ತಮಿಳುನಾಡಿನಲ್ಲಿ ರೌಡಿ ನಾಗನನ್ನು ಪೊಲೀಸರು ಚೇಸ್ ಮಾಡಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

Published : May 11, 2017, 09:15 PM ISTUpdated : Apr 11, 2018, 12:57 PM IST
ತಮಿಳುನಾಡಿನಲ್ಲಿ ರೌಡಿ ನಾಗನನ್ನು ಪೊಲೀಸರು ಚೇಸ್ ಮಾಡಿದ್ದು ಹೇಗೆ? ಇಲ್ಲಿದೆ ಸಂಪೂರ್ಣ ವಿವರ

ಸಾರಾಂಶ

ಪೊಲೀಸ್ ವ್ಯವಸ್ಥೆಗೇ ಸೆಡ್ಡು ಹೊಡೆದು ಅಡ್ಡಾದಿಡ್ಡಿ ಅಲೆದಾಡ್ತಿದ್ದ ನಾಗರಾಜ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಾಗನ ಹಿಂದೆ ಬಿದ್ದಿದ್ದ ಎಸಿಪಿ ರವಿಕುಮಾರ್ ನೇತೃತ್ವದ ತಂಡ ಸಿನಿಮೀಯ ಮಾದರಿಯಲ್ಲಿ ನಾಗನ ಹೆಡೆಮುರಿ ಕಟ್ಟಿದೆ. ತಮಿಳುನಾಡಿನಲ್ಲಿ ನಡೆದ ಸೂಪರ್ ಚೇಸಿಂಗ್ ಕಹಾನಿ ಇಲ್ಲಿದೆ

ಚೆನ್ನೈ(ಮೇ.12): ಪೊಲೀಸ್ ವ್ಯವಸ್ಥೆಗೇ ಸೆಡ್ಡು ಹೊಡೆದು ಅಡ್ಡಾದಿಡ್ಡಿ ಅಲೆದಾಡ್ತಿದ್ದ ನಾಗರಾಜ ಕೊನೆಗೂ ಅರೆಸ್ಟ್ ಆಗಿದ್ದಾನೆ. ನಾಗನ ಹಿಂದೆ ಬಿದ್ದಿದ್ದ ಎಸಿಪಿ ರವಿಕುಮಾರ್ ನೇತೃತ್ವದ ತಂಡ ಸಿನಿಮೀಯ ಮಾದರಿಯಲ್ಲಿ ನಾಗನ ಹೆಡೆಮುರಿ ಕಟ್ಟಿದೆ. ತಮಿಳುನಾಡಿನಲ್ಲಿ ನಡೆದ ಸೂಪರ್ ಚೇಸಿಂಗ್ ಕಹಾನಿ ಇಲ್ಲಿದೆ

ನಿನ್ನೆ ಬೆಳಗ್ಗೆ  11ಗಂಟೆಯ ಸಮಯ. ಬೆಂಗಳೂರಿನಲ್ಲಿದ್ದ ನಾಗನ ಪರ ವಕೀಲ ಶ್ರೀರಾಮ ರೆಡ್ಡಿ  ಫೋನ್ ರಿಂಗಣಿಸತೊಡಗಿತ್ತು. ಕರೆ ಸ್ವೀಕರಿಸುತ್ತಿದ್ದಂತೆ , ಅಪರಿಚಿತ ನಂಬರ್ ನಿಂದ ಕರೆ ಮಾಡಿದ್ದ ನಾಗ ಅರಚಾಡತೊಡಗಿದ್ದ 'ಪೊಲೀಸರು ನನ್ನ ಶೂಟ್ ಮಾಡುತ್ತಿದ್ದಾರೆ. ಫಾಲೋ ಮಾಡುತ್ತಿದ್ದಾರೆ ಎಂದು ಅರಚಾಡತೊಡಗಿದ್ದ. ಇಬ್ಬರ ನಡುವಿನ ಫೋನ್ ಸಂಭಾಷಣೆ ಸುವರ್ಣನ್ಯೂಸ್‌ಗೆ ಲಭ್ಯವಾಗಿದೆ.

ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಕಾಂಜಿಪುರಂನಲ್ಲಿ ನಾಗನ ಬೆನ್ನತ್ತಿದ್ದ ಪೊಲೀಸರು ಸುಮಾರು 25ಕಿಲೋಮೀಟರ್ ಅಂದರೆ ಒಂದು ತಾಸಿಗೂ ಅಧಿಕ ಸಮಯ ನಾಗನ ಓಮಿನಿ ಕಾರ್ ಚೇಸ್ ಮಾಡಿ  ಆರ್ಕಾಟ್ ಬಳಿ ತಡೆದು ನಿಲ್ಲಿಸಿದ್ದರು.  ನಿಜಕ್ಕೂ ಕೂಡ ಯಾವುದೇ ಸಿನಿಮಾಗೂ ಕಮ್ಮಿ ಇರಲಿಲ್ಲ ಪೊಲೀಸರ ಚೇಸಿಂಗ್. ಹೀಗೆ ಚೇಸ್ ಮಾಡಿದ ಪೊಲೀಸರು ನಾಗ ಹಾಗೂ ಮಕ್ಕಳಾದ ಗಾಂಧಿ ಹಾಗೂ ಶಾಸ್ತ್ರಿಯನ್ನು ಬಂಧಿಸಿದ್ದಾರೆ. ಎಂದಿನಂತೆ ತನ್ನ ನಾಟಕ ಶುರು ಮಾಡಿದ ನಾಗ ತಕ್ಷಣವೇ ತಮಿಳುನಾಡು ಪೊಲೀಸ್ ಕಂಟ್ರೋಲ್ ರೂಮ್'ಗೆ ಕರೆ ಮಾಡಿ ನನ್ನನ್ನು ಕಿಡ್ನಾಪ್ ಮಾಡುತ್ತಿದ್ದಾರೆ ಅಂತ ಹೇಳಿದ್ದ. ಇಷ್ಟಾಗುತ್ತಿದ್ದಂತೆ ಅಲ್ಲಿನ ಸ್ಥಳೀಯ ಪೊಲೀಸರಿಗೆ ಬೆಂಗಳೂರು ಪೊಲೀಸರಿಗೂ ಕೊಂಚ ವಾಗ್ವಾದವೂ ಸಹ ನಡೆದಿತ್ತು.

ನಾಗ ಮತ್ತವರ ಮಕ್ಕಳನ್ನು ನಿನ್ನೆ ರಾತ್ರಿಯೇ ತನಿಖಾ ತಂಡ ಬೈಯಪ್ಪನ ಹಳ್ಳಿ ಠಾಣೆಗೆ ಕರೆತಂದರು. ಅಲ್ಲೂ ನಾಗನ ಹೈಡ್ರಾಮಾ ಮುಂದುವರಿತು. ಮಾಧ್ಯಮದ ಕ್ಯಾಮರಾ ಕಂಡ ಕೂಡಲೇ ಕುಸಿದುಬಿದ್ದ. ಅನಂತರ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ಕತೆತಂದು ರಾತ್ರಿಯಿಡೀ ವಿಚಾರಣೆ ನಡೆಸಲಾಯಿತು. ಇವತ್ತು ಕೋರ್ಟ್ ಗೆ ನಾಗ ಮತ್ತು ಆತನ ಮಕ್ಕಳಾದ ಗಾಂಧಿ ಮತ್ತು ಶಾಸ್ತ್ರಿಯನ್ನು ಹಾಜರುಪಡಿಸಲಿದ್ದು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಿದ್ದಾರೆ.

ಒಟ್ಟಿನಲ್ಲಿ ಬೆಂಗಳೂರಲ್ಲಿ ಬ್ಲ್ಯಾಕ್ ಆಂಡ್ ವೈಟ್ ದಂಧೆಯಲ್ಲಿ ತೊಡಗಿ ಉದ್ಯಮಿಗಳ ತಲೆಗೆ ಗನ್​ ಇಟ್ಟು ಹತ್ತಾರು ಕೋಟಿ ವಂಚಿಸಿದ್ದ ಸಮಾಜಘಾತುಕ ಪಡೆಯನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಬಿಜೆಪಿ ದೃಷ್ಟಿಯಲ್ಲಿ ಆರೆಸ್ಸೆಸ್‌ ನೋಡುವುದು ತಪ್ಪು : ಭಾಗ್ವತ್‌
ಬಿಜೆಪಿ ನವ ಕಾರ್ಯಾಧ್ಯಕ್ಷ ನಿತಿನ್‌ ಶಾಸಕ ಸ್ಥಾನ ಬಿಟ್ಟು ರಾಜ್ಯಸಭೆಗೆ?