
ಹುಬ್ಬಳ್ಳಿ(ಜ.06): ರಾಷ್ಟ್ರೀಯ ಹೆದ್ದಾರಿ ಪಕ್ಕದ ಮದ್ಯದ ಅಂಗಡಿಗಳನ್ನ ‘ಕಿಕ್' ಔಟ್ ಮಾಡುವಂತೆ ಸುಪ್ರೀಂ ಆದೇಶಿಸಿದ ಬೆನ್ನಲೇ ಅಬಕಾರಿ ಅಧಿಕಾರಿಗಳು ಮದ್ಯದಂಗಡಿಗಳ ಸರ್ವೆ ನಡೆಸಿ ವರದಿ ಸಲ್ಲಿಸಿದ್ದಾರೆ. ಆದರೆ ಅಧಿಕಾರಿಗಳ ವರದಿ ಮದ್ಯ ಮಾರಾಟಗಾರರ ನಿದ್ದೆಗೆಡಿಸಿದೆ. ಕೋರ್ಟ್ ಆದೇಶ ಅನುಷ್ಠಾನಗೊಂಡರೆ ಶೇಕಡ ೯೦ ರಷ್ಟು ಬಾರ್'ಗಳಿಗೆ ಬೀಗ ಬೀಳೋದಂತೂ ಗ್ಯಾರಂಟಿ..
ರಾಷ್ಟ್ರೀಯ ಹೆದ್ದಾರಿ ಮದ್ಯದಂಗಡಿಗಳ 'ಕಿಕ್' ಔಟ್!: ಹೆದ್ದಾರಿ ಪಕ್ಕದ ಮದ್ಯದಂಗಡಿಗಳಲ್ಲಿ ಆತಂಕ
ಹೆದ್ದಾರಿ ಪಕ್ಕದ ಮದ್ಯದಂಗಡಿ ಕಿಕ್ ಔಟ್ ಮಾಡಲು ಸುಪ್ರೀಂ ಕೋರ್ಟ್ ನೀಡಿದ ಆದೇಶ ಬಾರ್ ಮಾಲಿಕರಲ್ಲಿ ಸಂಚಲನ ಸೃಷ್ಟಿಸಿದೆ. ಸರ್ವೋಚ್ಛ ನ್ಯಾಯಾಲಯದ ಅದೇಶ ಅನ್ವಯ ರಾಜ್ಯ ಅಬಕಾರಿ ಇಲಾಖೆ ಅಧಿಕಾರಿಗಳು ರಾಜ್ಯ ಹಾಗೂ ರಾಷ್ಟ್ರೀಯ ಹೆದ್ದಾರಿಯಿಂದ ೫೦೦ಮೀಟರ್ ಅಂತರದಲ್ಲಿರುವ ಮದ್ಯದಂಗಡಿಗಳ ಸರ್ವೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ಧಾರವಾಡ ಜಿಲ್ಲೆಯಲ್ಲಿ 212 ಅಂಗಡಿಗಳಿಗೆ ಬೀಗ!?
ಈ ಸಮೀಕ್ಷೆ ಪ್ರಕಾರ ಧಾರವಾಡ ಜಿಲ್ಲೆಯೊಂದರಲ್ಲೇ ಶೇಕಡ ೯೦ರಷ್ಟು ಬಾರ್ಗಳಿಗೆ ಬೀಗ ಬೀಳಲಿದೆ. ಜಿಲ್ಲೆಯ ಪರವಾನಿಗೆ ಪಡೆದ ೨೫೭ ಮದ್ಯದ ಅಂಗಡಿಗಳಿದ್ದು ಇವುಗಳ ಪೈಕಿ ೨೧೨ ಅಂಗಡಿಗಳು ಹೆದ್ದಾರಿಯಿಂದ ೫೦೦ ಮೀಟರ್ ಅಂತರದಲ್ಲಿವೆ.
ಅತ್ತ ಟಾರ್ಗೆಟ್.. ಇತ್ತ ಲಾಕೌಟ್ ಭೀತಿ!
ಇನ್ನು ಜನವಸತಿ ಪ್ರದೇಶ, ಶಾಲೆ, ಕಾಲೇಜು, ದೇವಸ್ಥಾನ ಹತ್ತಿರ ಬಾರ್ ತೆರಯುವಂತಿಲ್ಲ. ಹೀಗಾಗಿ ಬಹುತೇಕ ಮದ್ಯದಂಗಡಿಗಳು ಲಾಕೌಟ್ ಭೀತಿ ಎದುರಿಸುತ್ತಿವೆ. ಒಂದು ಕಡೆ ಸರ್ಕಾರ ಮದ್ಯ ಮಾರಾಟಕ್ಕೆ ಟಾರ್ಗೆಟ್ ಫಿಕ್ಸ್ ಮಾಡುತ್ತಿದೆ. ನಮಗೆ ಸಂಕಷ್ಟ ಎದುರಾಗಿದ್ದು ಸರ್ಕಾರವೇ ಪರಿಹಾರ ಸೂಚಿಸಲಿ ಅನ್ನೋದು ಕೆಲ ಬಾರ್ ಮಾಲೀಕರ ಮಾತು.
ಒಟ್ಟಿನಲ್ಲಿ, ರಾತ್ರಿ ನಶೆಯಲ್ಲಿ ತೇಲಾಡುತ್ತಿದ್ದ ಮದ್ಯದಂಗಡಿಗಳಿಗೆ ಸುಪ್ರೀಂ ‘ಕಿಕ್ ಔಟ್' ತೀರ್ಪು ನಶೆ ಇಳಿಯುವಂತೆ ಮಾಡಿದೆ. ಆದ್ರೆ, ಎಲ್ಲರ ಕಣ್ಣು ರಾಜ್ಯ ಸರ್ಕಾರದ ನಿರ್ಧಾರದ ಮೇಲೆ ಬಿದ್ದಿದೆ..
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.