
ನವದೆಹಲಿ (ಏ.07): ಭಾರತವು ಸಮಾನತಾವಾದಿ ದೇಶ ಎಂದು ಸಮರ್ಥಿಸುವ ಭರದಲ್ಲಿ ಬಿಜೆಪಿ ಸಂಸದ ತರುಣ್ ವಿಜಯ್ ಜನಾಂಗೀಯವಾದ ಹೇಳಿಕೆ ನೀಡಿ ವಿವಾದಕ್ಕೊಳಗಾಗಿದ್ದಾರೆ.
ಆಫ್ರಿಕನ್ ದೇಶಗಳ ಪ್ರಜೆಗಳ ಮೇಲೆ ಇತ್ತೀಚಿಗೆ ನಡೆದ ಹಲ್ಲೆ ಘಟನೆಗಳ ಕುರಿತು ಅಲ್-ಜಝೀರಾ ಸುದ್ದಿವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂಡೋ-ಆಫ್ರಿಕನ್ ಸಂಸದೀಯ ಸ್ನೇಹಕೂಟದದ ಅಧ್ಯಕ್ಷರೂ ಆಗಿರುವ ತರುಣ್ ವಿಜಯ್ ದಕ್ಷಿಣ ಭಾರತೀಯರನ್ನು ಕಪ್ಪು-ವರ್ಣೀಯರೆಂದು ಕರೆಯುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ನಾವು ಜನಾಂಗೀಯವಾದಿಗಳಾಗುತ್ತಿದ್ದರೆ ದಕ್ಷಿಣ ಭಾರತೀಯರೊಂದಿಗೆ, ಅಂದರೆ ತಮಿಳುನಾಡು, ಕರ್ನಾಟಕ ಮತ್ತು ಆಂಧ್ರದವರೊಂದಿಗೆ ಯಾಕೆ ಜೀವಿಸುತ್ತಿದ್ದೇವೆ? ನಮ್ಮ ಸುತ್ತುಮುತ್ತಲು ಎಲ್ಲಾ ಕಡೆ ಕಪ್ಪುಜನರಿದ್ದಾರೆ., ಎಂದು ತರುಣ್ ವಿಜಯ್ ಹೇಳಿದ್ದಾರೆ.
ಮಾತಿನ ಆರಂಭದಲ್ಲಿ, ಭಾರತೀಯರನ್ನು ಜನಾಂಗೀಯವಾದಿಗಳೆನ್ನುವುದು ಅತೀ ಕೆಟ್ಟ ರೋಪವಾಗಿದೆ, ಏಕೆಂದರೆ ಭಾರತೀಯರು ಕೃಷ್ಣನಂತಹ ಕಪ್ಪುದೇವರನ್ನು ಪೂಜಿಸುತ್ತೇವೆ. ಆಫ್ರಿಕನ್ ಪೀಳಿಗೆಯ ಮಂದಿ ಇಂದಿಗೂ ಮಹಾರಾಷ್ಟ್ರ ಹಾಗೂ ಗುಜರಾತ್’ನಲ್ಲಿ ಸೌಹಾರ್ದಯುತವಾಗಿ ಜೀವನ ನಡೆಸುತ್ತಿದ್ದಾರೆಂದು, ತರುಣ್ ವಿಜಯ್ ಹೇಳಿದ್ದಾರೆ.
ತರುಣ್ ವಿಜಯ್ ಹೇಳಿಕೆಗೆ ರಾಜಕೀಯ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ. ತನ್ನ ಹೇಳಿಕೆಯನ್ನು ತಿರುಚಲಾಗಿದೆಯೆಂದು ತರುನ್ ವಿಜಯ್ ಬಳಿಕ ಸ್ಪಷ್ಟೀಕರಣ ನೀಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.