
ಎಚ್.ಡಿ. ಕೋಟೆ/ಹುಣಸೂರು: ಆಹಾರವನ್ನರಸಿ ಬಂದ ಹುಲಿಯೊಂದು ವಿದ್ಯುತ್ ತಗುಲಿ ಮೃತಪಟ್ಟಿರುವ ಘಟನೆ ನಾಗರಹೊಳೆ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ಅಂತರ ಸಂತೆ ವಲಯದಲ್ಲಿ ನಡೆದಿದೆ. ಅಂತರಸಂತೆ ವಲಯದ ಎನ್. ಬೆಳ್ತೂರು ಬಳಿ ಘಟನೆ ಬುಧವಾರ ಮಧ್ಯಾಹ್ನ 11 ರ ಸಮಯದಲ್ಲಿ ಬೆಳ್ತೂರು ಗ್ರಾಮದ ಸಮೀಪದ ಕೆರೆ ನೀರಿನಲ್ಲಿ 3 ರಿಂದ 4 ವರ್ಷದ ಹೆಣ್ಣುಹುಲಿಯ ಶವ ಪತ್ತೆಯಾಗಿದೆ.
ಕಳೆದೆರಡು ದಿನಗಳಿಂದ ಈ ಭಾಗದಲ್ಲಿ ಹುಲಿಯೊಂದು ಅಡ್ಡಾಡುತ್ತಿದೆ ಎಂಬ ಮಾಹಿತಿ ಇಲಾಖೆಗೆ ಇತ್ತು. ಈ ನಿಟ್ಟಿನಲ್ಲಿ ಇಲಾಖೆ ಸಿಬ್ಬಂದಿ ಹುಡುಕಾಟ ನಡೆಸಿದ್ದರು. ಆದರೆ ಬುಧವಾರ ಹುಲಿಯ ಶವ ಪತ್ತೆಯಾಗಿದೆ. ಹುಲಿ ವಿದ್ಯುತ್ ತಗುಲಿ ಮೃತಪಟ್ಟಿದೆ ಎಂದು ಮರಣೋತ್ತರ
ಪರೀಕ್ಷೆಯಿಂದ ಗೊತ್ತಾಗಿದೆ.
ಈ ಭಾಗದಲ್ಲಿರುವ ಯಾವುದೋ ತೋಟದ ಬಳಿ ನುಗ್ಗಿದಾಗ ವಿದ್ಯುತ್ ತಂತಿ ತಗುಲಿ ಸತ್ತಿರಬಹುದೆಂದು ಶಂಕಿಸಲಾಗುತ್ತಿದೆ. ಅವಘಡ ಎಲ್ಲಿ ನಡೆದಿದೆ ಎನ್ನುವುದು ತನಿಖೆಯಿಂದ ತಿಳಿದುಬರಬೇಕಿದೆ. ಸ್ಥಳಕ್ಕೆ ಸಿಎಫ್ ಆರ್. ರವಿಶಂಕರ್, ಎಸಿಎಫ್ ಪೌಲ್ ಆಂಟೋನಿ, ಆರ್‌ಎಫ್‌ಒ ವಿನಯ್ ಭೇಟಿ ನೀಡಿದ್ದರು. ಪಶುವೈದ್ಯ ಡಾ. ಮುಜೀಬ್ ರೆಹಮಾನ್ ಮರಣೋತ್ತರ ಪರೀಕ್ಷೆ ನಡೆಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.