
ಶ್ರೀನಗರ(ಜೂನ್.2): ಶ್ರೀನಗರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಿಆರ್‌ಪಿಆಫ್ ಸೈನಿಕರ ಮೇಲೆ ಉಗ್ರರು ಗ್ರೇನೇಡ್ ದಾಳಿ ನಡೆಸಿದ್ದಾರೆ. ಶ್ರೀನಗರದ ಫತೇಹಕಡಲ್ ಹಾಗೂ ಬುದ್ಧಶಹ ಚೌಕ್‌ನಲ್ಲಿ ಉಗ್ರರು ನಡೆಸಿದ ಗ್ರೇನೇಡ್ ದಾಳಿಯಿಂದ ಮೂವರು ಸಿಆರ್‌ಪಿಎಫ್ ಸೈನಿಕರು ಹಾಗೂ ಒರ್ವ ಮಹಿಳೆ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಫತೇಹಕಡಲ್ ಹಾಗು ಬುದ್ಧಶಹ ಚೌಕ್‌ನಲ್ಲಿ ಗಸ್ತು ತಿರುಗುತ್ತಿದ್ದ ಸಿಆರ್‌ಪಿಎಫ್ ಭದ್ರತಾ ಪಡೆ ಮೇಲೆ ಉಗ್ರರು ದಾಳಿ ನಡೆಸಿದ್ದಾರೆ.
ಉಗ್ರರ ದಾಳಿ ವೇಳೆ ತಕ್ಷಣವೇ ಪ್ರತ್ಯುತ್ತರ ನೀಡಿದ ಸಿಆರ್‌ಪಿ ಯೋಧರು ಹೆಚ್ಚಿನ ಅನಾಹುತವನ್ನ ತಪ್ಪಿಸಿದ್ದಾರೆ. ಗಾಯಗೊಂಡರು ಚೇತರಿಸಿಕೊಳ್ಳುತ್ತಿದ್ದು ಶ್ರೀನಗರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಇಷ್ಟೇ ಅಲ್ಲ ಇದೀಗ ಪ್ರತಿ ವಾಹನಗಳನ್ನ ತಪಾಸಣೆ ನಡೆಸುತ್ತಿದ್ದಾರೆ. ತಪ್ಪಿಸಿಕೊಂಡಿರುವ ಉಗ್ರರಿಗಾಗಿ ಕೂಂಬಿಂಗ್ ಕಾರ್ಯಚರಣೆ ಆರಂಭಗೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.