ಕಚ್ಚೆ ಕಟ್ಟಿ ಲೇಡಿ ಡಿಸಿ ಎತ್ತಿದ್ರು ಕಸದ ರಾಶಿ: ಈ ನಗರ ಆಗಿದೆ ಇದೀಗ ಸಸ್ಯಕಾಶಿ!

Published : Sep 29, 2018, 01:15 PM ISTUpdated : Sep 29, 2018, 04:44 PM IST
ಕಚ್ಚೆ ಕಟ್ಟಿ ಲೇಡಿ ಡಿಸಿ ಎತ್ತಿದ್ರು ಕಸದ ರಾಶಿ: ಈ ನಗರ ಆಗಿದೆ ಇದೀಗ ಸಸ್ಯಕಾಶಿ!

ಸಾರಾಂಶ

ಅತ್ಯಂತ ಕೊಳಚೆ ನಗರವಾಗಿದ್ದ ಪುಟ್ಟ ನಗರವೊಂದನ್ನು ಇಂದು ದೇಶದ ಸ್ವಚ್ಛ ನಗರವಾಗಿ ಪರಿವರ್ತನೆ ಮಾಡಿದ ಕೀರ್ತಿ ಈ ಮಹಿಳಾ ಜಿಲ್ಲಾಧಿಕಾರಿಯದ್ದು, ಅವರು ಮಾಡಿದ ಈ ಕೆಲಸಕ್ಕೆ ನಮ್ಮದೊಂದು ಸೆಲ್ಯೂಟ್. 

ಚತ್ತೀಸ್ ಗಢ :  2003ನೇ ಸಾಲಿನ ಐಎಎಸ್ ಅಧಿಕಾರಿಯಾಗಿ ಆಯ್ಕೆಯಾದ ರಿತು ಸೈನ್ ಮೊದಲು ಚತ್ತೀಸ್ ಗಢದ ಸರ್ಗುಜಾ ಜಿಲ್ಲೆಯ ಅಂಬಿಕಾಪುರಕ್ಕೆ 2014ರಲ್ಲಿ ಆಗಮಿಸಿದರು. 

ಈ ವೇಳೆ ಅಲ್ಲಿನ ಮುನಿಸಿಪಲ್ ಕಾರ್ಪೊರೇಷನ್ ಜನರು ಅವರನ್ನು ಸ್ವಾಗತ ಮಾಡಿದ ವೇಳೆ ಎದುರಿಗೆ ದೊಡ್ಡ ಕಸದ ರಾಶಿಯನ್ನು ಕಂಡರು. 

ಇಲ್ಲಿಗೆ ಆಗಮಿಸುತ್ತಿದ್ದಂತೆ ಕಸದ ರಾಶಿಯನ್ನು ಕಂಡ ಅಧಿಕಾರಿಗೆ ಮೊದಲು ತಮ್ಮ ಕೆಸಲ ನಗರವನ್ನು ಸುಂದರ, ಸ್ವಚ್ಛ ತಾಣವನ್ನಾಗಿ ಪರಿವರ್ತನೆ ಮಾಡುವುದು. 

ಅಂದು ಅವರು ಕಂಡ ಕನಸಿನಂತೆ ಅತ್ಯಂತ ಕೊಳಕಾಗಿದ್ದ ನಗರವನ್ನು ಇಂದು ಅತ್ಯಂತ ಸುಂದರ ನಗರವನ್ನಾಗಿ ಪರಿವರ್ತನೆ ಮಾಡಿದ ಹೆಗ್ಗಳಿಗೆ ಮಹಿಳಾ ಜಿಲ್ಲಾಧಿಕಾರಿಯದ್ದು. 

ಅಂಬಿಕಾಪುರದಲ್ಲಿ ಕಲೆಕ್ಟರ್ ಆಗಿ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ  ತಮ್ಮ ಮನಸ್ಸಿಗೆ ಬಂದ ಕಾರ್ಯವನ್ನು  ನಡೆಸಿಯೇ ತೀರಬೇಕು ಎಂದು ಯೋಚಿಸಿದೆ. ಅಲ್ಲದೇ ನಾನೇನು ಬಯಸಿದ್ದೆನೋ ಅದು ಇಂದು ಮಾಡಿದ್ದೇನೆ ಎನ್ನುತ್ತಾರೆ ರಿತು. 

ನಗರದಲ್ಲಿ 1,45000 ಜನಸಂಖ್ಯೆ ಇದ್ದು ಇದೊಂದು ಸವಾಲೇ ಆಗಿತ್ತು. ಆದರೆ ಇಂದು ಅತ್ಯಂತ ಕೊಳಕಾಗಿದ್ದ ನಗರ ಅತ್ಯಂತ ಸ್ವಚ್ಛ ನಗರವಾಗಿ ಪರಿಪೂರ್ಣವಾಗಿ ಬದಲಾಗಿದೆ ಎನ್ನುತ್ತಾರೆ.  ಅಲ್ಲಿದ್ದ 16 ಎಕರೆಯಷ್ಟು ಡಂಪಿಂಗ್ ಯಾರ್ಡ್ ಇಂದು ಸ್ಯಾನಿಟೇಶನ್ ಅವೇರ್ನೆಸ್ ಪಾರ್ಕ್ ಆಗಿ ಬದಲಾವಣೆ ಮಾಡಲಾಗಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಎಕ್ಸ್‌ಪ್ರೆಸ್‌ವೇಯಲ್ಲಿ ಭೀಕರ ಅಪಘಾತ: 7 ಬಸ್ 3 ಕಾರುಗಳ ಮಧ್ಯೆ ಸರಣಿ ಅಪಘಾತ : ನಾಲ್ವರು ಬೆಂಕಿಗಾಹುತಿ
ಕೇಂದ್ರ, ಮೋದಿ ಮಾಡಿದ್ದೆಲ್ಲ ತಪ್ಪು ಎನ್ನಲಾಗದು, Vote Chori ಆರೋಪದಿಂದ ಕಾಂಗ್ರೆಸ್‌ನ ನೈತಿಕತೆ ಕುಸಿತ!