
ನವದೆಹಲಿ(ನ.17): ಅಂತರರಾಷ್ಟ್ರೀಯ ಮಟ್ಟದ ಸಾಲ ಮಾಪನ ಸಂಸ್ಥೆ 'ಮೂಡಿ' ರಾಂಕಿಂಗ್'ನಲ್ಲಿ ಭಾರತದ ದರ್ಜೆ ಏರಿಕೆಯಾಗಿರುವುದಕ್ಕೆ ಪ್ರಧಾನಿ ಕಚೇರಿ, ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ವಿ ಸೇರಿದಂತೆ ಹಲವು ನಾಯಕರು ಸಂತಸ ವ್ಯಕ್ತಪಡಿಸಿದ್ದಾರೆ.
ಹಲವರು ದೇಶದ ಆರ್ಥಿಕ ಸುಧಾರಣೆ ಬೆಳವಣಿಗೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು. ಆದರೆ 14 ವರ್ಷದ ನಂತರ ಅಮೆರಿಕಾ ಮೂಲದ ಸಾಲ ಮಾಪನ ಸಂಸ್ಥೆ ರೇಟಿಂಗ್ ಬಾ3(Baa3)ನಿಂದ ಬಾ2(Baa2)ge ಏರಿಕೆಯಾಗಿದೆ. ಈ ಮೊದಲು ಮೂಡಿ ಏರಿಕೆ 2004ರಲ್ಲಿ ಮಾತ್ರ ಏರಿಕೆಯಾಗಿತ್ತು.
ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ತೆಗೆದುಕೊಂಡ ಎಲ್ಲಾ ಧನಾತ್ಮಕ ಕ್ರಮಗಳನ್ನು ತಡವಾಗಿ ಗುರುತಿಸಿ ಮೂಡಿ ಮಾಪನ ಮಟ್ಟವನ್ನು ಏರಿಸಿದೆ. ಇದಕ್ಕೆಲ್ಲ ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡ ಆರ್ಥಿಕ ಕ್ರಮಗಳೆ ಕಾರಣ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಮೋದಿ ಸರ್ಕಾರದಿಂದ ಮನ್ನಣೆ
ನರೇಂದ್ರ ಮೋದಿ ಸರ್ಕಾರ ವ್ಯಾವಹಾರಿಕ ವಾತಾವರಣ ಉತ್ಪಾದನಾ ವೃದ್ಧಿ, ವಿದೇಶಿ ಹಾಗೂ ದೇಶಿ ಹೂಡಿಕೆಯ ಉತ್ತೇಜನ ಹಾಗೂ ಸುಸ್ಥಿರ ಬೆಳವಣಿಗೆಗಾಗಿ ಕೈಗೊಂಡ ಕ್ರಮಗಳಿಂದಾಗಿ ಮೂಡಿ ದರ್ಜೆ ಏರಿಕೆಯಾಗಿದೆ' ಎಂದು ಪ್ರಧಾನಮಂತ್ರಿ ಕಚೇರಿ ಟ್ವೀಟ್ ಮಾಡಿದೆ.
ಮೂಡಿ ರಾಕಿಂಗ್ ಏರಿಕೆಯಿಂದ ವಿದೇಶಿ ಹೂಡಿಕೆಗೆ ಲಾಭವಾಗಿದೆ. ಜಿಎಸ್ಟಿ, ಆಧಾರ್ ವ್ಯವಸ್ಥೆ, ಬ್ಯಾಂಕಿಂಗ್ ವ್ಯವಸ್ಥೆಗೆ ಮೂಡಿ ಶ್ಲಾಘನೆ ವ್ಯಕ್ತಪಡಿಸಿದೆ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇನ್ನಷ್ಟು ಸ್ಥಿರತೆ ಕಾಯ್ದುಕೊಳ್ಳುವಂತೆ ಸಲಹೆ ನೀಡಿದ್ದು, ಜಿಡಿಪಿ ಕುಸಿತ ತಾತ್ಕಾಲಿಕವಾಗಿದ್ದು, ಏರಿಕೆಯಾಗಲಿದೆ ಎಂದು ವಿಶ್ಲೇಷಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.