
ವಿಜಯಪುರ(ಮೇ.12): ಇದೊಂದು ಡಿಫ್ರೆಂಟ್ ಕೇಸ್. ಜವಾಬ್ದಾರಿ ಮರೆತ ಶಾಸಕರಿಬ್ಬರು ಕ್ಷೇತ್ರದಿಂದಾ ಕಾಣೆಯಾಗಿ ತಿಂಗಳೆ ಕಳೆದಿವೆ. ಕಣ್ಮರೆಯಾಗಿರೋ ಶಾಸಕರನ್ನ ದಯವಿಟ್ಟು ಹುಡುಕಿಕೊಡಿ ಅಂತಾ ಸಾರ್ವಜನಿಕರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಹಾಗಾದರೆ ಮಿಸ್ಸಿಂಗ್ ಆದ ಶಾಸಕರ್ಯಾರು ಅಂತ ಹೇಳ್ತೀವಿ ಈ ಸ್ಟೋರಿ ನೋಡಿ.
ಹೀಗೆ ಪೊಲೀಸ್ ಠಾಣೆಯಲ್ಲಿ ಸಾಲಾಗಿ ನಿಂತು ತಮ್ಮ ನೋವನ್ನ ದೂರಿನ ಮೂಲಕ ವ್ಯಕ್ತಪಡಿಸ್ತಿರೋ ಇವರೆಲ್ಲಾ ವಿಜಯಪುರ ನಗರದ ನಿವಾಸಿಗಳು. ನಗರದಲ್ಲಿ ಹನಿ ನೀರಿಗೂ ಜನ ಪರಿತಪಿಸುತ್ತಿದ್ದರೆ ಕ್ಷೇತ್ರದ ಶಾಸಕ ಮಕ್ಬೂಲ್ ಬಾಗ್ವಾನ್ ಮಾತ್ರ ಜನರ ಸಮಸ್ಯೆ ಆಲಿಸದೇ ಕಣ್ಮರೆಯಾಗಿದ್ದಾರೆ.. ಇದರಿಂದ ಬೇಸತ್ತ ಸಾರ್ವಜನಿಕರು ನಗರದ ಗಾಂಧಿಚೌಕ್ ಪೊಲೀಸ್ ಠಾಣೆ ಹಾಗೂ ಜಲನಗರ ಪೊಲೀಸ್ ಠಾಣೆಯಲ್ಲಿ ಶಾಸಕರನ್ನ ಹುಡುಕಿಕೊಡಿ ಅಂತಾ ದೂರು ನೀಡಿದ್ದಾರೆ.
ದೇವರಹಿಪ್ಪರಗಿ ಕ್ಷೇತ್ರದ ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಅವ್ರದ್ದು ಕೂಡ ಇದೇ ಕೇಸ್. ಕ್ಷೇತ್ರದ ಜನರು ತೀವ್ರ ಬರದಿಂದ ತತ್ತರಿಸುತ್ತಿದ್ದರೆ, ಶಾಸಕ ಎ.ಎಸ್. ಪಾಟೀಲ್ ನಡಹಳ್ಳಿ ಮಾತ್ರ ಕ್ಷೇತ್ರದಲ್ಲಿ ಕಾಣಿಸಿಕೊಂಡು 2 ತಿಂಗಳುಗಳೇ ಕಳೆದಿವೆ. ಹೀಗಾಗಿ ಇವ್ರ ವಿರುದ್ಧ ಸ್ಥಳೀಯರು ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದಾರೆ.
ಪೊಲೀಸರು ಕೂಡ ಮಿಸ್ಸಿಂಗ್ ಕೇಸ್ ದಾಖಲಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಎರಡೂ ಕ್ಷೇತ್ರಗಳಲ್ಲೂ ಸಮಸ್ಯೆಗಳು ತಾಂಡವವಾಡುತ್ತಿದ್ದರೂ ಜನಪ್ರತಿನಿಧಿಗಳು ಮಾತ್ರ ತಮಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ವರ್ತಿಸುತ್ತಿರುವುದು ಮಾತ್ರ ವಿಪರ್ಯಾಸ. ಇನ್ನೂ ಕಾಣೆಯಾಗಿರೋ ಶಾಸಕರಿಬ್ಬರೂ ಆಡಳಿತರೂಢ ಕಾಂಗ್ರೆಸ್ ಪಕ್ಷದವರು. ಈಗಲಾದ್ರೂ ಸಿಎಂ ಸಾಹೇಬ್ರು ಶಾಸಕರಿಗೆ ತಾಕೀತು ಮಾಡಿ ಕ್ಷೇತ್ರ ಜನರ ಸಮಸ್ಯೆ ಆಲಿಸುವಂತೆ ಕಳುಹಿಸುತ್ತಾರಾ ಕಾದು ನೋಡಬೇಕು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.