
ನವದೆಹಲಿ(ಫೆ.25): ಟಾಪ್ ಲೋಡ್ ವಾಷಿಂಗ್ ಮಶಿನ್ನಲ್ಲಿ ಮುಳುಗಿ 3 ವರ್ಷದ ಅವಳಿ ಮಕ್ಕಳು ಸಾವನ್ನಪ್ಪಿದ ದಾರುಣ ಘಟನೆ ದಿಲ್ಲಿಯ ರೋಹಿಣಿ ಪ್ರದೇಶದಲ್ಲಿ ಶನಿವಾರ ನಡೆದಿದೆ.
ನಕ್ಷ ಮತ್ತು ನೀಶು ಎಂಬುವರೇ ಸಾವನ್ನಪ್ಪಿದ ಕಂದಮ್ಮಗಳು. ವಾಷಿಂಗ್ ಮಶಿನ್ನಿನಲ್ಲಿ ನೀರು ತುಂಬಿದ ತಾಯಿಯು ಡಿಟರ್ಜಂಟ್ ತರಲು ಅಂಗಡಿಗೆ ಹೋದಾಗ ಈ ಬಾಲಕರು ಮಶಿನ್ ಹತ್ತಿದ್ದಾರೆ. ಆಗ ಅದರಲ್ಲಿ 15 ಲೀ. ನೀರು ಇತ್ತು. ವಾಷಿಂಗ್ ಮಶಿನ್ನಿನ ಬಾಯಿಯಲ್ಲಿ ಆಟವಾಡಲು ಇದೇ ವೇಳೆ ಬಾಲಕರು ಇಳಿದಿದ್ದಾರೆ. ತಾಯಿ ಮನೆಗೆ ವಾಪಸ್ ಬಂದಾಗ ಬಾಲಕರು ಕಾಣಿಸಿಲ್ಲ. ಆಗ ಅವರನ್ನು ಆತಂಕಗೊಂಡ ಆಕೆ ತನ್ನ ಪತಿಗೆ ಫೋನ್ ಮಾಡಿದ್ದಾಳೆ. ಪತಿ ಮನೆಗೆ ಆಗಮಿಸಿ ಹುಡುಕಾಡಿದಾಗ ಕೊನೆಗೆ ವಾಷಿಂಗ್ ಮಶಿನ್‌ನಲ್ಲಿ ಮೃತ ಅವಸ್ಥೆಯಲ್ಲಿ ಬಾಲಕರು ಪತತ್ತೆಯಾಗಿದ್ದಾರೆ. ಬಾಲಕರ ಸಾವನ್ನು ಬಳಿಕ ವೈದ್ಯರು ಖಚಿತಪಡಿಸಿದ್ದಾರೆ.
ಅರ್ಧ ಗಂಟೆ ಅವಧಿಯಲ್ಲಿ ಈ ಎಲ್ಲ ಘಟನೆ ನಡೆದುಹೋಗಿದೆ. ಈಗ ತಂದೆ ರವೀಂದರ್, ತಾಯಿ ರೇಖಾ ಗೋಳು ಹೇಳತೀರದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.