
ಸಿಂಧ್(ಜೂ.06): ಭಾರತ-ಪಾಕ್ ನಡುವಿನ ಸಂಬಂಧ ಈ ಎರಡೂ ದೇಶಗಳು ಸೃಷ್ಟಿಯಾದ ದಿನದಿಂದಲೂ ಉತ್ತಮವಾಗಿಲ್ಲ. ಸದಾ ಕಾಲು ಕೆದರಿ ಜಗಳಕ್ಕೆ ಬರುವ ಪಾಕಿಸ್ತಾನ ಒಂದೆಡೆಯಾದರೆ, ಶಾಂತಿಯ ಬಯಕೆ ಹೊತ್ತು ಮಿತ್ರತ್ವ ಬಯಸುವ ಭಾರತ ಇನ್ನೊಂದೆಡೆ.
ಆದರೆ ಪಾಕಿಸ್ತಾನದ ಅಭಿವೃದ್ಧಿಗೆ ಭಾರತ ಬೇಕೇ ಬೇಕು. ತನ್ನ ನೆಲದಲ್ಲಿ ಉಗ್ರವಾದವನ್ನಲ್ಲದೇ ಮತ್ತೇನನ್ನು ಬಿತ್ತದ ಪಾಕಿಸ್ತಾನಕ್ಕೆ ಭಾರತದ ಸಹಾಯದ ಅವಶ್ಯಕತೆ ಇದೆ.
ಇದಕ್ಕೆ ಪುಷ್ಠಿ ಎಂಬಂತೆ ಭಾರತೀಯ ಉದ್ಯಮಿಯೊಬ್ಬರು ಪಾಕಿಸ್ತಾನದ ಆಗ್ನೇಯ ಸಿಂಧ್ ಪ್ರಾಂತ್ಯದ ಹಿಂದುಳಿದ ಜಿಲ್ಲೆಗಳಲ್ಲಿ 60 ಹ್ಯಾಂಡ್ ಪಂಪ್‌ಗಳನ್ನು ಸ್ಥಾಪಿಸುವ ಮೂಲಕ ಗಮನ ಸೆಳೆದಿದ್ದಾರೆ.
ದುಬೈನಲ್ಲಿ ನೆಲಸಿರುವ ಭಾರತೀಯ ಉದ್ಯಮಿ ಜೋಗಿಂದರ್ ಸಿಂಗ್ ಸಲಾರಿಯಾ, ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ತೀರಾ ಹಿಂದುಳಿದ ಜಿಲ್ಲೆಗಳಲ್ಲಿ 60 ಕ್ಕೂ ಹೆಚ್ಚು ಹ್ಯಾಂಡ್ ಪಂಪ್‌ಗಳನ್ನು ಸ್ಥಾಪಿಸಿದ್ದಾರೆ.
ಥಾರ್ಪರ್ಕರ್ ಜಿಲ್ಲೆಯಲ್ಲಿ ಸ್ಥಳೀಯ ಸಾಮಾಜಿಕ ಕಾರ್ಯಕರ್ತರ ಸಹಾಯ ಪಡೆದು ಈ ಹ್ಯಾಂಡ್ ಪಂಪ್‌ಗಳನ್ನು ನಿರ್ಮಿಸಲಾಗಿದ್ದು, ಜೋಗಿಂದರ್ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ.
ಭಾರತೀಯ ಉದ್ಯಮಿಯ ಈ ಸಹಾಯಕ್ಕೆ ಪಾಕ್ ಮಾಧ್ಯಮಗಳು ಧನ್ಯವಾದ ತಿಳಿಸಿದ್ದು ಹೌದಾದರೂ, ಎರಡೂ ದೇಶಗಳು ಸಂಬಂಧ ಸುಧಾರಣೆಗೆ ಒತ್ತು ನೀಡಬೇಕು ಎಂಬ ಪುಕ್ಕಟೆ ಸಲಹೆ ಕೂಡ ನೀಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.