ಮುಸ್ಲಿಂ ಜನಸಂಖ್ಯೆ ನಿಯಂತ್ರಿಸಿ: ಗುಡುಗಿದ ತೊಗಾಡಿಯಾ!

First Published Jul 4, 2018, 7:27 PM IST
Highlights

ಮುಸ್ಲಿಂ ಜನಸಂಖ್ಯೆ ನಿಯಂತ್ರಣಕ್ಕೆ ತೊಗಾಡಿಯಾ ಒತ್ತಾಯ

ಮುಸ್ಲಿಮರ ಅಲ್ಪಸಂಖ್ಯಾತ ಮಾನ್ಯತೆ ರದ್ದತಿಗೆ ಆಗ್ರಹ

ತೆರಿಗೆ ಹಣ ಎಲ್ಲ ಸಮುದಾಯದ ಅಭಿವೃದ್ಧಿಗೂ ಬಳಕೆಯಾಗಲಿ

ಜೈಪುರ್‌ನಲ್ಲಿ ಮತ್ತೆ ಗುಡುಗಿದ ಪ್ರವೀಣ್ ತೊಗಾಡಿಯಾ

ಜೈಪುರ್(ಜು.4): ಮುಸ್ಲಿಮರ ಅಲ್ಪಸಂಖ್ಯಾತ ಮಾನ್ಯತೆಯನ್ನು ರದ್ದುಗೊಳಿಸಬೇಕು ಮತ್ತು ಅವರ ಜನಸಂಖ್ಯೆ ನಿಯಂತ್ರಿಸಲು ಎರಡು ಮಕ್ಕಳ ಮಿತಿ ಹೇರಬೇಕು ಎಂದು ವಿಶ್ವ ಹಿಂದೂ ಪರಿಷತ್ ಮಾಜಿ ನಾಯಕ ಪ್ರವೀಣ್ ತೊಗಾಡಿಯಾ ಒತ್ತಾಯಿಸಿದ್ದಾರೆ.

ಜೈಪುರದಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ತೊಗಾಡಿಯಾ, ಈ ಕೂಡಲೇ ಮುಸ್ಲಿಮರ ಅಲ್ಪಸಂಖ್ಯಾತ ಮಾನ್ಯತೆ ಹಿಂಪಡೆಯಬೇಕು ಮತ್ತು ಎರಡು ಮಕ್ಕಳ ನೀತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.

ಜನರಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮುಸ್ಲಿಮರಿಗಾಗಿ ಖರ್ಚು ಮಾಡಬಾರದು. ಅದರ ಬದಲು ಇತರೆ ಸಮುದಾಯದ ಬಡವರ ಕಲ್ಯಾಣಕ್ಕಾಗಿ ಖರ್ಚು ಮಾಡಲಿ ಎಂದು ಇತ್ತೀಚಿಗಷ್ಟೇ ಅಂತರಾಷ್ಟ್ರೀಯ ಹಿಂದೂ ಪರಿಷತ್ ಸ್ಥಾಪಿಸಿದ ತೊಗಾಡಿಯಾ ಹೇಳಿದ್ದಾರೆ.

ನಮ್ಮ ನೂತನ ಸಂಘಟನೆ ರಾಜಕೀಯದ ಮೇಲೆ ಪ್ರಭಾವ ಬೀರಲು ದೇಶದಲ್ಲಿ 20 ಕೋಟಿ ಹಿಂದೂಗಳ ಮತ ಬ್ಯಾಂಕ್ ಅನ್ನು ಸೃಷ್ಟಿಸಲಿದೆ ಎಂದು ತೊಗಾಡಿಯಾ ತಿಳಿಸಿದ್ದಾರೆ. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಹಣದುಬ್ಬರ, ರೈತರ ಆತ್ಮಹತ್ಯೆ ತಡೆಯುವಲ್ಲಿ ಮತ್ತು ಉದ್ಯೋಗ ಸೃಷ್ಟಿಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದರು.

click me!