್ಕಾರ ಪರಿಚಯಿಸಿದೆ. ಅದು ಜನಪ್ರಿಯವೂ ಆಗಿದೆ. ಅಲ್ಲದೆ ಟೋಲ್ ಸಂಗ್ರಹ ಕೂಡ ಹೆಚ್ಚಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ