ಇನ್ನು ಜೀವಂತವಾಗಿದೆ ಅಖಂಡ ಭಾರತ, ಎಲ್ಲಿ?

Published : Aug 01, 2018, 06:52 PM IST
ಇನ್ನು ಜೀವಂತವಾಗಿದೆ ಅಖಂಡ ಭಾರತ, ಎಲ್ಲಿ?

ಸಾರಾಂಶ

ಒಮ್ಮೆ ದೇಶದ ಇತಿಹಾಸದ ಒಳಗೆ ಹೋಗಿ ಬರಬೇಕಾಗುತ್ತದೆ. ಅಖಂಡ ಭಾರತ ಹಾಗಿತ್ತು-ಹೀಗಿತ್ತು ಎಂದು ವೈಭವ ನೆನೆಯುವ ನಾವು ಅದರ ಕಲ್ಪನೆಯನ್ನು ಮಾತ್ರ ಮಾಡಿಕೊಳ್ಳುತ್ತೇವೆ. ಅದನ್ನೇ  ಒಮ್ಮೆ ನೋಡಿಕೊಂಡು ಬಂದರೆ ಹೇಗೆ?

ವಾರಣಾಸಿ[ಆ.1] ಅಖಂಡ ಭಾರತವನ್ನು ನಿಮ್ಮ ಮುಂದೆ ಕಟ್ಟಿಕೊಡುವ ಅಮೃತ ಶಿಲೆಯಲ್ಲಿ ನಿರ್ಮಾಣವಾದ ‘ಭಾರತ ಮಾತೆಯ ಮಂದಿರ’ ವಾರಣವಾಸಿಯಲ್ಲಿದೆ. 1918 ರಿಂದ 1924ರ ಅವಧಿಯಲ್ಲಿ ನಿರ್ಮಾಣದವಾದ ಈ ಅಮೃತ ಶಿಲೆಯ ನಕಾಶೆಯಲ್ಲಿ ಬಲುಚಿಸ್ತಾನ, ಅಪಘಾನಿಸ್ತಾನ, ಪಾಕಿಸ್ತಾನ, ಬಾಂಗ್ಲಾದೇಶ, ಬರ್ಮಾ ಮತ್ತು ಶ್ರೀಲಂಕಾ ಇದೆ.

ಮುಂದಿನ ಸಾರಿ ವಾರಣಾಸಿಗೆ ತೆರಳಿದಾಗ ಯಾವುದೇ ಕಾರಣಕ್ಕೂ ಭಾರತದ ಸಾರ ಹೇಳುವ ಈ ದೇವಾಲಯಕ್ಕೆ  ಭೇಟಿ ನೀಡುವುದನ್ನು ಮರೆಯಬೇಡಿ. ಮಹಾತ್ಮ ಗಾಂಧಿ ಕಾಶಿ ವಿದ್ಯಾಪೀಠ ಕ್ಯಾಂಪಸ್ ನಲ್ಲಿ ಈ ದೇವಾಲಯ ಇದೆ. 1936 ರ ಅಕ್ಟೋಬರ್ 25 ರಂದು ಮಹಾತ್ಮ ಗಾಂಧೀಜಿ ಈ ದೇವಾಲಯದ ಉದ್ಘಾಟನೆ ಮಾಡಿದ್ದರು ಎನ್ನುವುದು ಮತ್ತೂ ವಿಶೇಷ.

450 ಪರ್ವತಗಳು, ಸರೋವರ, ನದಿ, ಮುಖಜಭೂಮಿ, ಪ್ರಸ್ಥಭೂಮಿ ಸೇರಿದಂತೆ ಎಲ್ಲ ಭೌಗೋಳಿಕ ಚಿತ್ರಣವನ್ನು ಕಾಣಬಹುದು. ಸ್ವಾತಂತ್ರ್ಯದಿನ ಮತ್ತು  ಗಣರಾಜ್ಯದಿನದ ವೇಳೆ ನದಿ ಎಂದು ಗುರುತಿಸಿರುವ ಪ್ರದೇಶಕ್ಕೆ ನೀರು ತುಂಬಿಸುತ್ತೇವೆ ಜತೆಗೆ  ಹೂವಿನ ಅಲಂಕಾರ ಮಾಡುತ್ತೇವೆ ಎಂದು ಉಸ್ತುವಾರಿ ವಹಿಸಿಕೊಂಡಿರುವ ರಾಜು ಸಿಂಗ್ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಶಾಕಿಂಗ್: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಧಗಧಗನೆ ಹೊತ್ತಿ ಉರಿದ 40 ಎಕರೆ ಕಬ್ಬಿನ ಗದ್ದೆ!
ನಟ ರಿಷಬ್ ಶೆಟ್ಟಿ ಹರಕೆ ಕೋಲ ವಿವಾದ, ದೈವದ ಕಟ್ಟುಕಟ್ಟಳೆಯಲ್ಲಿ ಲೋಪವಾಗಿಲ್ಲ: ವಾರಾಹಿ ದೈವಸ್ಥಾನ ಸಮಿತಿ ಸ್ಪಷ್ಟನೆ