ಈ ಎಲ್ಲಾ 60 ಔಷಧಗಳ ಲೇಬಲ್'ನಲ್ಲಿ "Not of Standard Quality"(ಪ್ರಮಾಣಿತ ಗುಣಮಟ್ಟದಲ್ಲಿಲ್ಲ") ಎಂದು ನಮೂದಿಸಲಾಗಿರುತ್ತದೆ. ಜನರು ಔಷಧಗಳನ್ನು ಕೊಳ್ಳುವಾಗ ವ್ರಾಪರ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಗತ್ಯ.
ನವದೆಹಲಿ(ಏ. 23): ಜನಸಾಮಾನ್ಯರು ಮತ್ತು ವೈದ್ಯರು ಓದಲೇಬೇಕಾದ ಸುದ್ದಿ ಇದು. ಡೀಕೋಲ್ಡ್ ಟೋಟಲ್ ಸೇರಿದಂತೆ ನಾವು ಸಾಮಾನ್ಯವಾಗಿ ಬಳಸುವ ಅನೇಕ ಔಷಧಿಗಳು ಕಳಪೆ ಗುಣಮಟ್ಟದ್ದಾಗಿವೆಯಂತೆ. ಕೇಂದ್ರೀಯ ಔಷಧ ಮಾನಕ ನಿಯಂತ್ರಣ ಸಂಸ್ಥೆ (CDSCO) ಈ ವರ್ಷ ಮಾಡಿರುವ ಕಳಪೆ ಗುಣಮಟ್ಟದ ಔಷಧಗಳ ಪಟ್ಟಿಯಲ್ಲಿ 60 ಔಷಧಗಳಿವೆ. ಕಳೆದ ತಿಂಗಳು ಸಂಸ್ಥೆ ನಡೆಸಿದ ವಿವಿಧ ಪರೀಕ್ಷೆಯಲ್ಲಿ ಈ ಔಷಧಗಳು ನಿಗದಿತ ಗುಣಮಟ್ಟದಲ್ಲಿಲ್ಲದಿರುವುದು ದೃಢಪಟ್ಟಿದೆ.
ಜ್ವರ, ಶೀತ, ಬೇಧಿ, ಮಲಬದ್ಧತೆ ಇತ್ಯಾದಿ ಸಮಸ್ಯೆಗೆ ನೀಡುವ ಔಷಧಗಳೂ ಈ ಪಟ್ಟಿಯಲ್ಲಿವೆ. ಸಿಪ್ಲಾ, ಕ್ಯಾಡಿಲಾ, ಸನೋಫಿಯಂತಹ ಪ್ರಮುಖ ಸಂಸ್ಥೆಗಳ ಔಷಧೋತ್ಪನ್ನಗಳು ಇದರಲ್ಲಿ ಒಳಗೊಂಡಿರುವುದು ಗಮನಾರ್ಹ.
ಈ ಎಲ್ಲಾ 60 ಔಷಧಗಳ ಲೇಬಲ್'ನಲ್ಲಿ "Not of Standard Quality"(ಪ್ರಮಾಣಿತ ಗುಣಮಟ್ಟದಲ್ಲಿಲ್ಲ") ಎಂದು ನಮೂದಿಸಲಾಗಿರುತ್ತದೆ. ಜನರು ಔಷಧಗಳನ್ನು ಕೊಳ್ಳುವಾಗ ವ್ರಾಪರ್ ಅನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಅಗತ್ಯ. ಅಂದಹಾಗೆ ಸಿಡಿಎಸ್'ಸಿಒ ಸಂಸ್ಥೆಯು ಭಾರತದಲ್ಲಿ ಔಷಧಗಳ ಮಾರಾಟ ಮತ್ತು ವಿತರಣೆಯನ್ನು ನಿಯಂತ್ರಿಸುವ ಅಧಿಕೃತ ಸಂಸ್ಥೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.