ಕೇಜ್ರಿವಾಲ್ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅಸಮಾಧಾನ

By Suvarna Web DeskFirst Published Apr 7, 2017, 2:46 PM IST
Highlights

ವಿ.ಕೆ ಶುಂಗ್ಲು ವರದಿಯಿಂದ ನನಗೆ ಬಹಳ ನೋವಾಗಿದೆ ಜೊತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರದಲ್ಲಿ ಎಲ್ಲಾ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಅಣ್ಣಾ ಹಜಾರೆ ದೋಷಾರೋಪಣೆ ಮಾಡಿದ್ದಾರೆ.

ನವದೆಹಲಿ (ಏ.07): ವಿ.ಕೆ ಶುಂಗ್ಲು ವರದಿಯಿಂದ ನನಗೆ ಬಹಳ ನೋವಾಗಿದೆ ಜೊತೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅಧಿಕಾರದಲ್ಲಿ ಎಲ್ಲಾ ಸಿದ್ಧಾಂತಗಳನ್ನು ಗಾಳಿಗೆ ತೂರಿದ್ದಾರೆ ಎಂದು ಅಣ್ಣಾ ಹಜಾರೆ ದೋಷಾರೋಪಣೆ ಮಾಡಿದ್ದಾರೆ.

ಕಾನೂನು ಹಾಗೂ ಸಂವಿಧಾನವನ್ನು ಉಲ್ಲಂಘಿಸಿದ ಅರವಿಂದ್ ಕೇಜ್ರಿವಾಲ್ ರನ್ನು ಕಟುವಾಗಿ ಖಂಡಿಸುತ್ತಾ, ಅವರಿಗೆ ನಾನು ಖಡಾಖಂಡಿತವಾಗಿ ಬೆಂಬಲಿಸುವುದಿಲ್ಲ ಎಂದು ಹೇಳಿದ್ದಾರೆ. ನನ್ನೆಲ್ಲಾ ನಿರೀಕ್ಷೆಗಳನ್ನು ಕೇಜ್ರಿವಾಲ್ ಹುಸಿಗೊಳಿಸಿದ್ದಾರೆ.

Latest Videos

ಶುಂಗ್ಲು ಸಮಿತಿ ವರದಿಯಿಂದ ನನಗೆ ನೋವಾಗಿದೆ.  ಯಾಕೆಂದರೆ ನಾನು ಭ್ರಷ್ಟಾಚಾರದ ವಿರುದ್ಧ ಹೋರಾಟ ನಡೆಸುವಾಗ ಅರವಿಂದ್ ಕೇಜ್ರಿವಾಲ್ ನನ್ನ ಜೊತೆಯಿದ್ದರು. ಯುವ ಹಾಗೂ ಸುಶಿಕ್ಷಿತ ಅರವಿಂದ್ ಕೇಜ್ರಿವಾಲ್ ಭ್ರಷ್ಟಾಚಾರ ಮುಕ್ತ ದೇಶ ನಿರ್ಮಾಣ ಮಾಡುತ್ತಾರೆಂಬ ನಿರೀಕ್ಷೆಯಿತ್ತು. ಆದರೆ ನನ್ನೆಲ್ಲಾ ನಿರೀಕ್ಷೆಗಳನ್ನು ಇವರು ಹುಸಿಗೊಳಿಸಿದ್ದಾರೆ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

ಕಾನೂನನ್ನು ಉಲ್ಲಂಘಿಸಿರುವ ದೆಹಲಿ ಸರ್ಕಾರವನ್ನು ನಾನು ಬೆಂಬಲಿಸುವುದಿಲ್ಲ. ಇಂತಹ ನಡೆ ದೇಶ ಹಾಗೂ ಸಮಾಜವನ್ನು ದುರ್ಬಲಗೊಳಿಸುತ್ತದೆ. ಕೇಜ್ರಿ ಮುಖ್ಯಮಂತ್ರಿಯಾದ ನಾನವರನ್ನು ಭೇಟಿ ಮಾಡುವ ಿರಾದೆಯನ್ನೇ ಇಟ್ಟುಕೊಂಡಿಲ್ಲ ಎಂದು ಅಣ್ಣಾ ಹಜಾರೆ ಹೇಳಿದ್ದಾರೆ.

click me!