
ಬಿಹಾರ(ಜ.15): ಇನ್ನೂ ಮದುವೆಯಾಗದ ನನ್ನ ತಂಗಿ ಮಗುವಿಗೆ ಜನ್ಮ ನೀಡಿದ್ರೆ ಜನರು ಏನು ಹೇಳ್ಬಹುದು? ನಾನು ಸಮಾಜದಲ್ಲಿ ಬಾಳಿ ಬದುಕುವುದು ಹೇಗೆ? ಹಲವು ಬಾರಿ ಬೇಡವೆಂದರೂ ತನ್ನ ಪ್ರಿಯತಮನನ್ನು ಭೇಟಿಯಾಗುತ್ತಿದ್ದಳು, ಇಂದು ಅದ್ಯಾವ ಪರಿಸ್ಥಿತಿ ಎದುರಾಗಿದೆ ಎಂದರೆ ಈ ಸಮಸ್ಯೆಯಿಂದ ಹೊರ ಬರಲು ನಾನೇನಾದರೂ ಮಾಡಲೇಬೇಕಿದೆ. ಈ ಎಲ್ಲಾ ಯೋಚನೆಗಳು ಸಹೋದರನೊಬ್ಬ ತಂಗಿಯ ವಿರುದ್ಧ ಭಯಾನಕ ಸಂಚೊಂದನ್ನು ರಚಿಸಿ ತನ್ನ ಮೇಲೆ ಅನುಮಾನ ಮೂಡದಂತೆ ಕೆಲಸ ಮುಗಿಸಿದ್ದ. ಆದರೆ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆರೋಪಿಯನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಘಟನೆ ಬಿಹಾರದ ಲಕ್ಷ್ಮೀಪುರ ಎಂಬ ಹಳ್ಳಿಯಲ್ಲಿ ನಡೆದಿದ್ದು, ಈ ಹತ್ಯೆಯ ಹಿಂದಿನ ಸಂಚು ಆರೋಪಿಯಾಗಿರುವ ಯುವತಿಯ ಸಹೋದರ ಚಂದ್ರಶೇಖರ್ ಎಂಬಾತನನ್ನು ಬಂಧಿಸಿದ ಬಳಿಕ ಬಯಲಾಗಿದೆ. ಈ ಕುರಿತಾಗಿ ಮಾತನಾಡಿದ ಪೊಲೀಸರು ' ಊರಿನ ಜನರೆದುರು ತನ್ನ ಮರ್ಯಾದೆ ಉಳಿಸಿಕೊಳ್ಳಲು ಈತ ಇನ್ನಿಬ್ಬರೊಡನೆ ಕೈ ಮಿಲಾಯಿಸಿ ತನ್ನ ತಂಗಿಯನ್ನು ಹತ್ಯೆಗೈದಿರುವುದಾಗಿ ಆರೋಪಿ ಒಪ್ಪಿದ್ದಾನೆ. ಹೀಗಾಗಿ ಈತನಿಗೆ ಸಹಾಯ ಮಾಡಿದ ಸಹಚರರನ್ನೂ ಬಂಧಿಸಲಾಗಿದೆ' ಎಂದು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.