
ರಾಯಚೂರು(ನ.26): ದೊಡ್ಡವರ ಸಣ್ಣತನ ಅಂತಾರಲ್ಲ ಬಹುಶಃ ಇದಕ್ಕೇ ಇರಬೇಕು. ರಾಯಚೂರಿನಲ್ಲಿ ಇದೇ ಡಿಸೆಂಬರ್'ನಲ್ಲಿ ನಡೆಯಲಿರುವ 82ನೇ ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯಲ್ಲಿ ಸಿಎಂ ಹೆಸರು ಚಿಕ್ಕದಾಯ್ತು ಅಂತ ಪ್ರಿಂಟ್ ಮಾಡಿದ ಸಾವಿರಾರು ಆಮಂತ್ರಣ ಪತ್ರಿಕೆಗಳನ್ನು ಮೂಲೆಗೆಸೆದು, ಪುನಃ ಹೊಸ ಆಮಂತ್ರಣ ಪತ್ರಿಕೆಗಳನ್ನು ಮುದ್ರಣ ಮಾಡಿಸಿದ್ದಾರೆ. ದೊಡ್ಡವರ ಈ ನಡೆ ಸಾವ೯ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
82ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಇತ್ತ ಸಮ್ಮೇಳನದ ಆಯೋಜಕರು ಮಾಡಿಕೊಳ್ಳುತ್ತಿರುವ ಯಡವಟ್ಟುಗಳಿಂದ ಸಾವ೯ಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನ ರಾಯಚೂರಿನಲ್ಲಿ ನಡೆಯುತ್ತದೆ ಅಂತ ಹಲವು ಸಾಹಿತಿಗಳು, ಹಿರಿಯರು ಎಲ್ಲರೂ ಸೇರಿಕೊಂಡು ಚಚೆ೯ ಮಾಡಿ ಫಿಕ್ಸ್ ಮಾಡಿದ್ರು. ಇದಕ್ಕಾಗಿ ಸುಮಾರು 12 ಸಾವಿರ ಆಮಂತ್ರಣ ಪತ್ರಿಕೆಗಳನ್ನು ಪ್ರಿಂಟ್ ಮಾಡಿಸಿದ್ರು. ಆದ್ರೆ ಹೀಗೆ ಮುದ್ರಣ ಮಾಡಿಸಿದ ಆಮಂತ್ರಣ ಪತ್ರಿಕೆಯಲ್ಲಿ ಸಿ.ಎಂ.ಸಿದ್ಧರಾಮಯ್ಯ ಅವರ ಹೆಸರು ಚಿಕ್ಕ ಅಕ್ಷರಗಳಲ್ಲಿ ಹಾಕಲಾಗಿದೆ ಅಂತ ಯಾರೋ ಆಕ್ಷೇಪ ವ್ಯಕ್ತಪಡಿಸಿದ್ದರು. ಹೀಗಾಗಿ ಮುದ್ರಣವಾದ ಆಮಂತ್ರಣ ಪತ್ರಿಕೆಗಳನ್ನು ಮೂಲೆಗೆಸೆದು ಹೊಸ ಪತ್ರಿಕೆಗಳನ್ನು ಮಾಡಿಸಿದ್ದಕ್ಕೆ ಸಾವ೯ಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಸಿಎಂ.ಸಿದ್ಧರಾಮಯ್ಯ ಹೆಸರು ಚಿಕ್ಕದಾಯ್ತು, ಅಲ್ಲದೇ ಹಲವು ರಾಜಕಾರಣಿಗಳ ಹೆಸರು ಬಂದಿಲ್ಲ, ಅಂತ ಅದ್ಯಾವ ಪುಣ್ಯಾತ್ಮರು ತಗಾದೆ ತೆಗೆದರೋ ಗೊತ್ತಿಲ್ಲ, ಆದರೆ ಇವರ ಈ ನಡೆಗೆ ಆಯೋಜಕರಲ್ಲಿಯೂ ಸಮಾಧಾನವಿದೆ. ಅದನ್ನು ತೋಪ೯ಡಿಸಿಕೊಳ್ಳಲು ಹಿಂದೇಟು ಹಾಕಿದ ಅವರು, ಇಂತಹ ವ್ಯವಸ್ಥೆಯಲ್ಲಿ ನಾವು ಬದುಕುತ್ತಿದ್ದೇವೆ ಅಂತ ಮಾಮಿ೯ಕವಾಗಿ ನುಡಿದರು.
ಒಟ್ಟಾರೆಯಾಗಿ ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಎಂಬಂತೆ, ಹೀಗೆ ಸಕಾ೯ರದ ಹಣವನ್ನು ವ್ಯರ್ಥ ಮಾಡುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ದೊಡ್ಡವರು ಅನ್ನಿಸಿಕೊಂಡವರು ಅದೆಷ್ಟು ಸಣ್ಣತನ ತೋರಿಸುತ್ತಿದ್ದಾರಲ್ಲ ಅಂತ ಸಾವ೯ಜನಿಕರ ವಲಯದಲ್ಲಿ ಗುಸು ಗುಸು ಕೇಳಿ ಬರುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.