
ನವದೆಹಲಿ: ಬರ ಪರಿಹಾರ, ಬೆಳೆಗಳಿಗೆ ಬೆಂಬಲ ಬೆಲೆ ಇತ್ಯಾದಿಗೆ ಆಗ್ರಹಿಸಿ ದಿಲ್ಲಿಯ ಜಂತರ್‌ಮಂತರ್‌ನಲ್ಲಿ 39 ದಿನದಿಂದ ನಡೆಯುತ್ತಿರುವ ರೈತರ ಪ್ರತಿಭಟನೆ ಇನ್ನೊಂದು ಮಜಲು ಮುಟ್ಟಿದೆ. ಶನಿವಾರ ಪ್ರತಿಭಟನಾನಿರತ ರೈತರು ಮಾನವನ ಮೂತ್ರ ಕುಡಿದು ಪ್ರತಿಭಟನೆ ನಡೆಸಿದ್ದಾರೆ.
ಈವರೆಗೆ ಮೃತ ರೈತರ ತಲೆಬುರುಡೆ ಹಿಡಿದು, ಅರ್ಧ ಮೀಸೆ ಬೋಳಿಸಿ, ತಲೆ ಬೋಳಿಸಿ, ಸಂಪೂರ್ಣ ಬೆತ್ತಲಾಗಿ, ಇಲಿ ತಿಂದು, ರಸ್ತೆ ಮೇಲೆ ಅನ್ನ-ಸಾರು ಕಲಿಸಿ ತಿಂದು.. ವಿನೂತನ ಪ್ರತಿಭಟನೆಗಳನ್ನು ನಡೆಸಿ ಸರ್ಕಾರದ ಗಮನ ಸೆಳೆದಿದ್ದರು. ಶನಿವಾರ ಮಾನವನ ಮೂತ್ರ ಕುಡಿದು ರೈತರು ಪ್ರತಿಭಟನೆ ನಡೆಸುವ ವೇಳೆ ಇದನ್ನು ತಡೆಯಲು ಪೊಲೀಸರು ಯತ್ನಿಸಿದರು. ಆದರೆ ಅಷ್ಟೊತ್ತಿನಲ್ಲಿ ರೈತರು ಮೂತ್ರ ಸೇವಿಸಿಯಾಗಿತ್ತು.
‘ಸರ್ಕಾರ ನಮಗೆ ನೀರು ಕೊಡುತ್ತಿಲ್ಲ. ಅದಕ್ಕಾಗಿ ಮೂತ್ರ ಕುಡಿದೆವು' ಎಂದು ರೈತ ಮುಖಂಡ ಪಿ. ಅಯ್ಯಕ್ಕಣ್ಣು ಕಿಡಿಕಾರಿದರು. ನಾವು ಮೂತ್ರ ಕುಡಿಯದಂತೆ ಪೊಲೀಸರು ತಡೆಯಬಹುದು. ಆದರೆ ಅದನ್ನು ನಾವು ಬಕೆಟ್‌ನಲ್ಲಿ ಸಂಗ್ರಹಿಸದಂತೆ ಅವರು ತಡೆಯಲಾರರು. ನಾವು ಈ ಬಕೆಟ್ ಅನ್ನು ತಮಿಳುನಾಡಿಗೆ ಕಳುಹಿಸಿಕೊಡಲಿದ್ದೇವೆ ಎಂದು ರೈತ ನಾಯಕರು ಹೇಳಿದ್ದಾರೆ. ಇಷ್ಟೆಲ್ಲಾ ಪ್ರತಿಭಟನೆಯ ಹೊರತಾಗಿಯೂ ನಮ್ಮ ಬೇಡಿಕೆಗೆ ಸರ್ಕಾರ ಮಣಿಯದೇ ಹೋದಲ್ಲಿ ನಾವು ಮಾನವ ಮಲ ಸೇವಿಸಲಿದ್ದೇವೆ ಎಂದು ರೈತರು ಎಚ್ಚರಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.