ಪಂಜಾಬ್'ನಲ್ಲಿ ಕಾಂಗ್ರೆಸ್'ಗೆ ಆಮ್ ಆದ್ಮಿ ಚಿಂತೆ

By Suvarna Web DeskFirst Published Jan 5, 2017, 4:41 PM IST
Highlights

2004 ರಲ್ಲಿ ದೇಶದಲ್ಲೆಡೆ ಮೋದಿ ಅಲೆ ಇದ್ದರೂ ಪಂಜಾಬ್​ನಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ತನ್ನ ಸ್ವಂತ ರಾಜ್ಯ ದೆಹಲಿಯಲ್ಲಿ ಸೋತರೂ ಅರವಿಂದ್ ಕೇಜ್ರಿವಾಲ್ ಪಂಜಾಬ್​ನಲ್ಲಿ 4 ಸ್ಥಾನ ಗೆದ್ದುಕೊಂಡಿದ್ದರು.  ಸ್ವತಃ ಮೋದಿ ಆಪ್ತ ಅರುಣ್ ಜೈಟ್ಲಿ ಸೋಲನ್ನಪ್ಪಿಕೊಂಡಿದ್ದರು.

ದೇಶದ ಗಡಿಸೂಕ್ಷ್ಮ  ರಾಜ್ಯ ಪಂಜಾಬ್ ನಲ್ಲಿ ಫೆಬ್ರವರಿ 4 ರಂದು ಚುನಾವಣೆ ನಡೆಯಲಿದ್ದು ಬಿಜೆಪಿ ಅಕಾಲಿ ದಳದ ಮೈತ್ರಿ ಕೂಟ ಪ್ರಚಂಡ ಆಡಳಿತ ವಿರೋಧಿ ಅಲೆ ಎದುರಿಸುತ್ತಿದ್ದು 10 ವರ್ಷಗಳ ನಂತರ ಮರಳಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿರುವ ಕಾಂಗ್ರೆಸ್ ಪಕ್ಷ ಕ್ಕೆ ಈಗ ಆಮ್ ಆದ್ಮಿ ಪಕ್ಷದ್ದೇ ಚಿಂತೆ . ಅಕಾಲಿ ದಳದ ಮೇಲೆ ಮುನಿಸಿಕೊಂಡಿರುವ ಗ್ರಾಮೀಣ ಸಿಖ್ಖರು ಎಲ್ಲಿ ಮತ ಹಾಕುತ್ತಾರೆ ಎನ್ನುವುದು ಚುನಾವಣೆಯ ದೃಷ್ಟಿಯಿಂದ ಮುಖ್ಯವಾಗಿದ್ದು ಅಕಾಲಿ ದಳ ಮಾತ್ರ ಕಾಂಗ್ರೆಸ್ ಮತ್ತು ಆಮ್ ಆದ್ಮಿ ನಡುವೆ ಮತ ವಿಭಜನೆ ಆದರೆ ತನಗೆ ಮತ್ತೆ ಅವಕಾಶ ಸಿಗಬಹುದು ಎಂದು ಲೆಕ್ಕ ಹಾಕುತ್ತಿದೆ .

ಪಂಚ  ರಾಜ್ಯಗಳ ಚುನಾವಣೆಯಲ್ಲಿ ಉತ್ತರ ಪ್ರದೇಶದ ನಂತರ ಹೆಚ್ಚು ಕುತೂಹಲ ಕೆರಳಿಸಿದ್ದು  ಪಂಜಾಬ್ ಚುನಾವಣೆ. 2004 ರಲ್ಲಿ ದೇಶದಲ್ಲೆಡೆ ಮೋದಿ ಅಲೆ ಇದ್ದರೂ ಪಂಜಾಬ್​ನಲ್ಲಿ ಪರಿಸ್ಥಿತಿ ಭಿನ್ನವಾಗಿತ್ತು. ತನ್ನ ಸ್ವಂತ ರಾಜ್ಯ ದೆಹಲಿಯಲ್ಲಿ ಸೋತರೂ ಅರವಿಂದ್ ಕೇಜ್ರಿವಾಲ್ ಪಂಜಾಬ್​ನಲ್ಲಿ 4 ಸ್ಥಾನ ಗೆದ್ದುಕೊಂಡಿದ್ದರು.  ಸ್ವತಃ ಮೋದಿ ಆಪ್ತ ಅರುಣ್ ಜೈಟ್ಲಿ ಸೋಲನ್ನಪ್ಪಿಕೊಂಡಿದ್ದರು.

Latest Videos

ಕಳೆದ ಹತ್ತು ವರ್ಷಗಳಿಂದ ಆಡಳಿತ ನಡೆಸುತ್ತಿರುವ ಅಕಾಲಿದಳದಿಂದಾಗಿ ಸಿಖ್ಖರ ನಾಡಲ್ಲಿ ಬಿಜೆಪಿ ಪ್ರಚಂಡ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಇದನ್ನು ತಡೆಯಲೆಂದೇ ಮೋದಿ ತಿಂಗಳಿಗೊಮ್ಮೆ ಪಂಜಾಬ್​ಗೆ ಭೇಟಿ ನೀಡ್ತಿದ್ದಾರೆ. ಇವತ್ತು ಕೂಡ ಪಾಟ್ನಾ ಸಾಹೇಬ್ ಗುರುದ್ವಾರದಲ್ಲಿ ಸಿಖ್ಖರ ಓಲೈಸುವ ಪ್ರಯತ್ನ ಮಾಡಿದ್ದಾರೆ.

ಹಿಂದೂಗಳ ಮತಗಳನ್ನು ಬಿಜೆಪಿ ಮತ್ತು ಸಿಖ್ಖರ ಮತಗಳನ್ನು ಪಡೆಯುವ ಅಕಾಲಿದಳದ ನೈಸರ್ಗಿಕ ಮೈತ್ರಿ ದಶಕಗಳಿಂದಲೂ ನಡೆದುಕೊಂಡೇ ಬಂದಿದೆ. ಆದರೆ ಸಿಎಂ ಪ್ರಕಾಶ್ ಸಿಂಗ್ ಬಾದಲ್​ಗೆ  ವಯಸ್ಸಾಗಿದೆ.

ಉಪ ಮುಖ್ಯಮಂತ್ರಿಯಾಗಿರುವ ಅವರ ಪುತ್ರ ಸುಖಬೀರ್ ಬಾದಲ್ ಬೆಂಬಲಿಗರ ಗೂಂಡಾಗಿರಿ, ಭೂ ಮಾಫಿಯಾ ಮತ್ತು ಡ್ರಗ್ಸ್ ದಂಧೆ ಸಿಖ್ಖರ ಆಕ್ರೋಶಕ್ಕೆ ಕಾರಣವಾಗಿದೆ. ಇದು ಬಿಜೆಪಿ, ಅಕಾಲಿ ದಳವನ್ನು ಕಾಡುತ್ತಿರುವ ದೊಡ್ಡ ಸಮಸ್ಯೆ . ಇದರ ಲಾಭ ಪಡೆಯಲು ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಪೈಪೋಟಿಗಿಳಿದಿವೆ. ಆದರೆ ಆಂತರಿಕ ಜಗಳ, ಮುಖ್ಯಮಂತ್ರಿ ಅಭ್ಯರ್ಥಿ ಸಮಸ್ಯೆ ಆಮ್ ಆದ್ಮಿ ಗಿರುವ ದೊಡ್ಡ ಸಮಸ್ಯೆ.  ಕಾಂಗ್ರೆಸ್ ನಲ್ಲಿ ಆಂತರಿಕ ಜಗಳವಿದ್ದರೂ ಓಲ್ಡ್ ಹಾರ್ಸ್ ಅಮರಿಂದರ್ ಸಿಂಗ್ ಬಗ್ಗೆ ಒಂದು ಅನುಕಂಪವಿದೆ. ಹೀಗಾಗಿ ಪಂಜಾಬ್​ನಲ್ಲಿ ತ್ರಿಕೋನ ಸ್ಪರ್ಧೆ ಇದೆ.. ಇದೇ ಕಾರಣಕ್ಕೆ ದೇಶದ ಗಡಿರಾಜ್ಯದ ಚುನಾವಣೆ ಹೆಚ್ಚು ಕುತೂಹಲಕಾರಿಯಾಗಿದೆ.

ವರದಿ: ಪ್ರಶಾಂತ್ ನಾತು,ನವದೆಹಲಿ, ಸುವರ್ಣ ನ್ಯೂಸ್

click me!