
ಬೆಂಗಳೂರು(ಸೆ.13): ಕಾವೇರಿ ವಿಚಾರದಲ್ಲಿ ಅನಿವಾರ್ಯ ಸ್ಥಿತಿ ಎದುರಾದರೆ ರಾಜೀನಾಮೆ ಸಲ್ಲಿಸಿ, ವಿಧಾನಸಭೆಯನ್ನು ವಿಸರ್ಜಿಸಿ ಜನರ ಮುಂದೆ ಹೋಗೋಣ ಎಂದು ಹಿರಿಯ ಕಾಂಗ್ರೆಸ್ ಮುಖಂಡರು ಸಿಎಂ ಸಿದ್ಧರಾಮಯ್ಯರಿಗೆ ಸಲಹೆ ನೀಡಿದ್ದಾರೆ. ಹೀಗೆ ಕಾವೇರಿ ವಿಚಾರದಲ್ಲಿ ರಾಜ್ಯದ ಹಿತಾಸಕ್ತಿ ಕಾಪಾಡಲು ಹೇಳಿದ್ದಾರೆ.
ತಮಿಳುನಾಡಿಗೆ ಕಾವೇರಿ ನೀರು ನಿಲ್ಲಿಸಲು ನಿರ್ಧಾರ ಕೈಗೊಂಡು ಜನಾಕ್ರೋಶದಿಂದ ಪಾರಾಗಾಲು ಸರ್ಕಾರದ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಈ ವಿಚಾರದಲ್ಲಿ ಇದೇ ಮೊದಲ ಬಾರಿಗೆ ಇಡೀ ಸಚಿವ ಸಂಪುಟದ ಸದಸ್ಯರು ಒಕ್ಕೊರಲ ಬೆಂಬಲ ನೀಡಿದ್ದಾರೆ.
- ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶ ಪಾಲಿಸಲೇಬೇಕಾಗಿಲ್ಲ
- ಆದರೆ, ನ್ಯಾಯಾಂಗ ನಿಂದನೆ ಕೇಸ್ ಎದುರಿಸಬೇಕಾಗುತ್ತದೆ.
- ಕಾವೇರಿ ವಿಷಯದಲ್ಲಿ ಮುಂದಿನ ದಿನದಲ್ಲಿ ಕೋರ್ಟ್ನಲ್ಲಿ ಕರ್ನಾಟಕದ ವಾದ ಬಿದ್ದು ಹೋಗುತ್ತದೆ
- ಏನೇ ಆದರೂ ಸರಿ ಅದನ್ನು ಎದುರಿಸುವ ಧೈರ್ಯ ತೋರಿಸಬೇಕಷ್ಟೇ.
- ರಾಜ್ಯದ ಜನರ ಕಣ್ಣಿನಲ್ಲಿ ಸಿಎಂ ಸಿದ್ದರಾಮಯ್ಯ ‘ಹೀರೋ’ ಆಗುತ್ತಾರೆ.
- ಕಾಂಗ್ರೆಸ್ ಸರ್ಕಾರದ ವಿರುದ್ಧದ ಜನಾಕ್ರೋಶ, ಬೆಂಬಲವಾಗಿ ಬದಲಾಗುತ್ತದೆ
- ಪ್ರತಿಪಕ್ಷಗಳು ಅನಿವಾರ್ಯವಾಗಿ ಸರ್ಕಾರದ ಬೆನ್ನಿಗೆ ನಿಲ್ಲುವಂತಾಗುತ್ತದೆ
- ಕಾವೇರಿ ಕೊಳ್ಳದ ಭಾಗದಲ್ಲಿ ಕಾಂಗ್ರೆಸ್ ಮತ್ತೆ ಭರಪೂರ ಬೆಂಬಲ ಪಡೆಯುತ್ತದೆ
- ಸಿದ್ದರಾಮಯ್ಯ ಸರ್ಕಾರದ ಕಾನೂನು ಪರಿಪಾಲನೆಗೆ ಸುಪ್ರೀಂ ಕೋರ್ಟ್ ಶಹಬ್ಬಾಶ್'ಗಿರಿ ನೀಡುತ್ತದೆ
- ನ್ಯಾಯಾಧೀಕರಣ, ಸುಪ್ರೀಂಕೋರ್ಟ್ ಎದುರು ಕರ್ನಾಟಕದ ವಾದ ಗಟ್ಟಿಯಾಗುತ್ತದೆ
- ರಾಜ್ಯದ ರೈತರ ಬೆಳೆಗಳಿಗೆ, ಬೆಂಗಳೂರು ಜನರಿಗೆ ಕುಡಿಯುವ ನೀರು ಸಿಗದಂತಾಗುತ್ತದೆ
- ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಮತ್ತಷ್ಟು ಹೆಚ್ಚಾಗುತ್ತದೆ
- ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ನಿಯಂತ್ರಣಕ್ಕೆ ಸಿಗದೇ ಹೋಗಬಹುದು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.