‘ರಾಮಮಂದಿರ ನಿರ್ಮಾಣ ಯಾವಾಗ ಮೊದಲು ಹೇಳಿ’

By Web DeskFirst Published Jun 6, 2019, 8:22 PM IST
Highlights

ರಾಮ ಮಂದಿರ ನಿರ್ಮಾಣ ಭರವಸೆಯನ್ನು ಈಡೇರಿಸಿದ್ದರೆ ಜನರೇ ನಮ್ಮನ್ನು ಚಪ್ಪಲಿಯಿಂದ ಹೊಡೆಯುತ್ತಾರೆ ಎಂದು ಮಿತ್ರಪಕ್ಷ ಶಿವಸೇನೆ ಬಿಜೆಪಿಗೆ ಎಚ್ಚರಿಕೆ ನೀಡಿತ್ತು. ಇದಾದ ಮೇಲೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡುವ ಮೂಲಕ ಸಂದೇಶ ರವಾನಿಸಿದ್ದಾರೆ.

ನವದೆಹಲಿ[ಜೂ. 06] ನರೇಂದ್ರ ಮೋದಿ ನೇತೃತ್ವದ ಸರಕಾರ ಮತ್ತೆ ಅಸ್ತಿತ್ವಕ್ಕೆ ಬಂದಿದೆ. ಈ ಬಾರಿಯಾದರೂ ರಾಮಂದಿರ ನಿರ್ಮಾಣ ಕೆಲಸ ಆರಂಭವಾಗಲಿದೆಯಾ? ಎಂದು ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವೀಟ್ ಮಾಡಿದ್ದಾರೆ.

ರಾಮಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ಘೋಷಣೆ ಮಾಡುವ ಸಮಯ ಬಂದಿದೆ. ಸಂಪೂರ್ಣ 67.703 ಹೆಕ್ಟೇರ್ ಜಾಗ ಕೇಂದ್ರ ಸರಕಾರಕ್ಕೆ ಸೇರಿದ್ದು , ಸುಪ್ರೀಂ ಕೋರ್ಟ್ ತೀರ್ಮಾನ ಹೊರಡಿಸಿದಾಗ  ಪರಿಹಾರ ನೀಡಲು ಸಾಧ್ಯವಿದೆ.

ರಾಮ ಮಂದಿರ ಕಟ್ಟದಿದ್ರೆ ಜನ ಚಪ್ಪಲಿಯಿಂದ ಬಡಿತಾರೆ: ಶಿವಸೇನೆ!

ಇದಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಗೆ ಮೇ. 31ರಂದು  ಪತ್ರ ಬರೆದಿದ್ದ ಸ್ವಾಮಿ , ಯಾರದ್ದೇ ಭೂಮಿಯನ್ನಾದರೂ ವಶಕ್ಕೆ ಪಡೆದುಕೊಳ್ಳುವ ಅಧಿಕಾರ ಕೇಂದ್ರ ಸರಕಾರಕ್ಕೆ ಇದೆ ಎಂದು ಹೇಳಿದ್ದರು.

 

Time for Namo Govt to announce the commencement of construction of Ram Temple through Ramjanmabhoomi Nyas Samiti or VHP. The entire 67.703 acres belongs to Union Govt. When SC decides the cases compensation will be given to winners.But not land. Meantime construction can begin

— Subramanian Swamy (@Swamy39)
click me!