
ಗಾಂಧಿನಗರ(ಸೆ.17): ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು 66ನೇ ಹುಟ್ಟು ಹಬ್ಬ ಸಂಭ್ರಮ.. ಈಗಾಗಲೇ ಪ್ರಧಾನಿ ಗುಜರಾತ್ನ ಗಾಂಧಿನಗರಕ್ಕೆ ತೆರಳಿ ತಾಯಿ ಹೀರಾಬೆನ್ರವರ ಆಶೀರ್ವಾದ ಪಡೆದಿದ್ದಾರೆ.
ಪ್ರಧಾನಿಯವರು ನವಸಾರಿ ಜಿಲ್ಲೆಯ ಬುಡಕಟ್ಟು ಅಂಗವಿಕಲ ಮಕ್ಕಳೊಂದಿಗೆ ಜನ್ಮದಿನವನ್ನು ಆಚರಿಸಿಕೊಳ್ಳಲಿದ್ದಾರೆ. ಬುಡಕಟ್ಟು ಜಿಲ್ಲೆಯಾದ ದಾಹೋದ್‌ಗೆ ತೆರಳಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಲಿದ್ದಾರೆ ಮತ್ತು ಸಮಾವೇಶ ಉದ್ದೇಶಿಸಿ ಮಾತನಾಡಲಿದ್ದಾರೆ.
ಸೂರತ್ ಮೂಲದ ಬೇಕರಿಯೊಂದರ ಮಾಲೀಕರು, ಸ್ವಯಂ ಸೇವಾ ಸಂಸ್ಥೆಯೊಂದರ ಜೊತೆಗೂಡಿ ಪಿರಮಿಡ್ ಆಕಾರದ ಬೃಹತ್ ಕೇಕ್ ತಯಾರಿಸಿದ್ದಾರೆ.
ಸೂರತ್ ನ ‘ಅತುಲ್ ಬೇಕರಿ’ ಸ್ವಯಂ ಸೇವಾ ಸಂಸ್ಥೆ ‘ಶಕ್ತಿ ಫೌಂಡೇಶನ್’ ಜೊತೆಗೂಡಿ ಈ ಕೇಕ್ ತಯಾರಿಸಿದ್ದು, ಮಹಿಳಾ ಸಬಲೀಕರಣಕ್ಕಾಗಿ 5 ಸಾವಿರ ಮಹಿಳೆಯರ ಸಮ್ಮುಖದಲ್ಲಿ ಮೋದಿ ಕೇಕ್ ಕತ್ತರಿಸಲಿದ್ದಾರೆ. ಈ ಮೂಲಕ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳಲಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.