ಕಳೆದ 30 ವರ್ಷಗಳಿಂದ ಟೀ ಬಿಟ್ಟರೆ ಬೇರೆನೂ ತಿನ್ನದ ಅಜ್ಜಿ!

Published : Jan 13, 2019, 08:49 AM IST
ಕಳೆದ 30 ವರ್ಷಗಳಿಂದ  ಟೀ ಬಿಟ್ಟರೆ ಬೇರೆನೂ ತಿನ್ನದ ಅಜ್ಜಿ!

ಸಾರಾಂಶ

ಇದೆಂಥಾ ಅಚ್ಚರಿ! ಕಳೆದ 30 ವರ್ಷಗಳಿಂದ ಟೀ ಬಿಟ್ಟರೆ ಬೇರೇನನ್ನೂ ತಿನ್ನದ ಛತ್ತೀಸ್‌ಗಢ ಅಜ್ಜಿ! ಈ ಮಹಿಳೆಯನ್ನು ’ಚಹಾ ಮಹಿಳೆ’ ಎಂದೇ ಕರೆಯಲಾಗುತ್ತದೆ. 

ಕೊರಿಯಾ (ಛತ್ತೀಸ್‌ಗಢ): ಟೀ ಅಂದ್ರೆ, ಯಾರಿಗೆ ತಾನೇ ಇಷ್ಟವಿಲ್ಲ? ಆದರೆ, ದಿನಕ್ಕೆ ಎಷ್ಟೇ ಟೀ ಕುಡಿದರೂ, ಆಹಾರ ಸೇವಿಸದೇ ಇರುವುದಿಲ್ಲ. ಆದರೆ, ಛತ್ತೀಸ್‌ಗಢದ ಕೊರಿಯಾ ಜಿಲ್ಲೆಯ ಬರದಿಯಾ ಗ್ರಾಮದ ಪಿಲ್ಲಿ ದೇವಿ(44) ಎಂಬ ಮಹಿಳೆ ಕಳೆದ 30 ವರ್ಷಗಳಿಂದ ಟೀ ಕುಡಿಯುವುದನ್ನು ಬಿಟ್ಟರೆ, ಬೇರೇನೂ ತಿಂದಿಲ್ಲ.

ಈ ಹಿನ್ನೆಲೆಯಲ್ಲಿ ಪಿಲ್ಲಿದೇವಿ ಅವರನ್ನು ‘ಚಹಾ ಮಹಿಳೆ’ ಎಂದೇ ಕರೆಯಲಾಗುತ್ತದೆ. ಟೀ ಕುಡಿಯುವ ಕಾಯಿಲೆಗೆ ಚಿಕಿತ್ಸೆ ಕೊಡಿಸಲು ಪಿಲ್ಲಿದೇವಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ ಎಂದು ಮಹಿಳೆ ಸಹೋದರ ಬಿಹಾರಿ ಲಾಲ್‌ ರಜ್ವಾಡೆ ತಿಳಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಮಹಿಳೆ ತಂದೆ ರತಿರಾಮ್‌, ತಮ್ಮ ಮಗಳು 6ನೇ ತರಗತಿ ಓದುವಾಗಲೇ ಆಹಾರ ಸೇವಿಸಿದ್ದನ್ನು ತ್ಯಜಿಸಿದರು. ಮೊದಲಿಗೆ ತಮ್ಮ ಮಗಳು ಹಾಲಿನ ಜೊತೆ ಬ್ರೆಡ್‌ ಮತ್ತು ಬಿಸ್ಕಟ್‌ಗಳನ್ನು ನೀಡಲಾಗುತ್ತಿತ್ತು. ಆದರೆ, ಕಾಲ ಕ್ರಮೇಣ ಪಿಲ್ಲಿದೇವಿ ಅವರು ಬಿಸ್ಕಟ್‌ ಮತ್ತು ಬ್ರೆಡ್‌ಗಳಿಗೆ ಗುಡ್‌ಬೈ ಹೇಳಿ, ಕೇವಲ ಕಪ್ಪು ಟೀ ಕುಡಿಯುವುದನ್ನು ರೂಢಿಸಿಕೊಂಡರು ಎಂದಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಮುಖ್ಯಮಂತ್ರಿ ಅಧಿಕಾರ ಹಸ್ತಾಂತರದ ಬಗ್ಗೆ ನಮಗೆ ಏನೂ ಗೊತ್ತಿಲ್ಲ: ಸಚಿವ ರಾಮಲಿಂಗಾರೆಡ್ಡಿ
ಡಿಕೆ ಶಿವಕುಮಾರ್‌ಗೆ ಕೇಂದ್ರ ನಾಯಕತ್ವ ಸ್ಥಾನ : ಕಾಂಗ್ರೆಸ್‌ನಲ್ಲಿ ಕೂಗು