ದಾವೂದ್'ಗೆ ಸೇರಿದ್ದ 3 ಆಸ್ತಿಗಳು ಹರಾಜು; ಹಿಂದೂ ಮಹಾಸಭಾಗೆ ನಿರಾಸೆ

By Suvarna Web DeskFirst Published Nov 14, 2017, 3:08 PM IST
Highlights

ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿದ್ದ ಮೂರು ಆಸ್ತಿಗಳನ್ನು 11.58 ರೂ.ಗಳಿಗೆ ಹರಾಜು ಹಾಕಲಾಗಿದೆ. ಸ್ಮಗ್ಲರ್ಸ್ ಅಂಡ್ ಫಾರಿನ್ ಎಕ್ಸ್'ಚೆಂಜ್ ಮ್ಯಾನಿಪುಲೇಟರ್ಸ್ ಕಾಯ್ದೆಯಡಿಯಲ್ಲಿ ವಿತ್ತ ಸಚಿವಾಲಯ ದಾವೂದ್ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.  

ಮುಂಬೈ(ನ.14): ಭೂಗತ ದೊರೆ ದಾವೂದ್ ಇಬ್ರಾಹಿಂಗೆ ಸೇರಿದ್ದ ಮೂರು ಆಸ್ತಿಗಳನ್ನು 11.58 ರೂ.ಗಳಿಗೆ ಹರಾಜು ಹಾಕಲಾಗಿದೆ. ಸ್ಮಗ್ಲರ್ಸ್ ಅಂಡ್ ಫಾರಿನ್ ಎಕ್ಸ್'ಚೆಂಜ್ ಮ್ಯಾನಿಪುಲೇಟರ್ಸ್ ಕಾಯ್ದೆಯಡಿಯಲ್ಲಿ ವಿತ್ತ ಸಚಿವಾಲಯ ದಾವೂದ್ ಆಸ್ತಿಯನ್ನು ಮುಟ್ಟುಗೋಲು ಹಾಕಿದೆ.  

ಜೈಕಾ ಹೊಟೇಲ್, ಶಬನಮ್ ಗೆಸ್ಟ್ ಹೌಸ್ ಮತ್ತು ಧರ್ಮವಾಲಾ ಕಟ್ಟಡವನ್ನು ಹರಾಜು ಹಾಕಲಾಗಿದೆ. ಜೈಕಾ ಹೊಟೇಲ್ 4.53 ಕೋಟಿ, ಶಬನಮ್ ಗೆಸ್ಟ್ ಹೌಸ್ 3.52 ಕೋಟಿ ಹಾಗೂ ಧರ್ಮವಾಲಾ ಕಟ್ಟಡ 3.53 ಕೋಟಿಗೆ ಹರಾಜಿಗೆ ಹಾಕಲಾಗಿತ್ತು. ಮೂರು ಆಸ್ತಿಗಳು ಒಟ್ಟು 11.58 ಕೋಟಿಗಳಿಗೆ ಮಾರಾಟವಾಗಿವೆ.  

ದಿಲ್ಲಿಯ ಜೈಕಾ ಹೋಟೆಲನ್ನು ಸಾರ್ವಜನಿಕ ಶೌಚಾಲಯ ಮಾಡಲು ಹಿಂದೂ ಮಹಾಸಭಾ ನಿರ್ಧರಿಸಿತ್ತು. ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದ ಹಿಂದೂ ಮಹಾ ಸಭಾಗೆ ನಿರಾಸೆಯಾಗಿದೆ. ಸೈಫಿ ಬುರ್ಹಾನಿ  ಆಫ್ ಲಿಫ್ಟಿಂಗ್   ಟ್ರಸ್ಟ್ ಈ ಮೂರು ಆಸ್ತಿಗಳನ್ನು ಖರೀದಿಸಿದೆ.   

 

click me!