ಹೃದಯ ಕಲಕುವ ಆನೆಯ ಚಿತ್ರ ಹಂಚಿಕೊಂಡ ಅರಣ್ಯಾಧಿಕಾರಿ

By Web DeskFirst Published Jun 17, 2019, 12:29 PM IST
Highlights

ಎಲ್ಲಿ ನೋಡಿದರಲ್ಲಿ ಪ್ಲಾಸ್ಟಿಕ್ ರಾಶಿಯದ್ದೇ ಕಾರುಬಾರು, ದನ-ಕರುಗಳು ತಿನ್ನಲು ಹುಲ್ಲಿಲ್ಲದೇ, ಪ್ಲಾಸ್ಟಿಕ್ ತಿನ್ನವಂಥ ಪರಿಸ್ಥಿತಿ ಇದೆ. ಅರಣ್ಯಾಧಿಕಾರಿಯೊಬ್ಬರು ಪ್ಲಾಸ್ಟಿಕ್ ರಾಶಿ ಮುಂದೆ ಆನೆ ಇರುವ ಚಿತ್ರವೊಂದನ್ನು ಶೇರ್ ಮಾಡಿಕೊಂಡಿದ್ದು, ಎಲ್ಲರ ಮನ ಕಲಕುವಂತಿದೆ. 

ನವದೆಹಲಿ [ಜೂ.17] : ಪ್ಲಾಸ್ಟಿಕ್ ಬಿಟ್ಟು, ಮಾನವನ ಬದುಕೇ ಇಲ್ಲದಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಇದೇ ಪ್ಲಾಸ್ಟಿಕ್ ಭೂಮಿಯನ್ನು ಅಪೋಶನ ತೆಗೆದುಕೊಳ್ಳುತ್ತಿರುವುದು ಮಾತ್ರ ದುರಂತ. ಅದೇನೇ ಕಾನೂನು ಕಟ್ಟಳೆ ಜಾರಿಗೊಳಿಸಿದರೂ ಪ್ಲಾಸ್ಟಿಕ್ ರಾಶಿ ಮಾತ್ರ ಕರಗುತ್ತಿಲ್ಲ ಎನ್ನುವುದು ದುಃಖಕರ ಸಂಗತಿ. ಇತ್ತೀಚೆಗೆ ಮೀನಿನ ಹೊಟ್ಟೆಯಲ್ಲಿ ಪ್ಲಾಸ್ಟಿಕ್ ರಾಶಿ ದೊರೆತ ಸುದ್ದಿ ವೈರಲ್ ಆದ ಬೆನ್ನಲ್ಲೇ, ಇದೀಗ ಭೂಮಿಯಲ್ಲಿ ಕರಗದ ಪ್ಲಾಸ್ಟಿಕ್ ರಾಶಿ ಮುಂದೆ ಆನೆ ಇರುವ ಚಿತ್ರವೊಂದನ್ನು ಅರಣ್ಯಾಧಿಕಾರಿಯೊಬ್ಬರು ಶೇರ್ ಮಾಡಿಕೊಂಡಿದ್ದಾರೆ. ಇದೊಂದು ಚಿತ್ರ ಸಾಕಷ್ಟು ಕಥೆ ಹೇಳುತ್ತಿದ್ದು, ಎಂಥವರ ಮನಸ್ಸನ್ನೂ ಕದಡುವಂತಿದೆ.

ಇಡೀ ಪರಿಸರವನ್ನು ಹಾಳು ಮಾಡುತ್ತಿರುವ ಇದೇ ಪ್ಲಾಸ್ಟಿಕ್‌ ಅನ್ನು ಸಸ್ಯಾಹಾರಿ ಪ್ರಾಣಿಗಳೂ ಸೇವಿಸಿ, ಬದುಕಿಗೇ ಸಂಕಷ್ಟ ತಂದುಕೊಳ್ಳುತ್ತಿದೆ. ಈ ಪ್ಲಾಸ್ಟಿಕ್ ಪ್ರಾಣಿ ಸಂಕುಲಕ್ಕೆ ಯಾವ ರೀತಿ ಸಮಸ್ಯೆ ತಂದೊಡ್ಡುತ್ತಿದೆ ಎನ್ನುವ  ಬಗ್ಗೆ ಅರಣ್ಯಾಧಿಕಾರಿ ಪ್ರವೀಣ್ ಕಸ್ವಾನ್ ಅವರು ಫೊಟೊ ಒಂದನ್ನು ಶೇರ್ ಮಾಡಿಕೊಂಡಿದ್ದಾರೆ. ಸಂಪೂರ್ಣವಾಗಿ ಕಸ ತುಂಬಿದ ಜಾಗದಲ್ಲಿ ಆನೆಯೊಂದು ನಿಂತು ತನ್ನ ಆಹಾರ ಎಲ್ಲಿದೆ ಎನ್ನುವುದನ್ನು ಹುಡುಕುತ್ತಿರುವಂತಿದೆ ಈ ಫೋಟೋ. 

When cities expand, our dump yards also expand. land seems easy target for them.

This is what our plastic & other waste is doing to wildlife. A marvellous creature on human waste. PC- TN43 FB. pic.twitter.com/wWzBDmMv4n

— Parveen Kaswan, IFS (@ParveenKaswan)

When cities expand, our dump yards also expand. land seems easy target for them.

This is what our plastic & other waste is doing to wildlife. A marvellous creature on human waste. PC- TN43 FB. pic.twitter.com/wWzBDmMv4n

— Parveen Kaswan, IFS (@ParveenKaswan)

ನಗರಗಳು ವಿಸ್ತಾರವಾಗುತ್ತಿರುವಂತೆ ಕಸದ ರಾಶಿಗಳು ತಮ್ಮ ಜಾಗವನ್ನು ವಿಸ್ತರಿಸಿಕೊಳ್ಳುತ್ತಿವೆ. ಕಸವನ್ನು ಸುರಿಯುವವರಿಗೆ ಅರಣ್ಯ ಪ್ರದೇಶದಲ್ಲಿರುವ ವಿಸ್ತಾರವಾದ ಜಾಗ ಸುಲಭವಾಗಿ ಸಿಗುತ್ತಿದೆ. ಆದರೆ ಈ ಕಸ ಹಾಗೂ ಇದರಲ್ಲಿರುವ ಪ್ಲಾಸ್ಟಿಕ್ ಮಾತ್ರ ಕಾಡು ಪ್ರಾಣಿಗಳ ಜೀವಕ್ಕೆ ಸಂಚಕಾರವನ್ನು ತರುತ್ತಿದೆ.  ಮಾನವ ಸೃಷ್ಟಿಸುವ ರಾಶಿ ರಾಶಿ ಕಸವು ಮುಗ್ದ ಜೀವಿಗಳ ಜೀವಕ್ಕೆ ಕುಂದು ತರುತ್ತಿದೆ, ಎಂದು ಪ್ರವೀಣ್ ಕಸ್ವಾನ್ ಟ್ವೀಟ್ ಮಾಡಿದ್ದಾರೆ. 

ಆನೆಯೊಂದು ಕಸದ ರಾಶಿಯನ್ನು ನೋಡುತ್ತಾ ನಿಂತು ತನ್ನ ಆಹಾರದ ಬಗ್ಗೆ ಚಿಂತೆ ಮಾಡುತ್ತಿರುವಂತೆ ಫೊಟೊ ಕಂಡು ಬರುತ್ತಿದೆ.

click me!