ಕಚೇರಿಯಲ್ಲಿ ಟೀ ಕುಡಿಯುತ್ತೀರಾ ಹಾಗಾದ್ರೆ ಇಲ್ಲೊಮ್ಮೆ ಗಮನಿಸಿ..!

By Suvarna Web DeskFirst Published Dec 12, 2017, 6:09 PM IST
Highlights

ನಿಮ್ಮ ಕಚೇರಿಗಳಲ್ಲಿ ಟೀ ಸೇವನೆ ಮಾಡುತ್ತೀರಲ್ಲವೇ. ಹಾಗಾದರೆ ಇಲ್ಲೊಮ್ಮೆ  ಕೇಳಿ. ಈ ಬಗ್ಗೆ ನೀವು ಒಮ್ಮೆ ಯೋಚನೆ ಮಾಡಲೇಬೇಕಾದ ವಿಚಾರವೊಂದು ಇಲ್ಲಿದೆ.

ಹೊಸದಿಲ್ಲಿ (ಡಿ.12): ನಿಮ್ಮ ಕಚೇರಿಗಳಲ್ಲಿ ಟೀ ಸೇವನೆ ಮಾಡುತ್ತೀರಲ್ಲವೇ. ಹಾಗಾದರೆ ಇಲ್ಲೊಮ್ಮೆ  ಕೇಳಿ. ಈ ಬಗ್ಗೆ ನೀವು ಒಮ್ಮೆ ಯೋಚನೆ ಮಾಡಲೇಬೇಕಾದ ವಿಚಾರವೊಂದು ಇಲ್ಲಿದೆ.  ಯಾಕೆಂದರೆ ನೀವು ಕುಡಿಯುವ ಟೀ ಬ್ಯಾಗ್’ನಲ್ಲಿ ಶೌಚಾಲಯಕ್ಕಿಂತಲೂ ಕೂಡ ಹೆಚ್ಚು ಕೀಟಾಣುಗಳು ಇರುತ್ತವಂತೆ.

ವಿಜ್ಞಾನಿಗಳು ಕಂಡು ಕೊಂಡಂತೆ ಟೀ ಬ್ಯಾಗ್’ನಲ್ಲಿ ಶೌಚಾಲಯದ ಸೀಟ್’ಗಳಿಗಿಂತಲೂ ಕೂಡ ಹೆಚ್ಚು ಪ್ರಮಾಣದ ಕೀಟಾಣುಗಳು ಇರುತ್ತವೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಶೌಚಾಲಯದ ಸೀಟ್’ನಲ್ಲಿ  ಇರುವುದಕ್ಕಿಂತ 17 ಪಟ್ಟು ಅಧಿಕ ಕೀಟಾಣುಗಳು ಟೀ ಬ್ಯಾಗ್’ನಲ್ಲಿ ಇರುತ್ತವೆ ಎಂದು ಹೇಳಿದ್ದಾರೆ.

ಸಂಶೋಧನೆಯ ಪ್ರಕಾರವಾಗಿ ಟೀ ಬ್ಯಾಗ್’ನಲ್ಲಿ 3,785 ಕೀಟಾಣುಗಳು ಇದ್ದರೆ, ಟಾಯ್ಲೆಟ್ ಸೀಟ್’ನಲ್ಲಿ 220 ಕೀಟಾಣುಗಳು ಇರುತ್ತವೆ ಎಂದು ಹೇಳಿದ್ದಾರೆ. ಅಲ್ಲದೇ ಅಡುಗೆ ಮನೆಯಲ್ಲಿ ಬಳಸುವ ಅನೇಕ ಸಾಮಾಗ್ರಿಗಳಲ್ಲಿಯೂ ಕೂಡ ಕೀಟಾಣುಗಳ ಪ್ರಮಾಣವೂ ಹೆಚ್ಚಿನ ಪ್ರಮಾಣದಲ್ಲಿ  ಇರುತ್ತವೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

click me!