ಕಾರ್ಗಿಲ್ ಯುದ್ಧದಲ್ಲಿ ಎಲ್ಲರನ್ನೂ ಎದುರು ಹಾಕಿಕೊಂಡ ಭಾರತಕ್ಕೆ ನೆರವಿಗೆ ಬಂದಿದ್ದು ಇಸ್ರೇಲ್!

By Web DeskFirst Published Jul 26, 2019, 10:11 AM IST
Highlights

ಕಾರ್ಗಿಲ್ ಯುದ್ಧ ನಡೆದು ಇಂದಿಗೆ 20 ವರ್ಷ | ದೇಶದೆಲ್ಲೆಡೆ ವಿಜಯ್ ದಿವಸ್ ಸಂಭ್ರಮ | ಪಾಕಿಗಳನ್ನು ಹೆಡೆಮುರಿ ಕಟ್ಟಿದ ನಮ್ಮ ಹೆಮ್ಮೆಯ ಯೋಧರಿಗೊಂದು ಸಲಾಂ 

ಪಾಕಿಸ್ತಾನದ ಸೈನಿಕರು ಭಾರತದ ಗಡಿ ನುಸುಳಿದ್ದಾರೆ ಎಂಬುದನ್ನು ಭಾರತ ಅರ್ಥೈಸಿಕೊಳ್ಳಲು ಒಂದು ವಾರಕ್ಕಿಂತ ಹೆಚ್ಚು ಕಾಲಾವಕಾಶ ಬೇಕಾಯಿತು. ಮೂರು ವಾರಗಳ ನಂತರ ಗಡಿ ನುಸುಳಿದ ಪಾಕಿಸ್ತಾನಿ ಸೈನಿಕರನ್ನು ಪತ್ತೆ ಹಚ್ಚಿದ ಭಾರತೀಯ ಯೋಧರು, ಅವರನ್ನು ಹಿಮ್ಮೆಟ್ಟಿಸಲು ಕಾರ್ಯೋನ್ಮುಖರಾದರು.

ಈ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಒಪ್ಪಂದಗಳ ನೆಪವೊಡ್ಡಿ ಹಲವು ರಾಷ್ಟ್ರಗಳು ಭಾರತಕ್ಕೆ ನೆರವಾಗಲು ಹಿಂದೇಟು ಹಾಕಿದವು. ಇಂಥ ಸಂದರ್ಭದಲ್ಲಿ ಭಾರತಕ್ಕೆ ನೆರವಾಗಬಾರದೆಂದು ತಮ್ಮ ಮೇಲೆ ಹಲವು ರಾಷ್ಟ್ರಗಳು ಒತ್ತಡ ತಂದರೂ ಅವುಗಳೆಲ್ಲವನ್ನೂ ಕಡೆಗಣಿಸಿ ಇಸ್ರೇಲ್‌ ಭಾರತದ ಬೆನ್ನೆಲುಬಾಗಿ ನಿಂತಿತು.

ಹಾಗಾದರೆ, ಕಾರ್ಗಿಲ್‌ ಯುದ್ಧದಲ್ಲಿ ಭಾರತಕ್ಕೆ ಇಸ್ರೇಲ್‌ ಹೇಗೆಲ್ಲಾ ನೆರವಾಯಿತು?

ಶಸ್ತ್ರಾಸ್ತ್ರಗಳ ಪೂರೈಕೆ:

ಭಾರತ ಮತ್ತು ಪಾಕಿಸ್ತಾನ ರಾಷ್ಟ್ರಗಳ ಯೋಧರ ನಡುವೆ ಎರಡು ತಿಂಗಳು ಯುದ್ಧ ನಡೆದಿತ್ತು. ಆ ಸಂದರ್ಭದಲ್ಲಿ ಭಾರತ ಸೇನೆಯಲ್ಲಿ ಶಸ್ತ್ರಾಸ್ತ್ರಗಳ ಕೊರತೆ ಉದ್ಭವವಾಯಿತು. ಆಗ ಭಾರತದ ನೆರವಿಗೆ ಬಂದ ಇಸ್ರೇಲ್‌ ಭಾರತಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳ ಪೂರೈಕೆಗೆ ಮುಂದಾಯಿತು.

ಆದರೆ, ಇಲ್ಲಿ ಇಸ್ರೇಲ್‌ಗೆ ಮತ್ತೊಂದು ಸಂದಿಗ್ಧ ಸ್ಥಿತಿ ನಿರ್ಮಾಣವಾಯಿತು. ಅದೇನು ಅಂದರೆ, ಯಾವುದೇ ಕಾರಣಕ್ಕೂ ಭಾರತಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರಗಳನ್ನು ತ್ವರಿತವಾಗಿ ಪೂರೈಕೆ ಮಾಡಬಾರದು ಎಂದು ವಿಶ್ವಸಂಸ್ಥೆಯೇ ಇಸ್ರೇಲ್‌ಗೆ ಸೂಚನೆ ನೀಡಿತು.

ಆದರೆ, ವಿಶ್ವಸಂಸ್ಥೆಯಂಥ ಅಂತಾರಾಷ್ಟ್ರೀಯ ಸಂಸ್ಥೆಯನ್ನೇ ಎದುರು ಹಾಕಿಕೊಂಡ ಇಸ್ರೇಲ್‌, ಭಾರತಕ್ಕೆ ಅಗತ್ಯವಿರುವ ಎಲ್ಲ ಶಸ್ತ್ರಾಸ್ತ್ರಗಳನ್ನು ನಿಗದಿತ ಸಮಯಕ್ಕೆ ಭಾರತದ ಗಡಿ ಪ್ರದೇಶಗಳಿಗೆ ಪೂರೈಕೆ ಮಾಡಿತು. ಈ ಮೂಲಕ ಶತ್ರು ರಾಷ್ಟ್ರದ ಸೈನಿಕರನ್ನು ಹಿಮ್ಮೆಟ್ಟಿಸಲು ಭಾರತಕ್ಕೆ ನೆರವಿನ ಹೆಗಲು ಚಾಚಿತು.

ಪಾಕ್‌ ಬಂಕರ್‌ ನಾಶಕ್ಕೆ ಇಸ್ರೇಲ್‌ ಲೇಸರ್‌ ಕ್ಷಿಪಣಿ:

ಪಾಕಿಸ್ತಾನದ ಯೋಧರು ತಮ್ಮ ಬಂಕರ್‌ಗಳ ಮೂಲಕ ಭಾರತದ ಮೇಲೆ ಹೆಚ್ಚಿನ ಹಾನಿಗೆ ಮುಂದಾದರು. ಅಲ್ಲದೆ, ಭಾರತೀಯ ಸೇನೆಯ ಬತ್ತಳಿಕೆಯಲ್ಲಿ ಲೇಸರ್‌ ಮಾರ್ಗದರ್ಶಿ ಕ್ಷಿಪಣಿ ಇರಲಿಲ್ಲ. ಇದರಿಂದ ಭಾರತದ ಸೇನೆ ಬಹುದೊಡ್ಡ ಹಿನ್ನಡೆ ಅನುಭವಿಸುವ ಸ್ಥಿತಿಯಲ್ಲಿತ್ತು. ಈ ಸಂದರ್ಭದಲ್ಲಿ ಮತ್ತೆ ಭಾರತದ ನೆರವಿಗೆ ಬಂದದ್ದು ಇಸ್ರೇಲ್‌ ರಾಷ್ಟ್ರವೇ. ಭಾರತ ಲೇಸರ್‌ ಮಾರ್ಗದರ್ಶಿ ಕ್ಷಿಪಣಿ ಕೇಳಿದ ತತ್‌ಕ್ಷಣವೇ ಇಸ್ರೇಲ್‌ ಕ್ಷಿಪಣಿಗಳನ್ನು ಭಾರತದ ಸೇನೆಗೆ ಪೂರೈಸಿತು.

ಈ ಕ್ಷಿಪಣಿಗಳ ಮೂಲಕ ಭಾರತದ ಯುದ್ಧ ವಿಮಾನಗಳು ಪಾಕಿಸ್ತಾನದ ಹಲವು ಬಂಕರ್‌ಗಳನ್ನು ನಾಶ ಮಾಡಿದವು. ಈ ಮೂಲಕ ಪಾಕಿಸ್ತಾನದ ಸೇನೆಗೆ ಭಾರತ ಮರ್ಮಾಘಾತ ನೀಡಿತು. ಅಲ್ಲದೆ, 1999ರ ಜೂನ್‌ನಿಂದ ಕಾರ್ಗಿಲ್‌ ಯುದ್ಧದಲ್ಲಿ ಸಕ್ರಿಯವಾದ ಮಿರಾಜ್‌-2000 ಎಚ್‌ ಯುದ್ಧ ವಿಮಾನಗಳು ಪಾಕಿಸ್ತಾನವನ್ನು ಇನ್ನಿಲ್ಲದಂತೆ ಹಾನಿಗೊಳಿಸಿದವು. ಅಲ್ಲದೆ, ಇಸ್ರೇಲ್‌ ಭಾರತಕ್ಕೆ ನೀಡಿದ ಡ್ರೋನ್‌ಗಳು ಪಾಕಿಸ್ತಾನದ ಸೈನಿಕರು ಅಡಗಿ ಕುಳಿತಿದ್ದ ಸ್ಥಳಗಳನ್ನು ಪತ್ತೆ ಹಚ್ಚುವಲ್ಲಿ ಭಾರತೀಯ ಯೋಧರಿಗೆ ನೆರವಾದವು.

 


 

click me!