ಇಂದು ಜಂಟಿ ಆಧಿವೇಶನಕ್ಕೆ ತೆರೆ; ಇವತ್ತಾದರೂ ಹಾಜರಾಗ್ತಾರಾ ಜಾರಕಿಹೊಳಿ..?

Published : Feb 14, 2017, 03:55 AM ISTUpdated : Apr 11, 2018, 01:05 PM IST
ಇಂದು ಜಂಟಿ ಆಧಿವೇಶನಕ್ಕೆ ತೆರೆ; ಇವತ್ತಾದರೂ ಹಾಜರಾಗ್ತಾರಾ ಜಾರಕಿಹೊಳಿ..?

ಸಾರಾಂಶ

ಇನ್ನು ಎರಡೂ ಸದನಗಳಲ್ಲಿ ಇಂದಿನ ಕಾರ್ಯ ಕಲಾಪ ಪಟ್ಟಿಯಿಂದ ಪ್ರಶ್ನೋತ್ತರ ಕಲಾಪವನ್ನು ಕೈಬಿಡಲಾಗಿದೆ.

ಬೆಂಗಳೂರು(ಫೆ.14): ಇಂದು ವಿಧಾನ ಮಂಡಲ ಜಂಟಿ ಅಧಿವೇಶನದ ಕೊನೆಯ ದಿನವಾಗಿದ್ದು, ವಿಧಾನಸಭೆಯಲ್ಲಿ ಇಂದು ರಾಜ್ಯಪಾಲರ ಭಾಷಣದ ಮೇಲೆ ನಡೆದ ಚರ್ಚೆಗೆ ರಾಜ್ಯ ಸರ್ಕಾರ ಉತ್ತರ ನೀಡಲಿದೆ ಹಾಗೆಯೇ ಬಳಿಕ ಸದನ ವಂದನಾ ನಿರ್ಣಯ ಕೈಗೊಳ್ಳಲಿದೆ.

ಇನ್ನು  ವಿಧಾನ  ಪರಿಷತ್'ನಲ್ಲಿ ಕೂಡಾ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸಿಎಂ ಉತ್ತರ ನೀಡಲಿದ್ದು, ಕಂಬಳಕ್ಕೆ ಅವಕಾಶ ಮಾಡಿಕೊಡುವ ತಿದ್ದುಪಡಿ ವಿಧೇಯಕ ಸೇರಿದಂತೆ ನಾಲ್ಕು ಪ್ರಮುಖ ವಿಧೇಯಕಗಳು ಅಂಗೀಕಾರಗೊಳ್ಳಲಿವೆ.

ಇನ್ನು ಐಟಿ‌ ದಾಳಿ ಪ್ರಕರಣದಿಂದಾಗಿ ಸಚಿವ ರಮೇಶ್ ಜಾರಕಿಹೊಳಿ ಕೊನೆಯ ದಿನವಾದ ಇಂದಾದರೂ ಸದನಕ್ಕೆ ಹಾಜರಾಗುತ್ತಾರಾ, ವಿಪ್ ನೀಡಿದರೂ ಸದನಕ್ಕೆ ಗೈರಾದ ಅಡಳಿತ ಪಕ್ಷದ ಸದಸ್ಯರು ಸಿಎಂ ಭಾಷಣದ ವೇಳೆಗಾದರೂ ಇಂದು ಸದನಕ್ಕೆ ಹಾಜರಾಗುತ್ತಾರಾ? ಕಾದು ನೋಡಬೇಕು. ಇನ್ನು ಎರಡೂ ಸದನಗಳಲ್ಲಿ ಇಂದಿನ ಕಾರ್ಯ ಕಲಾಪ ಪಟ್ಟಿಯಿಂದ ಪ್ರಶ್ನೋತ್ತರ ಕಲಾಪವನ್ನು ಕೈಬಿಡಲಾಗಿದೆ.

ವರದಿ: ಕಿರಣ್ ಹನಿಯಡ್ಕ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

'ರಸ್ತೆ-ಚರಂಡಿ ನಿರ್ಮಾಣದಿಂದ ಬಡವರು ಉದ್ದಾರ ಆಗ್ತಾರಾ?' ಗ್ಯಾರಂಟಿ ಸ್ಕೀಂ ಟೀಕೆಗೆ ಗೃಹಸಚಿವ ಪರಂ ತಿರುಗೇಟು!
ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ನಿಧನ, ದಾವಣಗೆರೆ ವ್ಯಾಪ್ತಿಯ ಶಾಲೆಗಳಿಗೆ ನಾಳೆ ರಜೆ