ಕಾವೇರಿ ಕಿಚ್ಚಿಗೆ ಬಂದ್ ಆಗಲಿದೆ ಕರುನಾಡು: ಮೊದಲ ಬಾರಿಗೆ ಮೆಡಿಕಲ್ ಸೌಲಭ್ಯವೂ ಬಂದ್

Published : Sep 08, 2016, 07:29 PM ISTUpdated : Apr 11, 2018, 12:51 PM IST
ಕಾವೇರಿ ಕಿಚ್ಚಿಗೆ ಬಂದ್ ಆಗಲಿದೆ ಕರುನಾಡು: ಮೊದಲ ಬಾರಿಗೆ ಮೆಡಿಕಲ್ ಸೌಲಭ್ಯವೂ ಬಂದ್

ಸಾರಾಂಶ

ಬೆಂಗಳೂರು(ಸೆ.09): ಇಂದು ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ರೋಡಿಗಿಳಿಯಲ್ಲ. ಆಟೋ, ಟ್ಯಾಕ್ಸಿ  ಸಂಚರಿಸಲ್ಲ, ನಮ್ಮ ಮೆಟ್ರೋ ಓಡಾಡಲ್ಲ,  ಮಾಲ್‌, ಚಿತ್ರಮಂದಿರಗಳು ತೆಗೆಯಲ್ಲ.  ಕಾರಣ  ಕರ್ನಾಟಕ ಬಂದ್ . ಹೌದು ಕಾವೇರಿ ಕಿಚ್ಚಿಗೆ ಇವತ್ತು ಕರುನಾಡು ಸಂಪೂರ್ಣ ಸ್ತಬ್ದವಾಗಲಿದೆ.  ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ರಾಜ್ಯಕ್ಕೆ ಆದ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟ  ಇಂದು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು, ಸಂಪೂರ್ಣ ಯಶಸ್ವಿಯಾಗಲಿದೆ.

ತೀವ್ರಗೊಂಡ ಕಾವೇರಿ ಕಿಚ್ಚು: ಇಂದು ಕರ್ನಾಟಕ ಬಂದ್

ಹೌದು ರಾಜ್ಯದ ಜನರು ಇಂದು ಮತ್ತೊಂದು ಬಂದ್ ಎದುರಿಸಬೇಕಾಗಿದೆ. ಕಾವೇರಿ ಕಿಚ್ಚಿಗೆ ಇಂದು ಕರುನಾಡು ಸಂಪೂರ್ಣ ಸ್ತಬ್ಧವಾಗಲಿದೆ.  ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರೋದನ್ನು ವಿರೋಧಿಸಿ ಇಂದು ಕನ್ನಡಪರ ಸಂಘಟನೆಗಳ ಒಕ್ಕೂಟ ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಇಂದಿನ ಕರ್ನಾಟಕ ಬಂದ್ ‌ಗೆ   ಕಾವೇರಿ ಕೊಳ್ಳದ ಜಿಲ್ಲೆಗಳು ಸಂಪೂರ್ಣ ಸ್ತಬ್ದವಾಗಲಿವೆ. ಜನಜೀವನ ಅಸ್ತವ್ಯಸ್ತಗೊಳ್ಳುವುದು ಪಕ್ಕ ಆಗಿದೆ.  ಈ ಬಂದ್'ಗೆ ಕೆಎಸ್ಆರ್‌ಟಿಸಿ, ಕನ್ನಡ ಚಿತ್ರೋದ್ಯಮ, ಕನ್ನಡ ಸಾಹಿತ್ಯ ಪರಿಷತ್ ಸೇರಿದಂತೆ  ಸುಮಾರು 1300ಕ್ಕೂ ಅಧಿಕ ಸಂಘಟನೆಗಳು ಬೆಂಬಲ ನೀಡಿವೆ.

ಏನಿರಲ್ಲ..

-ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್‌ ರೋಡಿಗಿಳಿಯಲ್ಲ

-ಆಟೋ, ಟ್ಯಾಕ್ಸಿ  ಸಂಚರಿಸಲ್ಲ

-ನಮ್ಮ ಮೆಟ್ರೋ ಓಡಾಡಲ್ಲ

-ಮಾಲ್‌, ಚಿತ್ರಮಂದಿರಗಳು ಕ್ಲೋಸ್

-ಎಪಿಎಂಸಿ ಮಾರುಕಟ್ಟೆಗಳು ಬಂದ್

-ಶಾಲಾ ಕಾಲೇಜುಗಳಿಗೆ ರಜೆ

-ತಮಿಳು ಟಿವಿ ಚಾನೆಲ್​ಗಳು ಬರಲ್ಲ

-ಪೆಟ್ರೋಲ್ ಬಂಕ್ ತೆರೆದಿರಲ್ಲ

-ಸರ್ಕಾರಿ ಕಚೇರಿಗಳು ಬಹುತೇಕ ಸ್ಥಗಿತ

-ಹೋಟೆಲ್, ರೆಸ್ಟೋರೆಂಟ್, ಬಾರ್ ಇರಲ್ಲ

-ಬ್ಯಾಂಕ್, ಪೋಸ್ಟ್  ಆಫೀಸ್ ಕೂಡಾ ಬಂದ್

ಇನ್ನು ಬಂದ್ ಇದ್ದರೂ ಕೆಲವೊಂದಿಷ್ಟು ತುರ್ತು ಸೇವೆಗಳು ಎಂದಿನಂತೆ ಇರಲಿವೆ.

ಏನಿರುತ್ತೆ?

-ರೈಲು ಸಂಚಾರ

-ಹಾಲು ಮಾರಾಟ,

-ಆಸ್ಪತ್ರೆ, ಆಂಬುಲೆನ್ಸ್

-ಎಟಿಎಂ ಸೌಲಭ್ಯ

-ಹಾಲು, ದಿನಪತ್ರಿಕೆಗಳು

ಸೇರಿದಂತೆ ಅಗತ್ಯ ತುರ್ತು ಸೇವೆಗಳು ಎಂದಿನಂತೆ ಇರಲಿವೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ ಬೆಂಗಳೂರಿನ ಔಷಧ ಅಂಗಡಿಗಳ ಸಂಘ ಬೆಂಬಲ ಕೊಟ್ಟಿದೆ. ಹೀಗಾಗಿ 3 ಸಾವಿರ ಮೆಡಿಕಲ್ ಷಾಪ್​ಗಳು ಬೆಳಗ್ಗೆಯಿಂದ ಸಂಜೆ 6 ಗಂಟೆವರೆಗೆ ಸ್ಥಗಿತವಾಗಲಿವೆ. ಒಟ್ಟಿನಲ್ಲಿ ಕಾವೇರಿ ಕಿಚ್ಚಿಗೆ ಕರುನಾಡ ಸಂಪೂರ್ಣ ಸ್ತಬ್ದವಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಯುದ್ಧ ನಿಲ್ಲಿಸಲು ಸಿದ್ಧ, ಆದರೆ ಷರತ್ತುಗಳು ಅನ್ವಯ: ಇರಾನ್‌
ಹೋರ್ಮುಜ್‌ನಲ್ಲಿ ಸಾಗುವ ಹಡಗಿಗೆ ನಮ್ಮ ನೌಕಾಪಡೆ ಕಾವಲು : ಟ್ರಂಪ್‌